ತೆರೆದ ಕಣ್ಣು

ತೆರೆದ ಕಣ್ಣು

ತೆರೆದ ಕಣ್ಣುಗಳ ಎಳೆರವಿ ಕಿರಣಗಳಿಗೆ
ಅರಳಿದೆ ಮುಗ್ಧತೆಯ ಚೈತನ್ಯದ ಇನ್ನೊಂದು ಪದವಾಗಿ
ನಕ್ಕೆ ನಾ ವಸುಂಧರೆಯ ತೆಕ್ಕೆಯಲಿ
ಕಂಡೆನಾ ಜಗವ ಆ ಹಸಿರಿನ ಸೆರಗಲಿ
ಕಲೆತೆ ಅದೆಷ್ಟು ಪಾಠಗಳ ಆ ಪಕ್ಶಿಗಳ ಕಂಠದಲಿ

ಪಯಣ ಸಾಗಿತ್ತು ಎಷ್ಟೋ ಕನಸುಗಳ ಹೊತ್ತು
ಹೊಸ ಅನುಭವಗಳ ನಡುವೆ ಇತ್ತು ಚಿಂತೆಗಳ ಕಂತೆ
ನೆತ್ತಿಯ ಮೇಲಿನ ಮಾರ್ತಂಡ
ಮೇಲೆ ಸಂಭಂಧಗಳ ಸರಪಳಿಗಳು ಭವದ ಬಂಧನಕೆ

ಕುಂದಿದವು ಮೈ-ಮನಗಳು
ಬಾಗಿದ್ದ ಹೂಗೆ ಬೇಕಿತ್ತು ಆಸರೆ
ಇಳಿಯುತಿದ್ದ ಭಾನು, ಆಸೆಗಳು ಹಿಂದೆ
ತಿಳಿಯ ಬಣ್ಣಗಳು,ತೆರೆಸಿದವು ಕಣ್ಣುಗಳ
ಆದರೆ ಆಗಲೆ ಆಗಿತ್ತು ಕತ್ತಲು

Rating
No votes yet

Comments