ತಮಿಳು ಭಾಷಾಭಿಮಾನದ ಇತಿಹಾಸ
ಶ್ರೀ ಮಹೇಶರು ನನಗೆ ಅಂತರ್ಜಾಲದಲ್ಲೊಂದು ಕೊಂಡಿಯನ್ನು ನೀಡಿದರು. ( passion of Tongue) ಅದನ್ನು ಅಷ್ಟಿಷ್ಟು ಓದಿ ಅದರಲ್ಲಿರುವ ವಿಚಾರ ತಿಳಿಸುತ್ತಿರುವೆ. ತಮಿಳು ಜನರು ಭಾಷೆಗಾಗಿ ಹಿಂದೊಮ್ಮೆ ಆತ್ಮಾಹುತಿಗೂ ಸಿದ್ಧರಾದರು . ಅದು ಜಗತ್ತಿನಲ್ಲಿ ಬೇರೆಲ್ಲೂ ಕಾಣುವದಿಲ್ಲ . ಅದೇಕೆ ? ಹೇಗೆ ? ಎಂಬ ಜಿಜ್ಞಾಸೆಯ ಫಲ ಈ ಪುಸ್ತಕ . ಬಹುಶ: ಬ್ರಿಟಿಷರು ನಮ್ಮಲ್ಲಿ ಬರುವದರೊಂದಿಗೆ , ಇಲ್ಲಿಯ ಬಾಷೆಗಳನ್ನು ಅವರದೇ ಕಾರಣಗಳಿಗಾಗಿ ಕಲಿತು , ಅಧ್ಯಯನ ಮಾಡುವದರೊಂದಿಗೆ ಸಂಸ್ಕೃತಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ನೀಡಿ ಉಳಿದ ಭಾಷೆಗಳನ್ನು ವರ್ನ್ಯಾಕುಲರ್ ಎಂದು ಕರೆದರು . ಆ ಸಮಯಕ್ಕೆ ತಮಿಳುನಾಡಿನಲ್ಲಿ ಅಲ್ಪಸಂಖ್ಯಾತ ಬ್ರಾಹ್ಮಣರು ಇಂಗ್ಲೀಶ್ ಕಲಿತು ಆಡಳಿತದಲ್ಲಿ ಹೆಚ್ಚು ಪಾಲು ಪಡೆಯುವದರೊಂದಿಗೆ ಸಮಸ್ಯೆ ಆರಂಭವಾಯಿತು . ದಕ್ಷಿಣ ಭಾರತದ ಜನರು ಶೂದ್ರರು ಎಂಬ ಭಾವನೆಯೂ ಜನರನ್ನು ಬಡಿದೆಬ್ಬಿಸಿತೇನೋ . ಬ್ರಾಹ್ಮಣರು , ಸಂಸ್ಕೃತ , ಆರ್ಯರನ್ನು ಒಂದೇ ಎಂದು ಪರಿಗಣಿಸಲಾಯಿತು . ಬ್ರಿಟಿಶ್ ಮತ್ತು ಇಂಗ್ಲೀಷ್ ವಿರುದ್ಧ ತಮಿಳು . ತಮಿಳನ್ನು ತಾಯಿಯ ಸ್ಥಾನದಲ್ಲಿ , ದೇವರ ಸ್ಥಾನದಲ್ಲಿ ಕೂಡಿಸಿ , ಜನರ ಭಾವನೆಗಳನ್ನು ಬಡಿದೆಬ್ಬಿಸಿ , ತಮಿಳೇ ಶ್ರೇಷ್ಠ , ಇಲ್ಲಿ ಇಲ್ಲದಿರುವದು ಬೇರೆಲ್ಲೂ ಇಲ್ಲ . ತಮಿಳು ಅನಾದಿಕಾಲದಿಂದಲೂ ಇದೆ . ಅದುವೂ ದೇವ ಭಾಷೆ , ಅದುವೂ ಕ್ಲಾಸಿಕ್ ಭಾಷೆ ಎಂದೆಲ್ಲ ಪ್ರಚಾರ ಮಾಡಲಾಯಿತು . ಜನ ಮೊದಲು ತಮಿಳಿಗರು . ತಮಿಳಿಗೆ ಮೊದಲ ನಿಷ್ಠೆ ಬೇಡಲಾಯಿತು. ಸ್ವಾತಂತ್ರ್ಯ ಹೋರಾಟ , ಸಂಸ್ಕೃತ , ಭಾರತೀಯತೆ , ಇತರ ಭಾಷೆಗಳು ಮತ್ತು ಹಿಂದಿಯೊಡನೆ ಸಂಬಂಧ , ತಮಿಳು ಶುದ್ಧೀಕರಣ ಇವೆಲ್ಲವುಗಳ ಬಗ್ಗೆ ವಸ್ತುನಿಷ್ಠ ಮತ್ತು ವ್ಯಾಪಕ ಮಾಹಿತಿ ಇಲ್ಲಿದೆ. ಕನ್ನಡ ಶುದ್ಧೀಕರಣದ ಮಾತು ಅಲ್ಲಲ್ಲಿ ಕೇಳಿಬರುತ್ತಿರುವದರಿಂದ ಈ ಪುಸ್ತಕ ಓದ ಬಯಸಿದೆ. ಇನ್ನೂ ಒಂದಿಷ್ಟು ನಾನು ಓದದ ಭಾಗಗಳಿವೆ . ವಿಶೇಷವೇನಾದರೂ ಕಂಡುಬಂದರೆ ತಿಳಿಸುವೆ. ಅಂದ ಹಾಗೆ ನಾವು ಕನ್ನಡ ಭಾಷೆಯನ್ನು ತಾಯಿ ಭಾಷೆ ಎಂದೋ ತಾಯಿ ಭುವನೇಶ್ವರಿ ಎಂದೋ ನೋಡುವದು ತಪ್ಪೋ ಏನೋ ? ನಾವು ಕನ್ನಡವನ್ನು ನಮ್ಮ ಮೊದಲಭಾಷೆ ಎನ್ನುವದು ಹೆಚ್ಚು ಸರಿಯೋ ಏನೋ ? (ಇದು ಈ ಪುಸ್ತಕ ಓದುವಾಗ ಬಂದ ವಿಚಾರ . ಕೆಲವೊಮ್ಮೆ ಗಾಂಧೀ ಪುಸ್ತಕ ಓದುವಾಗ ಗಾಂಧಿಯೂ , ಗೋಡ್ಸೆ ಪುಸ್ತಕ ವಿಚಾರ ಓದುವಾಗ ಗೋಡ್ಸೆಯೂ ನಮ್ಮಲ್ಲಿ ಆವಾಹನೆ ಆಗುವದೂ ಉಂಟು ! - ಆ ವಿಷಯ ಬೇರೆ !)
Comments
ಉ: ತಮಿಳು ಭಾಷಾಭಿಮಾನದ ಇತಿಹಾಸ