ತಂಬಿಗೆ ತಿಮ್ಮ
ತಂಬಿಗೆ ತಿಮ್ಮ --
ನಿನ್ನೆ ನಾನು TV9 ನೊಡುತ್ತಿದ್ದೆ. ಬೀಚಿ ಪ್ರಾಣೇಶ ಅವರ ಸಂದರ್ಶನ ಬರುತ್ತಿತ್ತು. ಪ್ರಾಣೇಶ ಅವರು ಹೇಳಿದ ಒಂದು ಪ್ರಸಂಗ:
ಪ್ರಾಣೇಶ ಅವರು ಒಂದು ಹಳ್ಳಿಗೆ ಕಾರ್ಯಕ್ರಮ ಕೊಡಲು ಹೋಗಿದ್ದರಂತೆ. ಆಲ್ಲಿ ರಾತ್ರಿ ಗೌಡನ ಮನೆಯಲ್ಲಿ ತಂಗಿದ್ದರಂತೆ.
ಬೆಳಗಿನ ಜಾವ ಪ್ರಾಣೇಶರು ಟೀ ಕುಡಿದ ನಂತರ toilet ಎಲ್ಲಿದೆ ಅಂತ ಕೇಳಿದರು. ಆಗ ಗೌಡ ನಮ್ಮ ಮನೆಯಲ್ಲಿ ಇಲ್ಲ, ಹೊರಗಡೆ ಹೊಗಬೇಕು ಎಂದು ಹೇಳಿದ.
ಆಗ ಪ್ರಾಣೇಶರು ತಂಬಿಗೆ ನೀರು ಕೇಳಿದರು. ಗೌಡ, ನಮ್ಮ ಮನೆಯಲ್ಲಿ ಅತಿಥಿಗಳನ್ನು ತಂಬಿಗೆ ಹಿಡಿದು ಕೊಂಡು ಹೊಗಲು ಬಿಡುವದಿಲ್ಲ ಎಂದು ಹೇಳಿ ತಿಮ್ಮನನ್ನು ಕರೆದನಂತೆ.
ತಿಮ್ಮ ಮುಂದೆ ತಂಬಿಗೆ ಹಿದಿದುಕೊಂಡು ಹಿಂದೆ ಪ್ರಾಣೇಶರು ಹೊರಟರಂತೆ. ೧ ಕೀಮೀ ದಾಟಿದರಂತೆ. ೨ ಕೀಮೀ ದಾಟಿದರಂತೆ. ಹಿಂದೆ ತಿರುಗಿ ನೊಡಿದರೆ ಊರು ಕಾಣಿಸಲಿಲ್ಲ. ಆಗ ಪ್ರಾಣೇಶರ ಹೊಟ್ಟಿ ಗುರ‍್ ಅಂತಂತೆ.
ಪ್ರಾಣೇಶರು ತಿಮ್ಮನ ಕೇಳಿದರಂತೆ. ಏಲ್ಲಿ ಪಾ ತಿಮ್ಮ ಹೊಗೊದು? ೨ ಕೀಮೀ ದಾಟಿದಿವಿ....
ಆಗ ತಿಮ್ಮ ನನಗೆನ್ ಗೊತ್ರಿ ಸಾಹೇಬ್ರ ನೀವು ಎಲ್ಲಿ ಕುಂದರ್ತಿರಿ ಅಲ್ಲಿ ತಂಬಿಗೆ ಇಡ್ತಿನೀ... ಅಂದನಂತೆ. :-)
ಈ ಪ್ರಸಂಗ ಪ್ರಾಣೇಶರ ಬಾಯಿಯಿಂದ ಕೇಳಿದರೆ ಜೀವನ ಧನ್ಯ.
Comments
ಉ: ತಂಬಿಗೆ ತಿಮ್ಮ
ಉ: ತಂಬಿಗೆ ತಿಮ್ಮ
ಉ: ತಂಬಿಗೆ ತಿಮ್ಮ