ಡೈರಿಯ ಕೆಲವು ಹಾಳೆಗಳು - ಭಾಗ ೯

ಡೈರಿಯ ಕೆಲವು ಹಾಳೆಗಳು - ಭಾಗ ೯

ದಿನಾಂಕ:೨೭-ಫೆಬ್ರವರಿ
ಅವನು:
ಈ ತಿಂಗಳು ಪೂರ್ತಿ ನನಗೆ ರಾತ್ರಿ ಪಾಳೆಯ ಕೆಲಸ ಇದ್ದಿದರಿಂದ ನಾನು ಬಸ್ಸಿನ ಬದಲು ಕಾರಿನಲ್ಲಿ ಓಡಾಡುತ್ತಿದ್ದೆ. ನಾನು ಕೆಲಸ ಮಾಡುತ್ತಿದ್ದ ಸಮಯ ಸಂಜೆ ೪ ರಿಂದ ಮುಂಜಾನೆ ೨.೩೦ ರ ವರೆಗೆ, ಹಾಗಾಗಿ ಬೆಳಗ್ಗೆ ಕೆಲಸ ಮಾಡುತ್ತಿದ್ದವರ ಜೊತೆ ನನ್ನ ಸಂಪರ್ಕ ತಪ್ಪಿ ಹೋಗಿತ್ತು. ಕೇವಲ ನನ್ನ ಸಹ ಕೆಲಸಗಾರರು ಹೋಗುವುದಕ್ಕಿಂತ ಮುಂಚೆ ನನಗೆ ಕೆಲಸದ ಬಗ್ಗೆ ವಿವರಿಸಿ ಹೋಗುತ್ತಿದ್ದರು.
ಈ ತಿಂಗಳು ಪೂರ್ತಿ ನಾನು ಬಸ್ಸಿನಲ್ಲಿ ಪ್ರಯಾಣ ಮಾಡಲಿಲ್ಲ. ಸ್ವಾಭಾವಿಕವಾಗಿ ನನಗವಳನ್ನು ನೋಡಲು ಆಗಲೇ ಇಲ್ಲ. ಅವಳು ನನ್ನ ಪಕ್ಕದ ಕಟ್ಟಡದಲ್ಲೇ ಕೆಲಸ ಮಾಡ್ತಾಳೆ, ಆದ್ರೆ ಅವಳಿರುವ ಕೋಣೆ ಯಾವುದು ಅಂತ ನಂಗೆ ಗೊತ್ತಿಲ್ಲ, ನನಗೆ ಗೊತ್ತಾದ್ರು ಕೂಡ ನಾನು ಹೋಗಿ ಅವಳನ್ನ ಮಾತನಾಡಿಸುತ್ತಿದೆ ಅಂತ ನಂಗೆ ಅನ್ನಿಸೋಲ್ಲ. ಅಷ್ಟು ಧೈರ್ಯ ನನ್ನಲಿಲ್ಲ.

ಸುಮಾರು ಒಂದು ತಿಂಗಳು ನಾನವಳನ್ನು ನೋಡಲಿಲ್ಲ, ಆದ್ರೆ ನಂಗೆ ಅವಳನ್ನ ನೋಡಬೇಕು ಅಂತಾ ಕಾತುರತೆಯು ನನ್ನಲಿಲ್ಲ. ನನಗೆ ಗೊತ್ತಿಲ್ಲದೇನೆ ನಾನು ಈ ವಿಷಯದಲ್ಲಿ ಗಟ್ಟಿಯಾಗಿದ್ದೇನೆ. ಆ ಸಂಜೆ ನಡೆದ ಘಟನೆ ಈ ನನ್ನ ಮನಸ್ಥಿತಿಗೆ ಕಾರಣವಾ?

ದಿನಾಂಕ:೨೮-ಫೆಬ್ರವರಿ
ಅವನು:
ಇವತ್ತು ನನ್ನ ಆಫಿಸ್ಸಿನ ಆವರಣದಲ್ಲಿ ಒಂದು ಚಲನಚಿತ್ರ ಪ್ರದರ್ಶಿಸುವವರಿದ್ದರು. ಈ ಮುಂಚೆ ಆ ಚಿತ್ರ ನೋಡಿದರು ಕೂಡ ಸ್ನೇಹಿತರ ಜೊತೆ ಸಂಭ್ರಮಿಸೋಣ ಅಂತಾ ನನ್ನ ಅಧಿಕಾರಿಗಳ ಹತ್ತಿರ ಹೇಳಿ ಬಂದೆ. ಸಂಭಾಷಣೆ ಸರಿಯಾಗಿ ಕೇಳಿಸುತ್ತಿರಲಿಲ್ಲ, ಆದ್ರೆ ಹಸಿರು ಹುಲ್ಲಿನ ಮೇಲೆ ಕುಳಿತು ಓಪನ್ ಥಿಯೇಟರ್ ನಲ್ಲಿ ಚಿತ್ರ ನೋಡುವುದಕ್ಕೆ ಮಜಾ ಬಂತು. ಇನ್ನೇನು ನಾನು ಕೆಲಸಕ್ಕೆ ಮರಳಬೇಕು ಅನ್ನುವಷ್ಟರಲ್ಲೇ ಕೇವಲ ಹತ್ತು ಅಡಿ ದೂರದಲ್ಲೇ ಅವಳು ನಿಂತಿದ್ದಳು.

ನನಗೆ ಗೊತ್ತಿಲ್ಲದ ಹಾಗೆ ನನ್ನ ಹೃದಯದ ಬಡಿತ ಶುಮಾಕರ್ ಫೆರಾರಿ ಗಿಂತ ಜೋರಾಗಿ ಓಡಲು ಶುರುವಾಯಿತು. ನನ್ನ ಹಿಂದೆ ಇರೋ ಯಾರಿಗೋ ಅವಳು ನಗೆ ಸೂಸಿದಂತಾಯಿತು, ನನ್ನ ಕಡೆ ನೀರವಾಗಿ ನೋಡಬಾರದು ಅಂತಾ ಬಹಳ ಪ್ರಯತ್ನ ಪಟ್ಟಳು. ಹಾಗೆ ಅವಳು ಅಲಿಂದ ಹೊರತು ಹೋದಳು.
ನಾನು ಕ್ಷಣ ಕಾಲ ಏನು ನಡೆಯಿತು ಅಂತಾ ಯೋಚಿಸುತ್ತಾ ಅಲ್ಲೇ ನಿಂತು ಬಿಟ್ಟೆ.
ಅವಳು ಯಾಕೆ ನಕ್ಕಳು? ನಾನಿನ್ನು ಇದೆ ಕಂಪನಿಯಲ್ಲಿ ಇದ್ದೇನೆ ಅನ್ನೋ ಖುಷಿಗೋ ಅಥವಾ ನನ್ನನ ಕೇರ್ ಮಾಡದೆ ನಿಜವಾಗಲೂ ನನ್ನ ಹಿಂದುಗಡೆ ಇದ್ದ ಯಾರಿಗೋ ಕೈ ಬೀಸಿದಳೋ? ಆದ್ರೆ ನಾವಿಬ್ರು ಎಷ್ಟು ಹತ್ತಿರದಲ್ಲಿದ್ವಿ ಅಂದ್ರೆ ಅವಳು ನನ್ನನ್ನ ಗಣನೆಗೆ ತಗೊಳ್ದೇಇರೊಕೆ ಸಾಧ್ಯವೇ ಇರಲಿಲ್ಲ.

ಅವಳು:
ಇವತ್ತು ಅವನನ್ನ ಚಲನಚಿತ್ರ ತೋರಿಸ್ತಿದ್ದ ಜಾಗದಲ್ಲಿ ನೋಡಿದೆ. ದೇವ್ರೇ ನಿನಗೆ ಕೋಟಿ ವಂದನೆಗಳು, ಅವನಿನ್ನೂ ಇದೆ ಕಂಪನಿಯಲ್ಲಿದ್ದಾನೆ. ನನಗೆ ಅವನನ್ನ ನೋಡಿ ಅವನಿಗೆ ಮಾತಾಡಿಸಬೇಕು ಅಂತಾ ಅನ್ನಿಸ್ತು. ಅವನನ್ನ ಮತ್ತೆ ನೋಡಿ ನನಗೆ ಬಹಳ ಖುಷಿ ಆಯಿತು, ನೀನು ಇಷ್ಟು ದಿನ ಎಲ್ಲಿದ್ದೆ, ನಿನಗೆ ಹುಷಾರು ಇರಲಿಲ್ವ, ನೀನು ಮನೆಯನ್ನೆನಾದ್ರು ಬದಲಾಯಿಸಿದಿಯ ಅಥವಾ ದಿನ ಆಫಿಸ್ಸಿಗೆ ಬೈಕ್ನಲ್ಲಿ ಬರ್ತೀಯ ಅಂತಾ ಕೇಳ್ಬೇಕು ಅನ್ನಿಸ್ತು. ಆದ್ರೆ ನಾನು ನನ್ನ ಬಾಯಿ ಸಹಿತ ಬಿಚ್ಚಲಿಲ್ಲ. ನಾನು ಸುಮ್ಮನೆ ನಿಂತುಬಿಟ್ಟೆ. ಅವನನ್ನ ಮತ್ತೆ ಮುಜುಗರಕ್ಕೆ ಈಡು ಮಾಡುವುದು ನನಗೆ ಬೇಡವಾಗಿತ್ತು.
ನಾನವನ ಬಗ್ಗೆ ಏನು ಯೋಚಿಸುತ್ತಿನೋ ಗೊತ್ತಿಲ್ಲ, ಆದ್ರೆ ಅವನನ್ನ ನೋಡಿದಾಗಲೆಲ್ಲ ನನ್ನ ಮನಸ್ಸು ಹೂವಿನಂತೆ ಅರಳುತ್ತೆ. ಅವನು ಮತ್ತೆ ನಮ್ಮ ಬಸ್ಸಿನಲ್ಲೇ ಬರಲಿ. ದಿನ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಬಹುದು, ಬಾಯಿಬಿಟ್ಟು ಶುಭಾಷಯ ಹೇಳ್ದಲೇ ಇದ್ರೂ ಕಣ್ಣಿನಲ್ಲೇ ವಿನಿಮಯ ಮಾಡಿಕೊಳ್ತೇವೆ.

ದಿನಾಂಕ:೫-ಮಾರ್ಚ್
ಅವನು:
ನಾನು ಮತ್ತೆ ಮಾಮೂಲಿನಂತೆ ಬೆಳಗ್ಗಿನ ಸಮಯದ ಕೆಲಸಕ್ಕೆ ವಾಪಸ್ಸು ಬಂದೆ. ಮತ್ತೆ ಎಲ್ಲ ಪರಿಚಿತರನ್ನು ನೋಡಲು ಖುಷಿ ಅನ್ನಿಸ್ತು. ಅದ್ರು ನನ್ನ ಕಣ್ಣುಗಳು ಒಂದು ಮುಖವನ್ನ ಮಾತ್ರ ಪ್ರತ್ಯೇಕವಾಗಿ ಹುಡುಕುತ್ತಿದ್ದವು.
ಎಂದಿನಂತೆ ದಿನಚರಿಯಂತೆ ನಾನಿವತ್ತು ಬಸ್ಸನ್ನು ಹತ್ತಿದೆ. ಅವಳು ಮುಖದಲ್ಲಿ ಯಾವುದೇ ಭಾವವನ್ನು ತೋರಿಸದೇ ಶೂನ್ಯದಲ್ಲಿ ದೃಷ್ಟಿಸುತ್ತ ಕುಳಿತಿದ್ದಳು, ಆದ್ರೆ ಯಾವಾಗ ಅವ್ಳು ನನ್ನ ನೋಡಿದಲೋ ಅವಳ ಮುಖದಲ್ಲಿ ನಗೆ ಚಿಲುಮೆಯಂತೆ ಚಿಮ್ಮಿ ಬಂತು. ನಾನು ಮತ್ತೆ ಬಸ್ಸಿನಲ್ಲಿ ಬಂದಿದಕ್ಕೆ ಅವಳು ಖುಷಿಗೊಂಡಳಾ? ಗೊತ್ತಿಲ್ಲ, ಆದ್ರೆ ಅವಳನ್ನ ನೋಡಿ ನನಗಂತೂ ಖುಷಿ ಆಯಿತು. :-)

ಅವಳು:
ನನಗಂತೂ ಬಹಳ ಸಂತೋಷವಾಯಿತು, ನನಗಾದ ಸಂತೋಷವನ್ನ ಅದುಮಿಟ್ಟುಕೊಳ್ಳಲು ಬಹಳ ಪ್ರಯತ್ನ ಪಟ್ಟೆ. ನನ್ನ ಜಾಗದಿಂದ ಎದ್ದು ಹೋಗಿ ಅವನ ಪಕ್ಕ ಕುಳಿತುಕೊಂಡು ಮಾತು ಆಡ್ತಾ, ಆಡ್ತಾ ಹೀಗೆ ಮಾತಾಡ್ತಾನೆ ಇರ್ಬೇಕು ಅನ್ನಿಸ್ತು. .
ಹೇಯ್ ಇದೇನಿದು? ನನಗೆನಾಗ್ತಿದೆ? ಹೀಗೆ ನನಗೆ ಬೇರೆಯವರ ಬಗ್ಗೆ ಯಾವತ್ತು ಅನ್ನಿಸಿದ್ದಿಲ್ಲ. ಇದು ಕೇವಲ ಆವತ್ತು ಸಂಜೆ ನಡೆದ ಗಹ್ತನೆಯ ಬಗ್ಗೆ ಇರುವ ಸಿಂಪಥಿಯಾ ಅಥವಾ ನಿಜಾವದ ಪ್ರೀತಿಯಾ? ಸಾಧ್ಯವೇ ಇಲ್ಲ. ನನಗೆ love at first sight ಅನ್ನೋದರಲ್ಲಿ ನಂಬಿಕೆಯೇ ಇಲ್ಲ. ನಮ್ಮಿಬ್ಬರಿಗೂ ಪರಿಚಯವೇ ಇಲ್ಲ, ಪರಸ್ಪರರ ಬಗ್ಗೆ ಏನು ಗೊತ್ತಿಲ್ಲ, ಹಾಗಾದ್ರೆ ಇದು ಪ್ರೀತಿ ಇರೋಕೆ ಹೇಗೆ ಸಾಧ್ಯ? ಪ್ರಾಯಶಃ ಇದು ನಾನು ಕೊಟ್ಟುಕೊಳ್ಳುತ್ತಿರುವ ಸಮಜಾಯಿಷಿ, ಏನಾದ್ರೂ ಇರಲಿ, ಆದ್ರೆ ಈ ಮಧುರ ಭಾವನೆಯನ್ನು ತುಂಬ ಇಷ್ಟ ಪಡ್ತೀನಿ. :-)

Rating
No votes yet

Comments