ತಂಗಳು ಬದುಕಿನ ಮಳೆ
ತಂಪು ಹರಡಿದ್ದ ಊಟದ ಹಾಲ್ ನಲ್ಲಿ, ಸೊಗಸಾದ ಊಟ ಶುರುವಾಗಿತ್ತು. ದಂಪತಿಗಳು ದುಡಿಯುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸದೇನನ್ನೋ ಶೋಧಿಸುವ ಉತ್ಸಾಹದಲ್ಲಿದ್ದರು. ಬದುಕು ಹೀಗೆ ಇರಬೇಕಿಲ್ಲ. ಹೀಗೂ ಇರುವುದು ಬದುಕಿನ ಪೂರ್ಣತೆಗೆ ಸಹಕಾರಿ ಅನ್ನುವುದನ್ನು ಹೊಸ ಪೀಳಿಗೆಗೆ ದಾಟಿಸುವ ಜವಾಬ್ದಾರಿ ತಮಗಿದೆ.ಯೋಜನೆಗಳನ್ನು ದಂಪತಿಗಳು ವಿವರಿಸುತ್ತಿದ್ದರು. ಇಬ್ಬರೂ ಪ್ರೌಢ ವಯಸ್ಸನ್ನು ಹೊಂದಿದ್ದರು. ದುಡಿಯುತ್ತಿದ್ದಾಗ ಬರುತ್ತಿದ್ದ ಆದಾಯ ಈಗ ಇಲ್ಲ. ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಇದ್ದ ಬದ್ದ ಉಳಿತಾಯದ ಹಣ ಉಪಯೋಗಿಸುತ್ತಿದ್ದರು. ಹಣ ಖಾಲಿಯಾಗುತ್ತಿರುವ ಚಿಂತೆ ಪತ್ನಿಯನ್ನು ಕಾಡುತ್ತಿರುವ ಮಾತು ಬಂತು. ಪತಿ ನಿಶ್ಚಿಂತ ಇದ್ದ ಹಾಗೇ ಕಂಡಿತು. ಇಬ್ಬರೂ ಹಕ್ಕಿಯಂಥ ಹಗುರ ದೇಹದ ಜೋಡಿಯಾಗಿದ್ದರು. ದಿನದ ಖರ್ಚನ್ನು ನಿಭಾಯಿಸಲು, ಇಬ್ಬರೂ ತಿಂಗಳಿಗೊಮ್ಮೆ, ಒಬ್ಬೊಬ್ಬರು ಆರು ತಾಸು ಸಮಾಜ ಸೇವೆ ವಿಷಯವನ್ನು ಭೋದಿಸುವ ಕಾಲೇಜಿನಲ್ಲಿ ದುಡಿಯುತ್ತಿದ್ದರು. ಉಳಿದ ಸಮಯದಲ್ಲಿ ತಾವು ಕನಸು ಕಾಣುತ್ತಿರುವ ಪ್ರೊಜೆಕ್ಟನ್ನು ನನಸಾಗಿಸಲು ಸಮಯದ ಇತಿ ಮಿತಿ ಇಲ್ಲದೆ ದುಡಿಯುತ್ತಿದ್ದರು. ಹಿಂದೆ ಹಣ ಸಂಪಾದನೆಗೆ ಇಬ್ಬರೂ ದುಡಿಯುತ್ತಿದ್ದಾಗ ಬರುತ್ತಿದ್ದ ಮಾಸಿಕ ಆದಾಯ ಬಹು ದೊಡ್ಡ ಮೊತ್ತವಾಗಿತ್ತು. ಈಗ ಬದುಕಿರಲಿಕ್ಕೆ ಸಾಕಗುವಷ್ಟು ಮಾತ್ರ ಸಂಪಾದನೆಯಾಗಿತ್ತು. ಪತಿ ನಿಟ್ಟುಸಿರು ಇಲ್ಲದೆ ಒಪ್ಪಿಕೊಂಡ. ಪತ್ನಿಗೆ ಒಮ್ಮೆ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿತ್ತು. ಪತಿಯ ನಿರಾಳತೆ ಸಮಾಧಾನ ಕೊಡುತ್ತಿತ್ತು. ದಂಪತಿಗಳು ಇನ್ನೂ ಯುವಕರಾಗಿದ್ದಾಗ ವಾರದ ರಜೆಯಲ್ಲಿ ನಾಲ್ನುರು ಐನೂರು ಕಿಲೋ ಮೀಟರು ಬೈಕು ಪ್ರಯಾಣ ಮಾಡುತ್ತಿದ್ದದ್ದು ವಿವರಿಸಿದರು. ಹಿಂದೆ ಪತ್ನಿ ದುಡಿಯುತ್ತಿದ್ದ ಸಂಸ್ಥೆಯಲ್ಲಿ ವಿನಾಕಾರಣ ಕಿರುಕುಳ ಕೊಟ್ಟದರ ವಿರುದ್ಧ ಹಾಕಿದ ಕೋರ್ಟ್ ಕೇಸಿನಲ್ಲಿ ತೀರ್ಪು ತಮ್ಮ ಪಾಲಿಗೆ ಜಯ ನೀಡಿದ್ದು ವಿವರಿಸಿದರು. ಪ್ರತಿಷ್ಟಿತ ಸಂಸ್ಥೆ ಸೋತದ್ದು ನ್ಯಾಯಕ್ಕೆ ಸಿಕ್ಕಿದ ಗೆಲುವು, ಪತ್ನಿಯ ಮುಖದಲ್ಲಿ ಆಷ್ಚರ್ಯವಿತ್ತು. ಗೆದ್ದದ್ದಕ್ಕೆ ಖುಷಿಯಿತ್ತು. ಹೊಸ ರೆಸ್ಟುರಾದಲ್ಲಿ ಸಣ್ಣ ದನಿಯಲ್ಲಿ ಇನ್ಸ್ಟ್ರುಮೆಂಟಲ್ ಸಂಗೀತ ಹರಿದು ಬರುತ್ತಿತ್ತು. ಪ್ರೊಜೆಕ್ಟಲ್ಲಿ ಇದುವರೆಗೆ ಮಾಡಿದ ಸಾಧನೆಗಳನ್ನು ವಿವರಿಸಿದರು. ಅದರ ಬಗ್ಗೆ ತ್ರಪ್ತಿ ಇದ್ದ ಹಾಗೇ ತೋರುತ್ತಿತ್ತು. ಊಟ ಮುಗಿಸಿದವರು ಎದ್ದು ಹೋಗುತ್ತಿದ್ದರು. ಹೊಸದಾಗಿ ಪ್ರವೇಷಿಸಿದ ಗಿರಾಕಿಗಳಿಗೆ ಫುಲ್ ಸೂಟಿನಲಿದ್ದ ಯುವಕ ಸ್ವಾಗತ ಕೋರಿ ಮೆನು ಕಾರ್ಡ್ ಕೊಡುತ್ತಿದ್ದ. ಆರ್ಡರ್ ತೆಗೆದುಕೊಂಡ ನಂತರ, ಮತ್ತೆ ಹೊಸದಾಗಿ ಪ್ರವೇಷಿಸುವ ಗಿರಾಕಿಗಳನ್ನು ಕಾಯುತ್ತಾ ಮಂದ ಬೆಳಕಿನ ಡೈನಿಂಗ್ ಹಾಲಿನ ಮೂಲೆಯಲ್ಲಿ ಶಿಸ್ತಿನಿಂದ ಕಾಯುತ್ತಿದ್ದ. ಊಟ ಮುಗಿದಿತ್ತು. ಇನ್ನೇನಾದರೂ ಬೇಕಾಗಿದೆಯೇ ಸೂಟುಧಾರಿ ಯುವಕ ವಿಚಾರಿಸಿದ. ಬಿಸಿನೀರು ತುಂಡು ಲಿಂಬೆಯಿದ್ದ ಬೌಲಿನಲ್ಲಿ ಬೆರಳು ಅದ್ದಿ ಪೇಪರ್ ನ್ಯಾಪ್ಕಿನ್ ನಲ್ಲಿ ಒರಸಿ, ಹೊರಡುವ ತಯಾರಿಯಲ್ಲಿರುವಾಗ ಊಟದ ಬಿಲ್ಲ್ ಬಂತು. ಪತಿಯೇ ಬಿಲ್ಲಿನ ಹಣ ಪಾವತಿಸಿದ. ಮಾತು ಸಾಗಿತ್ತು. ಪ್ರೊಜೆಕ್ಟಿಗೆ ಸಂಭಂದಿಸಿದ ಮಕ್ಕಳ ಜೊತೆಗೆ ಪ್ಲಾಸ್ಟಿಕ್ ಹೆಕ್ಕಿದ್ದು. ಬರೇ ನೆಲದಲ್ಲಿ ಕೂತದ್ದು. ಗುಡ್ಡಗಾಡು ಜನಾಂಗವೊಂದರ ವಾಸ ಸ್ಥಳದಲ್ಲಿ ಅವರ ಆಹಾರವೇ ಸೇವಿಸಿ ಒಂದು ದಿನ ಕಳೆದದ್ದು. ಮಕ್ಕಳು ಸಂಭ್ರಮಿಸಿದ್ದು. ಖುಷಿ ಪಟ್ಟದ್ದು. ಖುಷಿಯಾಗಿದ್ದದ್ದು ವಿವರಿಸಿದರು. ಬೈಕು ಹತ್ತಿ ದಂಪತಿ ಹೊರಟರು. ಹೊರಗೆ ಬಿಸಿಲಿತ್ತು. ದಿನದ ದುಡಿತ ಸಾಗಿತ್ತು. ಕಿವಿಗೆ ಇಷ್ಟು ಬಿತ್ತು.
Comments
ಉ: ಕನಸಿನ ಕೂಸಿಗೆ ಉಸಿರು
ಉ: ತಂಗಳು ಬದುಕಿನ ಮಳೆ