ತಿರುಮಂತ್ರ !

ತಿರುಮಂತ್ರ !

ಇತ್ತೀಚೆಗೆ, ಅದರಲ್ಲೂ ಇಂಟರ್ ನೆಟ್ ಪಾದಾರ್ಪಣೆಯ ಬಳಿಕ ಸೃಷ್ಟಿಯಾದ ಸಾಹಿತ್ಯ ಅಪಾರ. ಅದಕ್ಕೇನು ಲೆಕ್ಕ- ಗಿಕ್ಕ ಇಲ್ಲ ಅನ್ನಬಹುದು. ಬರ್ದಿದ್ದನ್ನ ಓದೋರು ಕಡಿಮೆ.  ಮೊದಲು ಇಂಟರ್ ನೆಟ್ ಗೊತ್ತೀರೋರು ಈಗಲೂ ಕಡಿಮೆ.  ಮತ್ತೆ ಕನ್ನಡ್ದಲ್ಲಿ ಬರ್ಯೋರೂ ಕಡಿಮೆ.  ಓದೋರ್ಗೆ ವ್ಯವಧಾನವಿಲ್ಲ. ದಿನ ಪ್ರತಿದಿನ ರಾಶಿರಾಶಿ ಬರವಣಿಗೆ ನೆಟ್ ಮೇಲೆ ಬಂದು ಸೇರಿಕೊಳ್ಳುತ್ತೆ. ಹಾಗಾಗಿ ಅವರಿಗೆ ನೋಡಿ ಇಲ್ಲೊಂದ್ ಒಳ್ಳೆ ಬರಹ ಇದೆ ಓದಿನೋಡಿ ಅಂತ ಹೇಳೋಕಾಲ ಬಂದಿದೆ. ಕೆಳಗೆ ಕೊಟ್ಟಿರೋ ಪ್ರೊ.  ಜಿ.ಪಿ.ರಾಜರತ್ನಂ ಪದ್ಯ, ಮೊದಲು ನಾನೇ ಕೊಟ್ಟಿದ್ದೆ.  ಈಗ ಮತ್ತೆ ಅದನ್ನೇ ನೀವ್ ಓದ್ಲಿ ಅಂತ ಕೊಟ್ಟಿದೀನಿ. ಖಂಡಿತ ಚೆನ್ನಾಗಿದೆ ; ಮತ್ತೊಮ್ಮೆ  ಓದಿ ಆನಂದಿಸಿ.

 

ರಾಜರತ್ನಂ ಬರೆದ 'ಬಣ್ಣದ ತಗಡಿನ ತುತ್ತೂರಿ'...... .. ಎಂಡಕುಡಕ್ ರತ್ನ....ಇತ್ಯಾದಿಗಳು ಎಲ್ಲರಿಗೂ
ಚಿರಪರಿಚಯ. ಅವರು ಜೈನ ಸಾಹಿತ್ಯದ ಬಗ್ಯೆಯೂ ವಿಪುಲವಾಗಿ ಬರೆದಿದ್ದಾರೆ. ಅವರ ಕವನ ಸಂಗ್ರಹ ದಿಂದ ಕೇವಲ ಕೆಲವು ಕವನಗಳೇ ಪುನರಾರ್ವರ್ತನೆ ಯಾಗುತ್ತಿವೆ. ಇನ್ನು ಹಲವು ವಿಶೇಷ ಕವನಗಳು ಮನರಂಜನೆಗೆ ವ್ಯಂಜನಗಳಾಗಿವೆ. ನನಗೆ ಹಿಡಿಸಿದ ಒಂದು ಕವನದ ಗೊಂಚಲನ್ನು ಕೆಳಗೆ ಕೊಟ್ಟಿದ್ದೇನೆ. ಅದು 'ತಿರುಮಂತ್ರ' ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಓದಿ ಆನಂದಿಸಿ. ಇನ್ನೂ ಕೆಲವು ಕವನಗಳು ಸೊಗಸಾಗಿವೆ. ಓದಲು ಇಚ್ಛಿಸಿದರೆ, ಜಿ.ಪಿ.ರಾಜರತ್ನಂ, ಪ್ರಕಟಿಸಿದ ಪುಸ್ತಕ 'ನಾಗನಪದಗಳು', ವಿದೇಹ', ೭೭೧, ೧೭ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿಗೆ ಬರೆದು ಪಡೆಯಿರಿ.


ಯಾಂಡಲ್ ಯಿಂಗ್ ಯಿಡೀಕ್ಕ !
ಶೀಟ್ ಮ್ಯಾಗ್ ಮಡೀಕ್ಕ !

ಐ...ನಾಚ್ ಕ್ಯಾಕೆ ಮಲ್ಲಿ ?
ಯಾರೆ ಔರ್ ಇಲ್ಲಿ ?
ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು.
ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು
ಪತ್ತೇನ್ ಆಗೊಲ್ಲ !
ನೋಡೋರ್ ಯಾರಿಲ್ಲ !

ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ?
ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ?
ನಂಬು ನಿನ ಪಕದಾಗ ನಾನ್ ಇರೋಗಂಟ-
ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ !

ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ !
ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ !
ಆ ! ಅಂಗೆ ! ಕುದುರೆ ಮ್ಯಾಗ್ ಶಿಪ್ಪಾಯ್ ಕುಂತಂಗೆ !
ನಡದಿಂದ ಮ್ಯಾಗೆ ಮೈ ಇರಬೇಕ್ ನಿಂತಂಗೆ

ಇಲ್ಲಿ - ಈ ಕಾಲ್ ಇತ್ತ - ಇ ಪ್ಯಡಲ ಮ್ಯಾಗ್ ಆಕು ;
ಅಲ್ಲಿ - ಆ ಕಾಲ್ ತತ್ತ - ಆ ಪ್ಯಡಲ ತುಳಿ, ನೂಕು ;

ಇದು ಬಿರೇಕ್ - ಮುಟ್ಟ ಬ್ಯಾಡ್ ಇದನ್ !
ಮುಟ್ಟಿದರೆ ಯಿಕ್ ತೈತೆ ಮೊಕ್ಕೆ ಮೂರ್ ಒದೇನ !

ವಾಲ್ ಬ್ಯಾಡ ಅಂಗೆ ನನ ಮ್ಯಾಗೆ !
ಅದಕೆಲ್ಲ ವೊತ್ತು - ಇಳಿದ ಆ ಮ್ಯಾಗೆ !

ಕುಂತೀಯ ಬದ್ರ ?
ಕೈಯ ಬಿಡಲೀಯ ?
ಬೀಳೊ ವಂಗಾದ್ರೆ-
ಇಲ್ಲೀವ್ನಿ ಸಾಯ !

ಬಿಡಲಿಯಾ ? ಬಿಡತೀನಿ !
ಆ ! ಇದೋ ! ಬಿಟ್ಟೆ ! ಬಿಟ್ಟೆ !
ಎಲ ಮಲ್ಲಿ ! ಎನೆ ನೀನ್ ಇಂಗ್ ಓಗ್ತಿ-
-ವೋಗು ವಂಗ್ ಚಿಟ್ಟೆ !
ದುಂಬಿ ವೊದಂಗ್ ಓಗ್ತಿ, ಕಂಬ ಸುತ್ ದಂಗ್ ಸುತ್ತ್ ತಿ,
ಪ್ಯಡಲ ತುಳಿತುಳಿತಿ, ಸರ್ಕಸೇ ಮಾಡ್ ತಿ ;
ಯಾಂಡಲೇ ಕೈಬಿಡತಿ, ಆಚೀಚಿಗ್ ಇಂಗ್ ಆಡ್ ತಿ ;
ಕೈಯ ಕೊಟ್ಳಲ್ಲಪ್ಪೋ ನಂಗೆ ನನ್ ಯೆಡ್ ತಿ !

"ಸೈಕಲ್ಲ, ಮಾರಾಯ್ತಿ, ಕಲಿಸಿದೋರ್ ಯಾರೇ
ನಿಂಗೆ, ನನ ಗರತಿ ?"
"ಪ್ಯಾಟೆ ಅಣದೀರೆಲ್ಲ ಪಾಟಿ ಯೇಳೌರೆ
ನಂಗಿಲ್ಲಿ ನೂರಾರು ಸರತಿ "

ಮತ್ತೇನೆ ಮಡಗೀದಿ - ಭರತನಾಟ್ಯ ?
ಚಿಂತಿಲ್ಲ - ಯೇಳು ರಾಸ್ಯ "
ಯೇಳೋವ ಕೇಳೋವ -ಸಮಯ ಬತ್ತೈತೆ-
ಈಗ ಸಾಕೇಳಿ ಅಸ್ಯ."

'ಬತ್ತೀರ ಒಂದು ಕೈ ? ಡಬ್ಬಲ್ ಸವಾರೀ !"
ಬಾರ್ ಮ್ಯಾಗೆ ? ಊಂರೀ ನಿಜಾ ರೀ !"
" ಸದ್ಯ ಕತ್ಲಾಗ್ ಕಳದೆ ನನ್ನ ಮರುವಾದಿ !
ಬರದಿದ್ರೆ ಬಿಟ್ಟೀಯಾ ಬಜಾರಿ !"

 

-Venkatesh, Mumbai

Rating
No votes yet

Comments