ತಂಗಿಗಾಗಿ
ಹತ್ತು ದಿನಗಳು ಅದೃಷ್ಟ ಹತ್ತಿತ್ತು ಬೆನ್ನು,
ಸಂತೋಷವಾಗಿತ್ತು ಸಿಕ್ಕಷ್ಟು ಕುಡಿಕೆ ಹೊನ್ನು,
ಪರಿಚಯವಾದಳು ತಂಗಿ ವನಿತಾ, ನನ್ನ ಪ್ರೀತಿಯ ವನ್ನು.
ಏಳೆಂಟು ದಿನಗಳಲ್ಲಿ ಆಗಿತ್ತು ಬೆಟ್ಟಿ
ಮನದ ಸಹೋದರಿ ಸ್ಥಾನದಲ್ಲವಳು ಗಟ್ಟಿ,
ಅವಳೇ ತಂಗಿ ಶ್ರೀದೇವಿ, ನನ್ನ ಪ್ರೀತಿಯ ಪುಟ್ಟಿ.
ನನ್ನ ಕೈಗೆ ಹಾಕಿದ ರಕ್ಷಾ ಬಂಧನ,
ಶೋಭಿಸಿಲ್ಲ ಕೇವಲ ನನ್ನ ಕೈಯನ್ನ,
ಸಹೋದರತೆ ಪ್ರೀತಿಯಿಂದ ಬಂಧಿಸಿತೆನ್ನ ಮನವನ್ನ,
ಹೀಗಿರಲು ನಾ ಮರೆಯಲು ಸಾದ್ಯವೇ ನಿಮ್ಮನ್ನ?
ಓ ನನ್ನ ತಂಗಿ,
ನೀ ನನ್ನ ಹೃದಯದಾ ಅಂಗಿ,
ಹೋಗಲಾರೆ ಮನದಿಂದ ನೀ ದೂರಗಿ,
ಹೋದರೆ ನಾ ಬೀಳುವೆ ಹೆಣವಾಗಿ.
Rating