ತಾಯ್ತನ...

ತಾಯ್ತನ...

ಧರೆಗೆ ಮೆರಗು ತರುವ ಚೈತ್ರದಂತೆ,
ಬಾನಲಿ ಮೂಡಿದ ಕಾಮನಬಿಲ್ಲಿನಂತೆ,
ಬದುಕ ಇರುಳಿಗೆ ಹುಣ್ಣಿಮೆಯಂತೆ,
ಬಾಳ ಬೇಸರ ಧಗೆ ತಣಿಸುವ ಪನ್ನೀರ ಮಳೆಯಂತೆ,
ಕರುಳ ಕುಡಿಯ ಆಗಮನ,
ಸಾರ್ಥಕ ಭಾವ ಮೊಗದಲಿ,
ಮಮತೆಯ ಸಾಗರ ಹೃದಯದಲಿ,
ಎಷ್ಟೊಂದು ಚಂದಾನೆ
ತಾಯ್ತನ ಹೆಣ್ಣಿಗೆ!

---ಅಮರ್
Rating
No votes yet