ತಿಳಿಯದವಳು

ತಿಳಿಯದವಳು

ಚಿತ್ರ

ನಲ್ಲ
ಬಳಿಬಂದು 
ನುಡಿಯೆ
ಸವಿಮಾತುಗಳ

ಮೈಯೆಲ್ಲ
ಕಿವಿಯಾಯ್ತೊ
ಕಣ್ಣಾಯ್ತೊ
ಎಂಬುದನು
ನಾನರಿಯೆ! 

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) :

ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ
ಪ್ರಯಾಂತಿ ಮಮ ಗಾತ್ರಾಣಿ ಶ್ರೋತ್ರತಾಂ ಕಿಮು ನೇತ್ರತಾಮ್ ||

न जाने सम्मुखायाते प्रियाणि वदति प्रिये । 
प्रयान्ति मम गात्राणि श्रोत्रतां किमु नेत्रताम् ||

-ಹಂಸಾನಂದಿ

ಕೊ: ಇದೇ ಪದ್ಯ ಪದ್ಮಾವತೀ ಕೃತ ಶ್ರೀಕೃಷ್ಣ ಸೂಕ್ತಿಯಲ್ಲಿಯೂ ಕಂಡು ಬಂತು.ಗೂಗಲೇಶ್ವರನ ದಯದಿಂದ.
ಕೊ.ಕೊ: ಎರಡನೇ ಸಾಲಿಗೆ "ಸರ್ವಾಣ್ಯಂಗಾನಿ ಮೇ ಯಾಂತಿ" ಎನ್ನುವ ಪಾಠಾಂತರವೂ ಇದ್ದಹಾಗಿದೆ. ಅರ್ಥದಲ್ಲಿ ಅದರಿಂದ ಬದಲಾವಣೆಯೇನೂ ಆಗದು.
ಚಿತ್ರ ಕೃಪೆ: ರವಿವರ್ಮನ "The Stolen Interview"  ವರ್ಣಚಿತ್ರ (http://www.suagifts.com/Raja-Ravi-Varma-Painting/Raja-Ravi-Varma-paintin...)
 

 

Rating
No votes yet