ತುಳಿದವರು ಕಂಡಂತೆ

ತುಳಿದವರು ಕಂಡಂತೆ

Copyright © Mahesh Kumar KS 2016
https://maheshkumarks.wordpress.com/
“ಓಪನ್ ಆಗಿ ಹೇಳ್ತಾ ಇದೀನಿ, ಕನ್ನಡಿಗರೇ ನನ್ನ ತುಳಿತಾ ಇರೋದು !!” ಎಂದು ಹೇಳಿದ್ದು ಹುಚ್ಚ ವೆಂಕಟ್. ಆತ ಒಂದು ಸಿನಿಮಾ ಮಾಡಿದ್ದ. ಆತನೇ ಅದಕ್ಕೆ ನಾಯಕ ಮತ್ತು ನಿರ್ಮಾಪಕ. ಆತನ ಪ್ರಕಾರ ಚಿತ್ರ ತುಂಬಾ ಚೆನ್ನಾಗಿದೆ. ಆದರೆ ಅದನ್ನು ನೋಡದೆ ಕನ್ನಡ ಜನತೆ ಆತನನ್ನು ತುಳಿದರಂತೆ. ನಾನು ಒಬ್ಬ ಕನ್ನಡಿಗನಾದ್ದರಿಂದ ಇದರ ಬಗ್ಗೆ ಪ್ರತಿಕ್ರಯಿಸುವುದು ನನ್ನ ಕರ್ತವ್ಯ. ಕೆಲವು ದಿನದ ಹಿಂದೆ ಯಾವುದೋ ಒಂದು ಹಿಂದಿ ಚಿತ್ರವನ್ನು ಎಷ್ಟೋ ಜನ ನೋಡದೆ ಭಹಿಷ್ಕರಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ನೋಡಬೇಡಿ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಯಾರಿಗೆ ಆ ಚಿತ್ರ ಅಥವಾ ನಟ ಇಷ್ಟವೋ ಅವರು ಹೋಗಿ ನೋಡಿದ್ದು ಇವತ್ತಿಗೆ ಇತಿಹಾಸ. ಮೊದಲನೆಯದಾಗಿ, ಹುಚ್ಚ ವೆಂಕಟ್ ಸಿನೆಮಾಗೆ ಈ ತರಹದ ಯಾವುದೇ ಬಹಿಷ್ಕಾರದ ಸಂದೇಶಗಳು ಹಂಚಿಯಯಾಗಿರಲಿಲ್ಲ. ಎರಡನೆಯದಾಗಿ, ಯಾವುದೇ ಹೊಸ ಕಲಾವಿದರ ಚಿತ್ರಗಳು ತೆರೆಗೆ ಬಂದರೆ ಜಾಹಿರಾತು ನೀಡುವುದು ಅವಶ್ಯವಿರುತ್ತದೆ. ಆದರೆ ಹುಚ್ಚ ವೆಂಕಟ ಸಿನಿಮಾ ಮಾಡಿದ್ದರು ಎಂದು ತಿಳಿದಿದ್ದೆ ಅವರು ಸುದ್ದಿ ವಾಹಿನಿಗಳಲ್ಲಿ ಚಿತ್ರ ಪ್ರದರ್ಶನದ ನಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗ. ಇದಲ್ಲದೆ ಆತ ತನಗೆ ಚಿತ್ರಮಂದಿರ ಬೆಳಗ್ಗೆ ಆಟ ಎಂದು ಹೇಳಿ ಮಧ್ಯಾನಕ್ಕೆ ಚಿತ್ರ ಪ್ರದರ್ಶನ ಮಾಡಲು ಅವಕಾಶ ಕೊಟ್ಟರೆಂದು ಹೇಳಿದರು. ಚಿತ್ರಮಂದಿರದವರೂ ಕೂಡ ಆದಷ್ಟೂ ಬೇಡಿಕೆ ಇರುವ ಚಿತ್ರಗಳಿಗೆ ಪ್ರದರ್ಶನ ನೀಡಿವ ಅವಕಾಶ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಅವರು ಹೊಸ ನಟ ವೆಂಕಟ ಅವರಿಗೆ ಅವಕಾಶ ಕೊಡದೆ ಇರಬಹುದು. ನನ್ನ ಅಭಿಪ್ರಾಯ ಏನೇ ಇರಲಿ ಹುಚ್ಚ ವೆಂಕಟ ಪಾಲಿಗೆ ಕನ್ನಡಿಗರು ಆತನನ್ನು ತುಳಿದಿದ್ದಾರೆ. ಅಲ್ಲಿಗೆ ಅದರಲ್ಲಿ ನಾನೊಬ್ಬ ಎಂಬಂತಾಯಿತು. ನಾನು ಅದನ್ನು ಸ್ವೀಕರಿಸುವ ರೀತಿಯೇ ಬೇರೆ. ನನ್ನ ಅಭಿಪ್ರಾಯಗಳೇ ಬೇರೆ. ಅಲ್ಲಿಗೆ ನಾನು ಅಂದರೆ ತುಳಿದವನು ಕಾಣುವ ರೀತಿ ಬೇರೆ. ಅಲ್ಲಿಗೆ ತುಳಿದವರಿಗೂ ಒಂದು ಅಭಿಪ್ರಾಯ ಇದೆ, ಅದೇ “ತುಳಿದವರು ಕಂಡಂತೆ”. ಕಳೆದ ವರ್ಷ ನೀವು ಒಂದು ಸಿನಿಮಾ ಬಗ್ಗೆ ಕೇಳಿರಬಹುದು “ಉಳಿದವರು ಕಂಡಂತೆ”. ಈ ಚಿತ್ರದಲ್ಲಿ ಒಂದೇ ದೃಶ್ಯವನ್ನು ಉಳಿದವರು, ಅಂದರೆ ಮುಖ್ಯ ಪಾತ್ರದಲ್ಲಿ ಇರುವವರು ಬಿಟ್ಟು ಬೇರೆಯವರು, ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ “ಸೈಡ್ ಆಕ್ಟರ್ಸ್”(side actors) ಹೇಗೆ ನೋಡಿದ್ದರು ಎಂಬ ಬಗ್ಗೆ. ಈ ಚಿತ್ರದಲ್ಲಿ ಒಂದೇ ದೃಶ್ಯವನ್ನು, ಉಳಿದವರ ದೃಷ್ಟಿಕೋನದಿಂದ ಚಿತ್ರಿಸಲಾಗಿದೆ. ಹುಚ್ಚ ವೆಂಕಟ್ ಮತ್ತು ಆತನ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಆತನ ಬಗ್ಗೆ ಅಣುಕುಗಳು ಶುರುವಾದವು. ಅವುಗಳಲ್ಲಿ ಉಳಿದವರು ಕಂಡಂತೆ ಚಿತ್ರದ ಶೀರ್ಷಿಕೆ ಮತ್ತು ಹುಚ್ಚ ವೆಂಕಟ ಅವರ ಅಣುಕು ಮಾಡಿ ಚಿತ್ರದ ನಾಯಕನ ಚಿತ್ರಕ್ಕೆ ವೆಂಕಟ ಅವರ ಚಿತ್ರ ಲಗತ್ತಿಸಿ ತುಳಿದವರು ಕಂಡಂತೆ ಎಂದು ಅಣುಕು ಮಾಡಿರುವುದೂ ಒಂದು. ಆದರೆ ತುಳಿದವರು ಕಂಡಂತೆ ಒಂದು ಚರ್ಚಿಸಬಲ್ಲ ವಿಷಯವೇ ಆಗಿದೆ.
ಪ್ರತಿವಾರ ಜ್ಹೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್ ವೀಕ್ಷಿಸುವಾಗ ಒಮ್ಮೆ ಉಮಾಶ್ರೀ ಅವರು ಕೂಡ ತಮ್ಮನು ತುಳಿಯುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಒಂದು ಕಾಲದಲ್ಲಿ ಏನ್ ಎಸ್ ರಾವ್ ಮತ್ತು ಉಮಾಶ್ರೀ ಇರುವ ದೃಶ್ಯಗಳು ಪ್ರಖ್ಯಾತಿ ಪಡೆದಿದ್ದರಿಂದ, ನಾಯಕ ನಟರೂ ಕೂಡ ಅವರ ಕೆಲವು ದೃಶ್ಯಗಳನ್ನು ಚಿತ್ರದಿಂದ ತೆಗೆಸುತ್ತಿದ್ದರು ಎಂದು ಹೇಳಿದ್ದಾರೆ. ಯಾರು ಎಂಬುದನ್ನು ಅವರು ರಮೇಶ್ ಗೂ ಹೇಳಲಿಲ್ಲ, ಮಹೇಶ್ ಗೂ ಹೇಳಲಿಲ್ಲ!!. ಇಲ್ಲಿ ನಾಯಕ ನಟರನ್ನು ಒಂದು ವೇಳೆ ಈ ಬಗ್ಗೆ ವಿಚಾರಿಸಿದರೆ ಅವರು ಅಭಿಪ್ರಾಯಗಳು ಬೇರೆ. ಒಂದು ಚಿತ್ರದ ಮುಖ್ಯ ಆಕರ್ಷಣೆ ನಾಯಕನಟ. ಒಂದು ಚಿತ್ರ ಹಾಸ್ಯ ಕಲಾವಿದರಿಂದ ಜನಪ್ರಿಯವಾದರೆ, ಮುಂದೊಂದು ದಿನ ನಾಯಕ ನಟನ ಪ್ರಾಮುಖ್ಯತೆ ಕಡಿಮೆ ಆಗುವ ಸಾದ್ಯತೆ ಇರುತ್ತದೆ. ಕೆಲವೊಮ್ಮೆ ನಾಯಕ ನಟರಿಲ್ಲದೆ ಸಿನಿಮಾಗಳು ಹಿಟ್ ಆಗುವ ಸಂಭವ ಕೂಡ ಇರುತ್ತದೆ. ಹೀಗಾಗಿ ಕೆಲವರು ಚಿತ್ರದ ದೃಶ್ಯಗಳನ್ನು ತೆಗೆದುಹಾಕಿಸುತ್ತಿದ್ದರು. ನಂತರದ ದಿನಗಳಲ್ಲಿ ಉಮಾಶ್ರೀ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಕೂಡ ಕೆಲವರು ವಿರೋಧಿಸಿದರು. ಅಲ್ಲೂ ಬೇರೊಬ್ಬರು ಬೆಳೆಯಲು ಅವರನ್ನು ತುಳಿದರು. ನಂತರದಲ್ಲಿ ಉಮಾಶ್ರೀ ಅವರಿಗೆ ಟಿಕೆಟ್ ಸಿಕ್ಕಿ, ಚುನಾವಣೆಯಲ್ಲಿ ಗೆದ್ದು, ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ.
ಪ್ರಪಂಚ ನಿಮ್ಮನು ನೋಡುವ ರೀತಿಯೇ ಬೇರೆ. ನೀವು ಕಷ್ಟದಲ್ಲಿ ಇದ್ದಾಗ ಕೂಡ ಯಾರೂ ಸಹಾಯಕ್ಕೆ ಬರುವುದಿಲ್ಲ. ಪ್ರಪಂಚದಲ್ಲಿ ನಿಮ್ಮ ಉದ್ಧಾರವನ್ನು ಬಯಸುವವರು ತುಂಬಾ ಕಡಿಮೆ. ಆದರೆ ನೀವು ಉದ್ದಾರ ಆಗುತ್ತಿದ್ದೀರ ಎಂದರೆ ನಿಮ್ಮ ಕಾಲು ಎಳೆಯುವವರು ನೂರು ಜನ. ಯಾವುದೋ ಒಂದು ಒಳ್ಳೆ ಕೆಲಸ ಮಾಡಲು ಹೊರಟರೆ ಅದರ ಬಗ್ಗೆ ಟೀಕೆ ಮಾಡುವವರು ಹತ್ತು ಜನ. ಹಾಗೆಂದ ಮಾತ್ರಕ್ಕೆ ಎಲ್ಲವೂ ತಪ್ಪು ಎಂದು ಹೇಳಲು ಆಗದು. ಕೆಲವರ ಮಾತನ್ನು “constructive criticism” ಎಂದು ಕರೆಯಬಹುದು. ಅವರು ನಿಮ್ಮ ಒಳ್ಳೆಯದನ್ನೇ ಬಯಸಿ ಮಾತನಾಡಿರುತ್ತಾರೆ. ವಿಷಯ ಹಾಗಾದರೆ ತೊಂದರೆ ಇಲ್ಲ. ಅದೇ “destructive criticism” ಆದರೆ ಏನು ಮಾಡಬೇಕು? ಅದು ತುಂಬಾ ಸುಲಭ. ಟೀಕೆ ಮಾಡುವರ ಬಾಯಿ ಮುಚ್ಚುವ ಹಾಗೆ ನಿಮ್ಮ ಕೆಲಸ ಇರಲಿ. ಟೀಕೆಗೆ ಮತ್ತೊಂದು ಟೀಕೆಯೇ ಉತ್ತರವಾದರೆ, ಅದು ರಾಜಕೀಯ ಕೆಸರೆರಚಾಟವಾಗುತ್ತದೆ. ಪ್ರಪಂಚ ಎಲ್ಲರಿಗೂ ಅವಕಾಶ ನೀಡುತ್ತದೆ. ಅವಕಾಶ ಸಿಕ್ಕಾಗ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸಿ, ನಿಮಗೆ ಇಷ್ಟವಾಗುವುದೇ ಬೇಕೆಂದರೆ ಆದಷ್ಟು ಶ್ರದ್ದೆಯಿಂದ ಶ್ರಮವಹಿಸಿ ದುಡಿಯಬೇಕು. ಇತರರೊಂದಿಗೆ ನಿಮ್ಮನು ಹೋಲಿಕೆ ಮಾಡಿಕೊಳ್ಳುವುದು ಅದು ನಿಮಗೆ ನೀವು ಮಾಡಿಕೊಂಡ ಅವಮಾನವೇ ಸರಿ. ನಿಮ್ಮ ಸಾಧನೆ ಬೇರೆಯವರಿಗೆ ಪೂರಕವಾಗದಿದ್ದರೂ, ಮಾರಕವಾಗಬರದು. ಮಾರಕವಾದರೆ ನೀವು ಆ ತುಳಿದವರ ಗುಂಪಿಗೆ ಸೇರುತ್ತಿರಿ. ಜೋಕೆ !!!!.
ಹೌದೂ, ಈ ತುಳಿಯುವುದು ಮತ್ತು ಅಸೂಯೆ ಪಡುವುದು ಎರಡು ಒಂದೇನ? ಎಂದರೆ ಖಂಡಿತ ಅಲ್ಲ. ನಿಮ್ಮ ಶ್ರಮವನ್ನು ಕಾಣುವವರು 4 ತರಹದ ಜನ. ನಿಮ್ಮ ಶ್ರಮದಲ್ಲಿ ನಂಬಿಕೆ ಇರಲಿ ಬಿಡಲಿ, ನಿಮಗೆ ಸಹಾಯ ಮಾಡುವವರು. ಅವರನ್ನು ಹಿತೈಷಿಗಳು ಅಥವಾ ನಿಮ್ಮ ಶುಭಾಕಾಂಕ್ಷಿಗಳು ಎಂದು ಕರೆಯಬಹುದು. ನಿಮ್ಮ ಶ್ರಮದಲ್ಲಿ ನಂಬಿಕೆ ಇಲ್ಲದೆ ನಿಮಗೆ ಸಹಾಯ ಮಾಡದೆ ಇರುವವರು. ಇವರನ್ನು ಪ್ರಾಕ್ಟಿಕಲ್ ಎಂದು ಕರೆಯಬಹುದು. ಮೂರನೇ ತರಹದವರು ನಿಮ್ಮ ಮೇಲೆ ನಂಬಿಕೆ ಇರುತ್ತದೆ. ಅದಕ್ಕೆ ಅಸೂಯೆ ಪಡುತ್ತಾರೆ. ಅವರು ಕೇವಲ ಅಸೂಯೆ ಪಡುವ ವರ್ಗ. ಹೆದರಬೇಡಿ !!! ಅವರು ಯಾರನ್ನು ನೋಡಿದರೂ ಅಸೂಯೆ ಪಡುತ್ತಾರೆ ಅವರ ಬದುಕಿನ ಶೈಲಿಯೇ ಬೇರೆ. ಅವರಿಂದ ನಿಮಗೆ ಅಪಾಯವಿಲ್ಲ. ಆದರೆ ಇಲ್ಲಿ ಇನ್ನೊಂದು ಮಿನಿ ವರ್ಗ ಇದೆ, ಸ್ವಲ್ಪ ಅಸೂಯೆ ಪಟ್ಟು, ಅವರೂ ನಿಮ್ಮ ಮಾರ್ಗ ಅನುಸರಿಸಿ ಅಥವಾ ನಿಮ್ಮಂತೆ ಕಷ್ಟ ಪಟ್ಟು ನಿಮ್ಮ ಸ್ಥಾನಕ್ಕೆ ತಲುಪುವ ಪ್ರಯತ್ನ ಮಾಡುತ್ತಾರೆ. ಅದನ್ನು “healthy competition” ಎಂದು ಕರೆಯಬಹುದು. ನಾಲ್ಕನೆ ವರ್ಗವೇ ಜನ ಮಾತ್ರ ನಿಮ್ಮನ್ನು ತುಳಿಯುವ ವರ್ಗದವರು. ಅವರು ನಿಮ್ಮ ಪ್ರತೀ ಪ್ರಯತ್ನದಲ್ಲಿ ಜೊತೆಗಿದ್ದು, ನಿಮ್ಮ ಪ್ರಯತ್ನ ಹಾಳಾಗಲು ಪ್ರಯತ್ನಿಸುತ್ತಾರೆ.!!!! ಅವರಿಂದ ದೂರವಿರಬೇಕು. ಮೊದಲೇ ಹೇಳಿದಂತೆ ಈ ತುಳಿಯುವವರಿಗೆ ಅವರದ್ದೇ ಆದ ಸಮಜಾಹಿಷಿಗಳು ಇರಬಹುದು. ಅದಕ್ಕೂ ನಿಮಗೂ ಸಂಭಂದ ಇಲ್ಲ. ನಿಮ್ಮ ಗೆಲುವೇ ನಿಮಗೆ ಮುಖ್ಯ. ಮೊದಲು ಅಂತವರನ್ನು ಗುರುತಿಸಿ, ಆದಷ್ಟೂ ದೂರ ಇಡಿ. ನಿಮ್ಮ ಪ್ರಯತ್ನಕ್ಕೆ ಅಡ್ಡಗಾಲು ಹಾಕುವವರಿಗೆ ನೀವು ಕೊಡಬೇಕಾದ ಉತ್ತರ  ನಿಮ್ಮ ಸಾಧನೆಯಲ್ಲದೆ ಮತ್ತೊಂದಿಲ್ಲ.
ಪ್ರಪಂಚ ಎಲ್ಲರಿಗೂ ಅವಕಾಶ ನೀಡುತ್ತದೆ ಮತ್ತು ನಾವೆಲ್ಲ ಇರುವುದೇ ಒಂದೇ ಭೂಮಿ, ಯಾಕೆ ನಮ್ಮಲ್ಲೇ ವ್ಯತ್ಯಾಸಗಳು “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂದು ಬಾಳಲು ಸಾದ್ಯ ಇಲ್ಲವೆ ? ಸಾದ್ಯ ಇದೆ. ಆದರೆ ಅದರಿಂದ ಸಮಾಜದ ಉದ್ಧಾರ ಖಂಡಿತ ಸಾಧ್ಯ ಇಲ್ಲ. ಹೇಗೆ ಎನ್ನುತ್ತಿರಾ? ಹೀಗೆ ಯೋಚಿಸಿ. ಒಂದು ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿರುತ್ತಾರೆ. ಇಬ್ಬರಿಗೂ ಒಂದೇ ಸಂಭಳ. ಈ ಇಬ್ಬರಿಗೂ ಒಂದೇ ವಾರ್ಷಿಕ ಬಡ್ತಿ ಆದರೆ, ಹೆಚ್ಚುವರಿ ಕೆಲಸ ಮಾಡಲು ಯಾರೂ ಒಪ್ಪುವುದಿಲ್ಲ. ಹಾಗೆ ಕೆಲಸದಲ್ಲಿ ಅಸಡ್ಡೆ ಕೂಡ ತೋರುತ್ತಾರೆ. ಅದೇ ಅವರ performance ಮೇಲೆ ಬಡ್ತಿ ಸಿಕ್ಕರೆ ಯಾರೊಬ್ಬರಾದರೂ ಶ್ರಮವಹಿಸಿ ಕೆಲಸ ಮಾಡುತ್ತಾರೆ. ಅದೇ ಎಲ್ಲ ರಂಗದಲ್ಲು ನಡೆಯುವುದು. ಎಲ್ಲರಿಗೂ ಒಂದೇ ಅಂಕ ಬಂದು ಒಂದೇ ಕಾಲೇಜಿನಲ್ಲಿ ಸೀಟು ಸಿಗುವ ಹಾಗಿದ್ದರೆ ಯಾರು ಓದುತ್ತಾರೆ ? ಅದಕ್ಕೆ ಪ್ರಪಂಚದ ಪ್ರತಿಯೊಂದು ವ್ಯತ್ಯಾಸಗಳನ್ನೂ ಒಪ್ಪಿಕೊಳ್ಳಬೇಕು.
ನಮ್ಮ ಜೀವನವೇ ಒಂದು ತರ್ಕ. ಅದು ಯಾರೋ ಮೊದಲೇ ಬರೆದಿಟ್ಟ ಪುಸ್ತಕವಲ್ಲ. ನಾವೇ ಬರೆಯಬೇಕಾದ ಪುಸ್ತಕ. ಕೆಲವು ಪುಟಗಳು ಸುಂದರ. ಮತ್ತೆ ಹಲವು ಘೋರ. ಜೀವನದಲ್ಲಿ ಕಷ್ಟಗಳು ಬರುತ್ತಾ ಹೋದಂತೆ ಅದನ್ನು ಬಗೆಹರಿಸುತ್ತ ಹೋಗಬೇಕು. ಖುಷಿಯಾದಾಗ ಮತ್ತೆ ಮತ್ತೆ ನಗಬೇಕು. ಪ್ರಪಂಚ ನಮಗೆ ನೀಡುವ ಆಶ್ಚರ್ಯಗಳನ್ನು ಅತ್ಯಂದ ಪ್ರೀತಿಯಿಂದ ಅನುಭವಿಸಬೇಕು. ಎಲ್ಲವೂ ಪ್ಲಾನಿಂಗ್ ನ ಪ್ರಾಂತ್ಯಕ್ಕೆ ಒಳಪಡುವುದಿಲ್ಲ. ಗಣಿತದಲ್ಲಿ ಪ್ರಾಬಬಿಲಿಟಿ ಎಂಬ ಒಂದು ಪದವಿದೆ. ಜೀವನದಲ್ಲಿ ಏನು ನಡೆಯಬಹುದು ಎನ್ನುವುದಕ್ಕೆ ಪ್ರಾಬಬಿಲಿಟಿ ಎಷ್ಟು ಗೊತ್ತ ? 0. ಹೌದು ನಾಳೆ ಏನು ನಡೆಯಬಹುದು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ನಾಳೆ ಬದುಕಿರುತ್ತೇವೆ ಎಂಬ ನಂಬಿಕೆ ಕೂಡ ಇರುವುದಿಲ್ಲ. ರಾತ್ರಿ ಮಲಗುವಾಗ ಇಡ್ಲಿ ಇಟ್ಟಿಗೆ ಅಣಿ ಮಾಡಿ ಮಲಗುತ್ತೇವೆ. ಎದ್ದರೆ ಇಡ್ಲಿ , ಇಲ್ಲದಿದ್ದರೆ ವಡೆ !!!! (Joke:ಅಂತರ್ಜಾಲ ಸಂಗ್ರಹ )

Rating
No votes yet