ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
ಜುಲೈ 6, ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾರ ಜನ್ಮ ದಿನ. ಈ ಸೌಮ್ಯ ಸ್ವಭಾವದ ನಾಯಕರ ಕರುಣಾಪೂರಕ ಹತ್ತು ವಿಚಾರಗಳು ಹೀಗಿವೆ:
1. ನಮಗೆ ದೇವಾಲಯಗಳ ಅಗತ್ಯವಿಲ್ಲ; ಯಾವುದೇ ಸಂಕೀರ್ಣ ತತ್ವಶಾಸ್ತ್ರದ ಅಗತ್ಯವಿಲ್ಲ. ನಮ್ಮ ಬುದ್ಧಿ ಮತ್ತು ಮನಸ್ಸೇ ನಮ್ಮ ದೇವಾಲಯವಾಗಿದೆ; ದಯೆಯೇ ತತ್ವಶಾಸ್ತ್ರ. ಇದೇ ನನ್ನ ಸರಳ ಧರ್ಮ.
2. ಸಂತೋಷ ಎಂಬುದು ಸಿದ್ಧವಸ್ತವಲ್ಲ. ನಿಮ್ಮ ಸ್ವಕ್ರಿಯೆಯಿಂದ ಸಂತೋಷವನ್ನು ಪಡೆದುಕೊಳ್ಳಬಹುದು.
3. ಸಾಧ್ಯವಾದಷ್ಟು ಮಟ್ಟಿಗೆ ದಯೆ ತೋರಿಸಿ. ಇದು ಯಾವಾಗಲೂ ಸಾಧ್ಯ.
4. ಎಲ್ಲಾ ಪ್ರಮುಖ ಧಾರ್ಮಿಕ ಸಂಪ್ರದಾಯಗಳು ಮೂಲತಃ ಒಂದೇ ರೀತಿಯ ಸಂದೇಶಗಳನ್ನು ಸಾರುತ್ತವೆ; ಪ್ರೀತಿ, ಸಹಾನುಭೂತಿ ಮತ್ತು ಕ್ಷಮೆ. ಮುಖ್ಯವೆಂದರೆ, ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
5. ಪ್ರೀತಿ ಮತ್ತು ಸಹಾನುಭೂತಿ ಜೀವನಾವಶ್ಯಕಗಳೇ ಹೊರತು ವಿಲಾಸಗಳಲ್ಲ. ಪ್ರೀತಿ ಮತ್ತು ಸಹಾನುಭೂತಿ ಇಲ್ಲದೆ ಮಾನವಸಂಕುಲ ಬದುಕುಳಿಯಲಾರದು.
6. ನಿಮಗೆ ಸಾಧ್ಯವಾದರೆ ಇತರಿರಗೆ ಸಹಾಯ ಮಾಡಿ; ಇಲ್ಲವಾದಲ್ಲಿ, ಕಡೇಪಕ್ಷ ಇತರರಿಗೆ ತೊಂದರೆ ಕೊಡಬೇಡಿ.
7. ನಿಮ್ಮ ಮತ್ತು ಇತರರ ಸಂತೋಷವನ್ನು ನೀವು ಬಯಸಿದರೆ ಜೀವನದಲ್ಲಿ ಸಹಾನುಭೂತಿಯನ್ನು ಅಳವಡಿಸಿಕೊಳ್ಳಿ.
8. ಧರ್ಮ ಮತ್ತು ಧ್ಯಾನ ಇಲ್ಲದೆ ನಾವು ಬದುಕಬಲ್ಲೆವು. ಆದರೆ ಮಾನವನ ಪ್ರೀತಿ ಇಲ್ಲದೆ ಬದುಕಲಾರೆವು.
9. ನೆನಪಿಡಿ, ನಿಮಗೆ ಬೇಕಾದ್ದನ್ನು ನೀವು ಪಡೆಯದಿದ್ದಲ್ಲಿ ಅದು ಕೆಲವೊಮ್ಮೆ ನಿಮ್ಮ ಅದೃಷ್ಟದ ಸಂಕೇತವಾಗಿರುತ್ತದೆ.
10. ನಿದ್ರೆ ಒಂದು ಅತ್ಯುತ್ತಮ ಧ್ಯಾನವಾಗಿದೆ.
***
ಸಂಪದ ಸ್ನೇಹಿತರೆ ಮೇಲಿನ ಹೇಳಿಕೆಗಳು ಸಾಮನ್ಲವಾಗಿ ಎಲ್ಲರಿಗೂ ತಿಳಿದಿರುವ ಹೇಳಿಕೆಗಳು ಎಂದೆನಿಸದೆ ಇರದು. ಆದರೂ ಪ್ರತಿಯೊಂದು ಹೇಳಿಕೆಯೂ ತಂಬಾ ಒಳಅರ್ಥವನ್ನು ಹೊಂದಿರುವುದು ಸತ್ಯ. ಈ ಹೇಳಿಕೆಗಳು ನನಗೆ ತುಂಬಾ ಇಷ್ಟವಾದವು. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಅನುವಾದಿಸಿದ್ದೇನೆ.
ಮೂಲ (ಲೇಖನ ಮತ್ತು ಫೋಟೊ) http://timesofindia.speakingtree.in/spiritual-blogs/seekers/philosophy/10-wise-sayings-from-dalai-lama-on-his-birthday
Comments
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
In reply to ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು by makara
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
In reply to ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು by ಗಣೇಶ
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
In reply to ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು by shreekant.mishrikoti
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು
In reply to ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು by ಗಣೇಶ
ಉ: ತಮ್ಮ ಹುಟ್ಟುಹಬ್ಬದಂದು ದಲೈ ಲಾಮಾರ 10 ತಿಳಿವಳಿಕೆ ಮಾತುಗಳು