ತಾಂತ್ರಿಕತೆ

ತಾಂತ್ರಿಕತೆ

ಹರಿದು ಹೋಗಿದೆ ಹಾಕಿರುವ ಬಟ್ಟೆಗಳು

ಕಿತ್ತು ಹೋಗಿಹುದು ಕಾಲಿನ ಚಪ್ಪಲಿಗಳು

ದೇಹ ಸ್ನಾನವ ಕಂಡು ಆಗಿದೆ ವರ್ಷಗಳು

ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು

 

ಮಗನ ಶಾಲೆಯ ಶುಲ್ಕವನು ಕಟ್ಟಿಲ್ಲ

ಮಗಳ ಮದುವೆಗೆ ಹಣವ ಕೂಡಿಟ್ಟಿಲ್ಲ

ಮಾಡಿರುವ ಸಾಲವನು ಇನ್ನು ತೀರಿಸಿಲ್ಲ

ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು

 

ದಿನಿಸಿಯನು  ತರಲು ಸಾಲುತಿಲ್ಲ ಹಣ

ಬಾಡಿಗೆಯ  ನೀಡಲು  ಉಳಿದಿಲ್ಲ  ಹಣ

ಜೀವನ ನಿರ್ವಹಣೆಗೆ ಸಾಲದಾಗಿದೆ ಹಣ

ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು

 

ತಾಂತ್ರಕತೆಯ ಹೆಸರಿನಲಿ ರೈತರ ಶೋಷಣೆಯ

ಮಾಡುತಿಹರು ಸ್ವಾರ್ಥದಲಿ ದೇಶದ ನಾಯಕರು

ವ್ಯವಸಾಯಯದ ಈ ದೇಶವನು ನಾಶ ಮಾಡಿಹರು

ಮನಸಿನಾಳದ ನೋವ ಇಲ್ಲಿ ತಿಳಿಸಲೆತ್ನಿಸಿಹೆನು

ಕೈನಲ್ಲಿ ಹಿಡಿದು ಮೊಬೈಲ್ ಎಂಬ ಯಂತ್ರವನು

 

 

ಮೊಬೈಲ್ ಪದವನ್ನು ತಾಂತ್ರಿಕತೆಯ ಸೂಚಕವಾಗಿ ಬಳಸಿದ್ದೇನೆ

Rating
No votes yet

Comments