ತರಲೆ ಬ್ರೌಸರ್

ತರಲೆ ಬ್ರೌಸರ್

Internet Explorer ಬಹಳಷ್ಟು ಜನರ ಮಟ್ಟಿಗೆ ಒಂದು 'ತರಲೆ ಬ್ರೌಸರ್'... w3c ಸ್ಥಾಪಿಸಿರೋ ಎಷ್ಟೊಂದು ಸ್ಟಾಂಡರ್ಡುಗಳನ್ನ ಇದು ಸಪೋರ್ಟ್ ಮಾಡೋದೇ ಇಲ್ಲ! ಅದರ ಮೇಲೆ ವಾರಕ್ಕೊಂದು ಸೆಕ್ಯೂರಿಟಿ ಕುತ್ತು ಬೇರೆ.

ಅಷ್ಟೇ ಅಲ್ಲ, ಇರೋ ಬರೋ ವೈರಸುಗಳೆಲ್ಲ ಹಾಳು ವಿಂಡೋಸ್ ನಲ್ಲೇ ಬರೋದು... ಹೆಚ್ಚಾಗಿ ಈ Internet Explorer ಮತ್ತು Outlook ಗಳೇ ವೈರಸ್ ದಾಳಿ ಹೆಚ್ಚಾಗಿ ಎದುರಿಸುತ್ತಿರುವುದು. ಈ ಬ್ರೌಸರಿನಲ್ಲಿ png ಚಿತ್ರಗಳೂ ಸರಿಯಾಗಿ ಕಾಣೋದಿಲ್ಲ. ಹೀಗಾಗೀನೂ ಜನ ಇದನ್ನ ಬಳಸ್ತಾರೆ ನೋಡಿ!

ನಮ್ಮ 'ಸಂಪದ'ವನ್ನ ಹೋಸ್ಟ್ ಮಾಡಿರುವ ಮಾರ್ಕ್ ಗೆ ಈ ಬ್ರೌಸರ್ ಕಂಡರೆ ಎಷ್ಟೊಂದು ಸಿಟ್ಟು! ಅವ ಈ ಬ್ರೌಸರನ್ನು "Internet Exploder" ಅಂತ ಕರೀತಾನೆ 

ಒಟ್ಟಾರೆ ಆಗಿಂದಾಗ್ಯೆ ಸಂಪದದಲ್ಲಿ ಒಂದಷ್ಟು ಬದಲಾವಣೆ ಮಾಡೋಣಾಂತಂದ್ರೆ ಈ ಹಾಳು ತರಲೆ ಬ್ರೌಸರ್ ಕಾಟ. ಏನು ಮಾಡಿದರೂ ಈ ಬ್ರೌಸರಿನಲ್ಲಿ ಡಿಸೈನ್ ಗಬ್ಬೆದ್ದು ಹೋಗತ್ತೆ. "ಅದರಲ್ಲೊಂದರಲ್ಲೇ ತಾನೆ, ಗಬ್ಬೆದ್ದು ಹೋದ್ರೆ ಹೋಗ್ಲಿ!" ಅಂತ ಬಿಡೋಣ ಅನ್ಕೊಂಡ್ರೆ ಸಂಪದದ stats - ಸಂಪದಕ್ಕೆ ಬರುವ ೫೩% ಜನ Internet Exploder ಉಪಯೋಗಿಸುತ್ತಾರೆ ಅಂತ ತೋರಿಸುತ್ತದಲ್ಲ!

ನಿಮ್ಮೆಲ್ಲರ ಅನಿಸಿಕೆಗಳೇನು? 'ಸಂಪದ'ದ ಓದುಗರೆಲ್ಲ ಬೇರೆ ಯಾವುದಾದರೂ ಬ್ರೌಸರ್ ಉಪಯೋಗಿಸುವಂತೆ ಮಾಡೋದು ಹೇಗೆ?

(ಸೂ: ಕಾಮೆಂಟ್ ಹಾಕೋರು ಮೈಕ್ರೊಸಾಫ್ಟು ಆರಾಧಕರಾಗಿದ್ದಲ್ಲಿ "ಏನೋ ಮಾರಾಯ, ತರಲೆ ಅಂತೆಲ್ಲ ಹೇಳ್ತೀಯ?" ಅಂತ ತರಲೆ ತೆಗೀಬೇಡಿ ಮತ್ತೆ. ಬ್ರೌಸರು ಮಾತ್ರ ತರಲೆ ಅಂತ ಬರ್ದಿದ್ದೀನಿ, ತರಲೆ ತೆಗೆದ್ರೆ ನೀವು ತರಲೆಯೋ ಅಲ್ವೋ ಅಂತ ಓದೋರು ಡಿಸೈಡ್ ಮಾಡ್ತಾರೆ
ಯಾಕೋ ಇತ್ತೀಚೆಗೆ "ನೀವು ಮೈಕ್ರೊಸಾಫ್ಟು ಆರಾಧಕರು" ಅಂದ್ರೆ ಮೈಕ್ರೊಸಾಫ್ಟಿಗೇ ಕೆಲಸ ಮಾಡುವ ಕೆಲವರಿಗೆ ಕೀಳರಿಮೆ ಉಂಟಾಗಹತ್ತಿದೆ. ಪಾಪ, ಇಂತಹ ತರಲೆ ಬ್ರೌಸರ್ ಹೊರತಂದದಕ್ಕೋ ಏನೋ

Rating
No votes yet

Comments