ತಾಯೆ ಶ್ರೀ ಕಲ್ಯಾಣಿ

ತಾಯೆ ಶ್ರೀ ಕಲ್ಯಾಣಿ

ಚಿತ್ರ

 

ದಸರಾ ಹಬ್ಬಕ್ಕೆ ಸರಸ್ವತಿ ಸ್ತುತಿ 
 
 
ತಾಯೆ ಶ್ರೀ ಕಲ್ಯಾಣಿ
ನೀ ಕಾಯೆ ಬ್ರಹ್ಮನ ರಾಣಿ
ಶ್ವೇತವಸನೆ ಶರ್ವಾಣಿ
ವಾರಿಜನಯನೆ ಗಿರ್ವಾಣಿ
 
ಹಂಸವಾಹಿನಿ ವಾಣಿ
ಜ್ಞಾನದಾಯಿನಿ ವಾಣಿ
ವಾಗಾಭಿಮಾನಿ ವಾಣಿ
ವಿದ್ಯಪ್ರದಾಯಿನಿ ವಾಣಿ
 
ಬುದ್ಧಿವಿಹಾರಿಣಿ ವಾಣಿ
ಸಿದ್ಧಿಸ್ವರೂಪಿಣಿ ವಾಣಿ
ವೀಣ ಪುಸ್ತಕಪಾಣಿ ವಾಣಿ
ಸುಮಧುರ ಭಾಷಿಣಿ ವಾಣಿ
 
ಸ್ತುತಿಸುವೆ ನಿರತ ವಾಣಿ
ದಯೆ ತೋರಿಸೆ ಸತತ ವಾಣಿ
ನೆಲೆಸೆನ್ನ ಚಿತ್ತದಿ ವಾಣಿ
ಪರಿಪಾಲಿಸೆ ಭಕ್ತಳ ವಾಣಿ
 
          ಶಾರಿಸುತೆ
(ಪುರಂದರ ದಾಸರ "ಸ್ವಾಮಿ ಮುಖ್ಯ ಪ್ರಾಣ" ಹಾಡಿನ ದಾಟಿ)
http://youtu.be/a4PngWWqYso
ಚಿತ್ರ ಕೃಪೆ:ಅಂತರ್ಜಾಲ
Rating
No votes yet