ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ತೃಪ್ತ
ಊರ ದಾರಿಯಲಿ ಹುಡುಕುತ್ತ ಬಂದ
ಬಾಲ್ಯದ ಗೆಳೆಯನೊಬ್ಬ,
ನನಗೆ ಕುಸ್ತಿ ಕಲಿಸಿದ ಪೈಲ್ವಾನ ಅವ
ಸಣಕಲನೀಗ,
ಸಾಯಲೂ ದುಡ್ಡಿಲ್ಲ,
ಸತ್ತರೆ ಮಣ್ಣಿಗೂ!
ಏನಾದರೂ ಮಾಡು ಎಂದ,
ನಾನೋ, ಹೆಳವ ಅವನ ಮುಂದೆ, ಜೇಬಿಲ್ಲದ ಫಕೀರ
ಮತ್ತೊಮ್ಮೆ ನನ್ನನ್ನು ಮುಟ್ಟದೇ ಚಿತ್ ಮಾಡಿದ್ದ!
ಕಣ್ಣುಗಳ ಕಟ್ಟೆ ಒಡೆಯಿತು, ತಬ್ಬಿಕೊಂಡು ಅತ್ತುಬಿಟ್ಟೆ
ಇಷ್ಟು ಸಾಕೆಂದ! ಹೊರಟೇ ಬಿಟ್ಟ!
ಸುದ್ದಿ ಕೇಳಿದೆ, ಅವ ಈಗ ನೆನಪಷ್ಟೆ!
!
Rating
Comments
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ,
.
ತೃಪ್ತಿಯಾಳ ಅಗಲದುದ್ದಕ್ಕೂ ಹುಡುಕಿದರೂ ಅಲ್ಲಿಯೂ ಅತೃಪ್ತಿಯೆ ಸಿಗಬಹುದಾದ ಕಾಲಧರ್ಮದಲ್ಲಿ ಈ ಕವನದ ಗೆಳೆಯನ ತೃಪ್ತಿಯ ಅಪಾರ ಅಳತೆಗೆ ಸಿಗದ ವ್ಯಾಪ್ತಿಯುಳ್ಳದ್ದು - ನಿಮ್ಮೀ ಕವನದ ಹಾಗೆ!
In reply to ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ನಾಗೇಶ್ ಜಿ, ತಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯ. ವಂದನೆಗಳು
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಇತ್ನಾಳರೆ ನನ್ನ ಪ್ರತಿಕ್ರಿಯೆ ಬರಿಯ ಆಳವಾದ ಮೌನ ಅಷ್ಟೇ,,,
In reply to ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ by naveengkn
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ನವೀನ ಜಿ ಕೆ ರವರೇ, ಹೌದು, ತಮ್ಮ ಮೌನವೇ ಎಲ್ಲವನ್ನೂ ಹೇಳುತ್ತಿದೆ. ಪ್ರತಿಕ್ರಿಯೆಗೆ ಹಾಗೂ ಮೌನದ ಮೆಚ್ಚುಗೆಗೆ ಧನ್ಯವಾದಗಳು
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಮುಟ್ಟದೇ ಚಿತ್ ಮಾಡಿದುದು!! ಹನಿಗೂಡಿಸುವ ಸಾಲುಗಳು. ಧನ್ಯವಾದಗಳು, ಇಟ್ನಾಳರೇ.
In reply to ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಕವಿನಾ ಸರ್ ಜಿ, ತಮ್ಮ ಮೆಚ್ಚುಗೆಗೆ ಧನ್ಯ. ವಂದನೆಗಳು ಸರ್.
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಜಾದೂ ಕಿ ಜಪ್ಪಿ.
In reply to ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ by ಗಣೇಶ
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಧನ್ಯವಾದ ಗಣೇಶ್ ಜಿ, ಹೌದು ಜಾದೂ ಕಿ ಜಪ್ಪಿ ನೆನಪಾಯಿತಲ್ಲವೆ. ವಾಟ್ ಏ ಮೆಟಾಫೋರ್, ಥಾಂಕ್ಯೂ. ಸರ್
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ಕವನ ಮನ ಮಿಡಿಯುವಂತಿದೆ, ಇಟ್ನಾಳರೆ.
In reply to ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ by makara
ಉ: ತೃಪ್ತ - ಲಕ್ಷ್ಮೀಕಾಂತ ಇಟ್ನಾಳ
ತಮ್ಮ ಆತ್ಮೀಯ ಸ್ಪಂದನೆಗೆ ವಂದನೆ, ಅಭಿವಂದನೆ 'ಮಕರ' ಅವರೇ,ಧನ್ಯವಾದಗಳು