ತಿಮ್ಮೋಪಾಖ್ಯಾನ

ತಿಮ್ಮೋಪಾಖ್ಯಾನ

ಚಿತ್ರ

ಕೆಳಗೆ ಇರುವ‌ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ.
ತಿಮ್ಮ ತುಂಟ ಹುಡುಗನು
ಪ್ರಶ್ನೆ ಕೇಳಿ ಕೊರೆವನು
ತಾಯಿ ಇಲ್ಲದ ತಬ್ಬಲಿಯು
ತಂದೆ ಪೋಲೀಸ್ ರಾಮುವು
ತಂದೆ ನಿಷ್ಟಾವಂತರಾದರು ದುಷ್ಟರವರ ಗೆಳೆಯರು
ಗೌರವ ಗಳಿಸಿ ಮೆರೆದ ರಾಮುವಿನ ಗೋಮುಖವ್ಯಾಘ್ರ ಶತ್ರುಗಳು
ಬಡವರಾದರು ಹಳ್ಳಿಯಲ್ಲಿ ಒಟ್ಟು ಕುಟುಂಬ ಅವರದು
ಮನೆಯ ಪಕ್ಕ ಫಸಲು ಬೆಳೆಸಿ ಭೂತಾಯಿಯ ಕ್ರುಪೆ ಪಡೆದರು
ರಾಮು ಅಣ್ಣ ಶಾಮುವು 
ಒಂದು ಪತ್ರಿಕೆಯ ಲೇಖಕರು
ಶಾಮುಗೆ ಅವಳಿ ಮಕ್ಕಳು
ಹೆಂಡತಿ ಶಾಲಾ ಮೇಶ್ಟರು
ರಾಮು ಗೆಳೆಯರು ಕತ್ತಿ ಮಸೆದು ದೊಡ್ಡ ಸಂಚು ಮಾಡಿದರು
ತಾವು ಮಾಡಿದ ಕೆಟ್ಟ ಕೆಲಸ ರಾಮು ತಲೆಗೆ ಕಟ್ಟಿದರು 
ಏನು ಅರಿಯದೆ ರಾಮು ಏಕೆ ಹೀಗಾಯಿತೆಂದು ಯೋಚಿಸಲು
ವಿಷಯ ಶಾಮುಗೆ ಹೇಗೋ ತಿಳಿದು ಕೋಪದಿಂದ ಕೆರಳಿದನು
ತಮ್ಮನನ್ನು ಕಾಪಾಡಲು
ನ್ಯಾಯ ಅವನಿಗೆ ಒದಗಿಸಲು
ದೀರ್ಘವಾಗಿ ಎಲ್ಲಾ ಬರೆದು
ಪತ್ರಿಕೆಗೆ ಅಂಚೆ ಕಳಿಸಿದನು
ಅಂಚೆಯು ಕಛೇರಿ ಮುಟ್ಟುವ ಮುನ್ನ ಗೆಳೆಯರ ಕೈಗೆ ಸಿಕ್ಕಿತು
ಗಾಡಿಯಲ್ಲಿದ್ದ ದುಷ್ಟರು ಮನೆಯೆದುರು ಶಾಮುನ ಗುಂಡಿಕ್ಕಿ ಕೊಂದರು
ರಾಮು ಅಪವಾದಕ್ಕೀಡಾಗಿ ಹುಚ್ಚನ ಪದವಿ ಪಡೆದನು
ಹಳ್ಳಿಯವರ ನಿಂದನೆಯಿಂದ ಹೇಳದೆ ಊರು ಬಿಟ್ಟು ಹೋದನು
ಅಣ್ಣನ ವಿಷಯ ತಿಳಿಯಲು
ತನಿಖೆ ಗುಪ್ತವಾಗಿಡಲು
ತಿಮ್ಮನನ್ನು ಬಿಟ್ಟು ಹೋದರೂ
ವಿಧಿಯ ತುತ್ತಾದನು
ಒಂದೇ ದಿನದಲ್ಲಿ ರಾಮುವಿನ ಮೃತ ದೇಹ ಪತ್ತೆಯಾಯಿತು
ಶೋಕದಿಂದ ಮೂರು ಮಕ್ಕಳು ರಾಜಿಯ ನೆರಳು ಪಡೆದರು
ಶಾಲಾ ಮೇಷ್ಟರು ರಾಜಿಯು ಬಹಳ ದೈವಭಕ್ತಳು
ಎಲ್ಲಾ ದೈವ ಸ್ತೊತ್ರಗಳನ್ನು ತಿಮ್ಮನಿಗೆ ಕಲಿಸಿದ್ದಳು
ರಾತ್ರಿ ಕತ್ತಲಾಯಿತು 
ರಾಮು ಮತ್ತೆ ಕಂಡನು
ತಿಮ್ಮ ಗಾಬರಿಗೊಂಡನು
ಹನುಮಾನ್ ಚಾಲಿಸ ಜಪಿಸಿದನು
ಬೇರೆ ಯಾರಿಗೂ ಕಾಣದೆ ರಾಮು, ತಿಮ್ಮನಿಗೆ ದರ್ಶನ ನೀಡಿದನು
ಹೆಣವನ್ನು ತಾನೆ ಸುಟ್ಟಿದ್ದರಿಂದ, ಭೂತವೆಂದು ನಂಬಿದನು
ಧೈರ್ಯ ಮಾಡಿ, ಪ್ರಶ್ನೆ ಕೇಳಿ, ಖಚಿತ ಪಡಿಸಿಕೊಂಡನು
ಇಬ್ಬರ ಸಾವಿನ ಮೂಲ ಕುರಿತು ತಂದೆ-ಮಗ ಮಾತನಾಡಿದರು
ತಿಮ್ಮ ಧೈರ್ಯಶಾಲಿಯು
ದೇವರನ್ನು ನಂಬಿದನು
ನ್ಯಾಯಕ್ಕಾಗಿ ಹೋರಾಡಲು
ಹೆಜ್ಜೆ ಮುಂದಿಟ್ಟನು
ತನಗೆ ತಿಳಿದ ವಿಷಯ ಹೇಳಿ, ಮಗನ ಮನಸೂ ತಿಳಿದನು
ಟಿ.ವಿ, ಪತ್ರಿಕೆ, ಜನರ ಬಾಯಿ ಸುದ್ದಿ ಕೇಳಿ ಪೆಚ್ಚಾದನು
ಭೂತ ಶಕ್ತಿ ಉಪಯೋಗಿಸಿ ಸತ್ಯ ತಿಳಿಯ ಬಯಸಿದನು
ಒಂದು ವರ್ಷ ಅಲೆದಾಡಿ ಮೂರು ಲೋಕವು ಅಲೆದನು
ಕೊನೆಗೂ ಸತ್ಯ ತಿಳಿಯಿತು
ತಿಮ್ಮನ ಬಳಿ ಬಂದನು
ಬಾಯಿ ತೆರೆದು ಹೊರಟ ಹೇಳಲು
ಜೋರಾಗಿ ಗುಡುಗಿತು
ನಡುಗಿ ನಿದ್ದೆಯಿಂದ ಎದ್ದ ತಿಮ್ಮ ಸುತ್ತಲೂ ನೋಡಿದನು
ಪಕ್ಕದಲ್ಲಿ ಮಲಗಿದ್ದ ತಂದೆ, ದೊಡ್ಡಪ್ಪನನ್ನು ಕಂಡನು
ಎಲ್ಲಾ ಕನಸು, ಬರಿಯ ಭ್ರಮೆ, ತಿಳಿದು ಹಿಗ್ಗಿ ನಲಿದನು
ರಾತ್ರಿ ಹೊತ್ತು ಟಿವಿ ಸಿನಿಮಾ ಹೆಚ್ಚು ನೋಡಬಾರದು
ಪಾಠ ಕಲಿತ ತಿಮ್ಮನು
ಬಿಡಿಸಿ ಹೇಳಿದ ನೀತಿಯನು
ಇಂದಿನ ಬದುಕು ಖುಶಿಯಿಂದ ನಲಿದು
’ಈ’ ಕ್ಷಣದಲ್ಲಿ ಬದುಕುವುದು.
 

Rating
No votes yet