ತರಂಗಗಳಲ್ಲಿ ಸಮುದಾಯ ರೇಡಿಯೋ

ತರಂಗಗಳಲ್ಲಿ ಸಮುದಾಯ ರೇಡಿಯೋ

ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.
ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿಡಿದರೆ ಯಾವ ಟಿ.ವಿ ರಿಪೋರ್ಟರ್ ಆಗಲಿ ಅಥವಾ ವಿಡಿಯೋ ಗ್ರಾಪರ್ ಆಗಲಿ ಸಹ ಇವರ ಹತ್ತಿರ ಅಷ್ಟಕ್ಕೆ ಅಷ್ಟೆ.
ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ (ಡಿ.ಡಿ.ಎಸ್) ಯ ಹೆಸರಿಗೆ ಪರವಾನಗಿ ಸಿಕ್ಕಿದೆ. ಡಿ.ಡಿ.ಎಸ್ ಸಂಸ್ಥೆಯು ಈ ಭಾಗದಲ್ಲಿ ದಲಿತ ಮಹಿಳೆಯರೊಟ್ಟಿಗೆ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದು, ದಲಿತರ 100 ಮಹಿಳಾ ಸ್ವಸಾಯ ಸಂಘಗಳನ್ನು ಹುಟ್ಟು ಹಾಕಿದೆ. ಈ ಸಂಘಗಳಲ್ಲಿ ಸುಮಾರು 4000 ಸದಸ್ಯರಿದ್ದು, 75 ಗ್ರಾಮಗಳಲ್ಲಿ ಸಂಘಗಳು ಇವೆ. ಈ ಭಾಗದ ಜನ ಈಗಲೂ ರೂ.10 ರಿಂದ 15 ರೂಗಳಿಗೆ ಕೂಲಿಯನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹ ಜನರ ಏಳಿಗೆಗಾಗಿ ಸಂಘಂ ರೇಡಿಯೋ (ಸಂಘದ ರೇಡಿಯೋ) ಉತ್ತಮ ಕೆಲಸಗಳನ್ನು ಮಾಡಲು ಹೊರಟಿದೆ. ಒಟ್ಟಾರೆ ನಮ್ಮ ದೇಶದಲ್ಲಿ ಇತ್ತೀಚಿಗೆ ತಾನೇ ಸಮುದಾಯ ರೇಡಿಯೋಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಹೇಳಬೇಕೆಂದರೆ ನಮ್ಮ ದೇಶದಲ್ಲಿ ಈ ತರಹದ ಸಮುದಾಯ ರೇಡಿಯೋಗಳು ಹೆಚ್ಚು ಹೆಚ್ಚು ಪ್ರಾರಂಭವಾಗಬೇಕು. ಆಗ ಮಾತ್ರ ಸರ್ಕಾರದ ಈ ಯೋಜನೆ ಸ್ವಲ್ಪ ಕಾಲ ಇರಲು ಸಾಧ್ಯ. ಇದೆ ತಿಂಗಳು ನಮ್ಮ ಭಾರತದಲ್ಲಿ ಇನ್ನೊಂದು ಸಮುದಾಯ ರೇಡಿಯೋ ಕೆಂದ್ರ 25 ರಂದು ಮದ್ಯಪ್ರದೇಶದ ಓರ್ಚಾದಲ್ಲಿ ಪ್ರಾರಂಭವಾಗಲಿದೆ ಅದರ ಹೆಸರು "ಬುಂದೇಲ್ ಖಂಡಿ" 90.4 ಕಂಪನಾಂಕದಲ್ಲಿ. ಮುಂದಿನ ತಿಂಗಳು ನಮ್ಮ ಕರ್ನಾಟಕದಲ್ಲಿ "ನಮ್ಮಧ್ವನಿ" ಸಮುದಾಯ ರೇಡಿಯೋ ಕೆಂದ್ರ ಸಹ ತರಂಗಗಳಲ್ಲಿ ಪ್ರಸಾರವಾಗಲಿದೆ. ಇದು ಸಹ 90.4 ಕಂಪನಾಂಕಗಳಲ್ಲಿ ಪ್ರಸಾರವಾಗಲಿದೆ. ಇವರ ಕೆಲಸಗಳು ಯಶಸ್ಸಾಗಲಿ ಎಂದು ಅ ದೇವರಲ್ಲಿ ಕೇಳಿಕೊಳ್ಳೋಣ

ಇದರ ಕುರಿತಾದ ಸಣ್ಣ ವಿಡಿಯೋ ವಿಕ್ಷಿಸಿ: http://in.youtube.com/watch?v=k1Bofdx52Ss

Rating
No votes yet