ತಂದೆ ತಾಯಿ ಮತ್ತು ಮಕ್ಕಳು

ತಂದೆ ತಾಯಿ ಮತ್ತು ಮಕ್ಕಳು

ನಾನೂ ಒಬ್ಬ ತಂದೆಯಾಗಿ ನಿನ್ನೆ ಕನ್ನಡ ಪ್ರಭದಲ್ಲಿ (15-09-2007 -ಸಖಿ)-ಮೆಚ್ಚಿಕೊಂಡ ಲೇಖನ [http://kannadaprabha.com/NewsItems.asp?ID=KP720070914025222&Title=Sakhi&lTitle=%D1%DAT&Topic=0&Dist=0| ಗುರಿ ಅವರದಾಗಿರಲಿ, ಗುರು ನೀವಾಗಿರಿ ಸಾಕು]ಮಕ್ಕಳು ಮತ್ತು ಹೆತ್ತವರ ಬಗ್ಗೆ ಖಲೀಲ್ ಗಿಬ್ರಾನ್ ಹೇಳಿದ್ದನ್ನೂ ಬಾಕ್ಸ್ ಮಾಡಿ ಲೇಖನಕ್ಕೆ ಹೈಲೈಟ್ ಮಾಡಿದ್ದಾರೆ-
*ಮಕ್ಕಳು ನಿಮ್ಮ ಮಕ್ಕಳಲ್ಲ. ಬದುಕಿಗಾಗಿ ಬದುಕು ತುಡಿದ ಫಲ ಅವರು.
* ಅವರು ನಿಮ್ಮ ಮೊಲಕ್ ಬಂದವರು ಹೌದು, ನಿಮ್ಮಿಂದ ಬಂದವರಲ್ಲ. ಅವರು ನಿಮ್ಮೊಂದಿಗಿರುತ್ತಾರೆ. ಆದರೆ, ನಿಮಗೆ ಸೇರಿದವರಲ್ಲ.
* ನೀವು ಅವರಿಗೆ ಪ್ರೀತಿ ಕೊಡಬಲ್ಲಿರಿ, ನಿಮ್ಮ ಚಿಂತನೆಗಳನ್ನಲ್ಲ.
* ಅವರ ದೇಹಕ್ಕೆ ನೀವು ಆಸರೆ ಕೊಡಬಲ್ಲಿರಿ, ಆತ್ಮಕ್ಕಲ್ಲ.
* ನಾಳೆಯ ಮನೆಯಲ್ಲಿ ಅವರ ಆತ್ಮ ವಾಸಿಸುತ್ತಿದೆ. ಅದನ್ನು ನೀವು ಭೇಟಿ ಮಾಡಲಾರಿರಿ, ನಿಮ್ಮ ಕನಸಲ್ಲೂ ಕೂಡ.
* ನೀವು ಅವರಂತಾಗಲು ಪ್ರಯತ್ನಿಸಬಹುದು. ಆದರೆ ನಿಮ್ಮಂತಾಗಲು ಅವರನ್ನು ಒತ್ತಾಯಿಸಬೇಡಿ.
* ನೀವು ಬಿಲ್ಲು, ಅದರಿಂದ ನಿಮ್ಮ ಮಕ್ಕಳೆಂಬ ಬಾಣಗಳು ಮುಂದೆ ಸಾಗುತ್ತವೆ.
* ಬಾಣಗಳಿಗಾಗಿ ಗುರಿಕಾರನ ಕೈಯಲ್ಲಿ ನೀವು ಬಾಗಿದರೂ ಅದಕ್ಕೆ ಸಂತಸವಿರಲಿ. ಹಾರಿಹೋಗುವ ಬಾಣಗಳನ್ನು ಆತ ಪ್ರೀತಿಸುವಂತೆಯೆ ಸ್ಥಿರವಾಗಿರುವ ಬಿಲ್ಲನ್ನೂ ಪ್ರೀತಿಸುತ್ತಾನೆ.
ವಿದ್ಯಾರಶ್ಮಿಯವರು ತಮ್ಮ ಈ ಲೇಖನದ ಕೊನೆಯಲ್ಲಿ ಹೀಗೆ ಹಳುತ್ತಾರೆ-
”...ಏಕೆಂದರೆ ಅವರು ಪ್ರಕೃತಿಯ  ಮಕ್ಕಳು. ಪ್ರತಿಯೊಂದು ಮಗುವಿಗೂ ತನ್ನದೇ ಆದ ಆಸಕ್ತಿ, ಸಾಮರ್ಥ್ಯ, ಪ್ರತಿಭೆ ಇದ್ದೇ ಇರುತ್ತದೆ. ಇಲ್ಲಿ ಆ ಮಗುವಿನ ಆಸಕ್ತಿಯೆ ಮುಖ್ಯ.
ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧ ರಹಿತ ಪ್ರೀತಿ ನೀಡುವುದು ಮಾತ್ರ ಹೆತ್ತವರ ಕರ್ತವ್ಯ ಇದುವೇ ನಾವು ಅವರಿಗೆ ಕೊಡುವ ಸ್ವಾತಂತ್ರ್ಯ.”

ಆದರೆ, ಅವರು ಪ್ರಕೃತಿಯ ಮಕ್ಕಳು ಮಾತ್ರವಲ್ಲ ಬೆಳೆದಂತೆ ಅವರು ಈ ಸಾಮಾಜದ ಮಕ್ಕಳು, ಈ ವಿಶ್ವದ ಮಕ್ಕಳು. ಆದ್ದರಿಂದ, ಅವರಿಗೆ ನಾವು ಯಾವ ನಿರ್ಬಂಧವನ್ನೂ ಹಾಕಬಾರದು. ನಿಜ. ಅವರು ಸಾಫ್ಟ್ ವೇರಿಗಳೆ ಆಗಲಿ, ಆಟೋವೇರಿಗಳೆ ಆಗಲಿ, ಅವರು ಏನಾದರೂ ಆಗಲಿ- ನಮ್ಮ ರಾಷ್ಟ್ರ ಕವಿ ಕುವೆಂಪು ಅವರು ಹೇಳುವ ಹಾಗೆ-
“ನೀನು ಏನಾದರೂ ಆಗು, ಮೊದಲು ಮಾನವನಾಗು”
ಖಲೀಲ್ ಗಿಬ್ರಾನ್ ನ ನುಡಿಯಂತೆಯೊ- ಬದುಕಿಗಾಗಿ ಬದುಕು ತುಡಿದ ಫಲ ಅವರು.

ಆ ಫಲ ಅವರದಾಗಿರಲಿ; ಅದು ಕುಟುಂಬಕ್ಕೂ ಸಮಾಜಕ್ಕೂ ಹಂಚಿ ಹೋಗಲಿ,                      
-ರೈಟರ್ ಶಿವರಾಂ

Rating
No votes yet