ತಿಳಿವಿನ ಸೊಡರು

ತಿಳಿವಿನ ಸೊಡರು

ತೋಱಗೊಡುವುದೇ ಮಲಿನದ ಜಲದೊಳು ಪ್ರಭಾಕರ ಬಿಂಬವೇ ತಾನು
ತೋಱಗೊಡುವುದೇ ಚಂಚಲ ಮನದೊಳು ತಿಳಿವಿನ ಸೊಡರೇ ತಾನು

ಬಲು ಆೞದ ತಿಳಿನೀರಿನೊಳ್ ಕಾಂಬುದೇ ಒಳಗಣ ಹಲ ಬಗೆಯ ಜಂತು
ಜ್ಞಾನವಿಜ್ಞಾನದ ಸಮತುಲನವದಿಲ್ಲದೆ ಆನಂದವ ಪಡೆವುದದೆಂತು

ಬಲು ಕಠಿನವೂ ಆದ ತಪಸ್ಸುಗಳಿಲ್ಲದೆ ಏಕಾಗ್ರತೆಯೊದಗುವುದೆಂತು
ನಿತ್ಯೋಪಾಸನೆಯ ಮಾರ್ಗವನ್ನಱಿಯದೆ ತನ್ನ ತಾನಱಿಯುವುದೆಂತು

ಬತ್ತೀಸೆರಡರ ವಿದ್ಯೆಯನ್ನಱಿಯದೆ ಮನವದು ಅರಳುವುದೆಂತು
ಬತ್ತಿಯ ಬೆಳಗದೆ ಅಧಮನ ಮನದೊಳು ಭಕ್ತಿಯದುದಿಸುವುದೆಂತು

Rating
No votes yet