ತುಟಿ ಅಂಚಿನ ಮೌನ ಕವಿತೆ

ತುಟಿ ಅಂಚಿನ ಮೌನ ಕವಿತೆ

ಇಳಿ ಸಂಜೆಯ ತಿಳಿ ಬೆಳಕಲಿ
ನಿನ್ನ ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು
ಪ್ರಾಸ ಮರೆತ ಪದ ಪುಂಜದಲಿ
ನಿನ್ನ ತುಟಿ ಅಂಚಿನ ಮೌನವೇ ಕವಿತೆಯು

ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ
ಹುಡುಕುತಲಿ ಅಲೆಯುತಲಿರುವೆ 
ಜಗವೆಲ್ಲ  ಬರಡಾಗಿ ನನ್ನೊಳಗೆ
ನೀನಿರೆ ಅನುದಿನ ಅಷ್ಟೇ ಸಾಕು

ನಿನಗಷ್ಟೆ ಬರೆದ ಸಾಲನು ನಿನ್ನ
ಕಿವಿ ಅಂಚೆಯಲಿ ಹಾಕುತಲಿರುವೆ 
ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ
ಕೇಳಬೇಕಿದೆ ಮನದ ಈ ಮಾತು

 

ಕಾಮತ್ ಕುಂಬ್ಳೆ

Rating
No votes yet

Comments

Submitted by sasi.hebbar Fri, 12/07/2012 - 18:12

ಇಳಿಸಂಜೆಯ ನಿಮ್ಮ ಈ ಹನಿಗವನ,
ಕದಡಿತು ಅಂತರಾಳದ ಮನ,
ನೆನಪಿಸಿತು ಹಳೆಯ ಒಂದು ಭಾವನಾ,
ಇದ ಬರೆದ ಕವಿ ನೀವೇ, ಧನ್ಯ.