ತಲೆಯೆತ್ತಿ ನೋಡಿ; ಖಂಡಿತ ದೇವಕೃಪೆಯಿದೆ !
ಅಂದರೆ ಈ ಮಾತಿನ ತಾತ್ಪರ್ಯ, ನಿಮಗೆ ದೇವಕೃಪ ಕಟ್ಟಡ ಕಾಣಿಸುತ್ತೆ. ಅದೇ ನನ್ನ ವಾಸಸ್ಥಳ ಆನ್ನೂ ಮಾತನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿದ್ದೇನೆ ಅಷ್ಟೇ ! ದೈವಕೃಪೆ ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲವಲ್ಲಾ ! ಒಹ್ ನಾನೇ ಮಾಡಿದೆ, ಎನ್ನುವುದು ಸುಳ್ಳು. ಯಾವುದಕ್ಕೂ ಆತನ ಅನುಗ್ರಹವಿಲ್ಲದೆ ಬೇಕೇ ಬೇಕು. ಇದು ನನ್ನ ಅನುಭವಕ್ಕೆ ಬಂದಿದೆ. ತಮಗೂ ಬಂದಿದೆ. ಅಂದರೆ ನನಗೆ ಸ್ವಲ್ಪ ನಿಧಾನವಾಗಿ ಬಂತು ಅನ್ನಿಸಿದರೆ, ಅದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ. ನೋಡಿ. ನಮ್ಮ ಆಫಿಸಿನಿಂದ ನನ್ನನ್ನು ಇಂಗ್ಲೆಂಡ್ ಗೆ ಒಂದು ತಂತ್ರಜ್ಞಾನದ ತರಪೇತಿಗೆ ಕಲಿಸುತ್ತಾರೆ ಎನ್ನುವ ಮಾತಿತ್ತು. ಆದರೆ ಅಲ್ಲಿನ ರಾಜಕೀಯದಲ್ಲಿ ಯಾರೋ ಅದಕ್ಕೆ ಸಂಬಂಧಿಸದ ವ್ಯಕ್ತಿಯನ್ನು ಕಳಿಸಿಕೊಟ್ಟರು. ಅದರಿಂದ ಆತನಿಗೂ ಉಪಯೋಗವಾಗಲಿಲ್ಲ. ಸಂಸ್ಥೆಗೂ ನಷ್ಟ !
ಮುಂದೆ, ೨೦೦೮ ರಲ್ಲಿ ಅನಾಯಾಸವಾಗಿ ನಮ್ಮ ಮಕ್ಕಳೇ ಅಮೇರಿಕಾದ ಯಾತ್ರೆ ಮಾಡಿಸಿದರು. ಮೊನ್ನೆ ಕೆನಡಾದ ಯಾತ್ರೆಯು ಆಯಿತು. ಈಗ ದಕ್ಷಿಣ ಭಾರತದ ಯಾತ್ರೆಗಾಗಿ ಎದುರುನೋಡುತ್ತಿದ್ದೇವೆ. ದೇವರ ದಯೆಯಿಂದ ಅದೂ ಆಗುವ ಸಾಧ್ಯತೆಗಳು ಹೆಚ್ಚು !