ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨
(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ!
(೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುವುದರಲ್ಲಿ ತಪ್ಪೇನು?!
(೨೬೮) ಮಾಂಸದೊಳಗಿನ ಮಾಂಸವು ಕಾಮ. ಅದೇ ಮಾಂಸದೊಳಗೊಂದು ಲೋಹದ ಚೂರಿದ್ದರೆ ಅದು ಸಾವು ಸವರಿಹೋದ ದೇಹವೊಂದರ ಗುರುತು!
(೨೬೯) ಪಿತೃಪ್ರಾಧಾನ್ಯತೆಯು ಸ್ತ್ರೀವಾದದಿಂದ ಹುಟ್ಟಿಕೊಂಡದ್ದು. ಆ ಮುನ್ನ ಆ ಅಭ್ಯಾಸಕ್ಕೆ ಇನ್ನೂ ನಾಮಕರಣವಾಗಿರಲಿಲ್ಲವಷ್ಟೇ!
(೨೭೦) ಕಟ್ಟೆಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿ, ಗೋಜಲಿನಲ್ಲಿ ಅಂತ್ಯ ಕಾಣುವುದನ್ನು ಯುದ್ಧ ಮತ್ತು ವಿವಾಹವೆನ್ನುತ್ತೇವೆ!
Rating
Comments
ಉ: ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ...