ತತ್ವಜ್ಞಾನಿ ಮತ್ತು ರಾಜ
ತತ್ವಜ್ಞಾನಿಯೊಬ್ಬ ಬಡತನದಲ್ಲಿದ್ದ. ಒಂದು ದಿನ ಬರೀ ರೊಟ್ಟಿಯನ್ನು ತಿನ್ನುತ್ತಿರುವಾಗ ಅವನ ಗೆಳೆಯ ಅಲ್ಲಿಗೆ ಬಂದು ಅದನ್ನು ನೋಡಿ ' ನೀನು ರಾಜನನ್ನು ಸ್ವಲ್ಪ ಮೆಚ್ಚಿಸುವದನ್ನು ಕಲಿತಿದ್ದರೆ ಬರೀ ರೊಟ್ಟಿಯನ್ನು ತಿಂದು ಬದುಕುವ ಪರಿಸ್ಥಿತಿ ಬರುತ್ತಿದ್ದಿಲ್ಲ ' ಎಂದ .
ಅದಕ್ಕೆ ಪ್ರತಿಯಾಗಿ ತತ್ವಜ್ಞಾನಿ ಹೇಳಿದ - ' ನೀನು ಬರೀ ರೊಟ್ಟಿ ತಿಂದು ಬದುಕುವದನ್ನು ಕಲಿತಿದ್ದಿದ್ದರೆ ರಾಜನನ್ನು ಮೆಚ್ಚಿಸುವ ಪರಿಸ್ಥಿತಿ ಬರುತ್ತಿದ್ದಿಲ್ಲ '
Rating
Comments
ಉ: ತತ್ವಜ್ಞಾನಿ ಮತ್ತು ರಾಜ