ತೆರೆಯೋ ಬಾಗಿಲನು..
"ಪ್ರೇಮಕವಿ ತಮ್ಮಣ್ಣ"ನವರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಂದರ್ಶನಕ್ಕೆ ಟೈಮ್ ಕೊಟ್ಟಿದ್ದರಲ್ವಾ.. ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ...ಬಾಗಿಲು ಬಡಿದೆ...ಬಾಗಿಲು ತೆರೆದ ಕೂಡಲೇ ಕಿಟಾರನೆ ಕಿರುಚಿ ಬಿದ್ದೆನು..
ನನ್ನ ಕೈಲಿದ್ದ ಚೀಲದಿಂದ ಬಾಟಲನ್ನು ತೆಗೆದು ಅದರಲ್ಲಿದ್ದ ದ್ರವವನ್ನೇ ಮುಖಕ್ಕೆ ಚಿಮುಕಿಸಿ, ಕುಡಿಸಿ, ನನ್ನನ್ನು ಎಬ್ಬಿಸಿದರು. ಮಸುಕು ಮಸುಕಾಗಿ ಒಂದೊಂದೇ ಗೋಚರಿಸಿತು. ಪೂರ್ತಿ ಕೋಣೆಯಲ್ಲಿ ಬೀಡಿಹೊಗೆ ತುಂಬಿತ್ತು. ಟೇಬಲ್ ಮೇಲೆ ಕ್ಯಾಂಡ್‌ಲ್ ಉರಿಯುತ್ತಿತ್ತು. ಆ ಬೆಳಕಲ್ಲಿ ಪ್ರೇಮಕವಿ ಪ್ರೇತದಂತೆ ಕಂಡದ್ದರಿಂದ ಭಯಗೊಂಡಿದ್ದೆ.
"ತಮ್ಮಣ್ಣನವರೆ, ಕರೆಂಟು ಹೋಯಿತಾ?" ಎಂದು ಕೇಳಿದೆ.
"ಹೋಗಿಲ್ಲ, ಕರೆಂಟು ಉಳಿತಾಯ ಮಾಡುತ್ತಿದ್ದೇನೆ. ರಾಜ್ಯಕ್ಕಾಗಿ!! ’ಕ್ಯಾಂಡ್‌ಲ್ ಉರಿಸಿ, ಕರೆಂಟು ಉಳಿಸಿ’ ನನ್ನ ಕವನ ಓದಿಲ್ವಾ? ಇದರಿಂದಇನ್ನೂ ಒಂದು ಲಾಭವಿದೆ. ಬೀಡಿ ಮುಗಿದ ಹಾಗೆ ಹೊತ್ತಿಸಲು ಬೆಂಕಿಪಟ್ನ ಹುಡುಕುವ ತಾಪತ್ರಯವಿಲ್ಲ." ಎಂದರು.
"ಸರ್, ನಿಮ್ಮದು ಬಹು ದೊಡ್ಡ ತ್ಯಾಗ. ರಾಜ್ಯಕ್ಕಾಗಿ ತಮ್ಮ ಆರೋಗ್ಯವನ್ನೇ ಬಲಿಕೊಡುತ್ತಿದ್ದೀರಿ" ಎಂದೆ.
"ಆರೋಗ್ಯಕ್ಕೆ ಏನಾಗಿದೆ? ತೆಳ್ಳಗಾಗಲು ಜಿಮ್, ಏರೋಬಿಕ್ಸ್ ಎಂದು ಸಾವಿರಗಟ್ಟಲೆ ಖರ್ಚು ಮಾಡುತ್ತಾರೆ. ನಾನು ಇವೆರಡು ಔಷಧಿಗಳಿಂದಾಗಿ ತೆಳ್ಳಗಾಗಿದ್ದೇನೆ"
"ಇದು ಔಷಧಿಗಳಾ!?"
"ಹೊಟ್ಟೆಯಿಂದ ಮೇಲ್ಭಾಗದ ಕ್ರಿಮಿಗಳನ್ನು ಬೀಡಿ ನಾಶಮಾಡಿದರೆ, ಹೊಟ್ಟೆಯೊಳಗಿನ ಕ್ರಿಮಿಗಳನ್ನು ಬಾಟ್ಲ್ ಕೊಲ್ಲುವುದು. ಬೀಡಿ ಬಾಟ್‌ಲ್ ಕೀಪ್ಸ್ ದಿ ಡಾಕ್ಟರ್ ಎವೇ..ಹ್ಹ..ಹ್ಹ"
ಈ ಔಷಧಿಗಳಿಂದಾಗಿ ಅವರು ಎಷ್ಟು ಸ್ಲಿಮ್ ಆಗಿದ್ದಾರೆಂದರೆ, ಫ್ಯಾನ್ ಗಾಳಿಗೆ ಹಾರಿ ಹೋಗಬಾರದೆಂದು ತಾವು ಕುಳಿತುಕೊಳ್ಳುವ ಚೇರ್‌ಗೆ ಸೀಟ್‌ಬೆಲ್ಟ್ ಹಾಕಿಸಿದ್ದಾರೆ! ಮೆಲ್ಲನೆ ಕೇಳಿದೆ-"ತಮ್ಮ ಪತ್ನಿ ಊರಿಗೆ ಹೋಗಿದ್ದಾರಾ?"
-"ಇಲ್ಲ. ಆ ಮುಚ್ಚಿದ ಬಾಗಿಲು ನೋಡು. ಆ ಕೋಣೆಯಲ್ಲಿದ್ದಾಳೆ. ಕುಡಿತ, ಬೀಡಿ ಬಿಟ್ಟರೆ ಮಾತ್ರ ನನಗೆ ರಾತ್ರಿ ಆ ಕೋಣೆಗೆ ಪ್ರವೇಶವಂತೆ. ಕುಡಿತ, ಬೀಡಿ ಬಿಡುವುದೆಂದರೆ ’ಕವಿತೆ’ ಬಿಟ್ಟ ಹಾಗೆ! ಅದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಮದುವೆಯಾದಾಗಿನಿಂದಲೂ ರಾತ್ರಿ ಆಕೆ ಮುಚ್ಚಿದ ಬಾಗಿಲ ಆ ಬದಿಯಲ್ಲಿ, ನಾನು ಈ ಬದಿಯಲ್ಲಿ.."
"ಛೇ..ಛೇ.. ಹೀಗಾಗಬಾರದಿತ್ತು.."ಅಂದೆ.
"ಏನೂ ತೊಂದರೆಯಾಗಿಲ್ಲ! ’ಮುಚ್ಚಿದ ಬಾಗಿಲಿ’ನ ಮೇಲೆ ೧೪೨ ಕವಿತೆಗಳನ್ನು ಬರೆದಿರುವೆ! ನಿನ್ನ ಎಡಕ್ಕಿರುವ ೩ನೇ ಪುಸ್ತಕದ ೫೩ನೇ ಕವಿತೆ ಓದು.."
ತೆಗೆದು ಓದಿದೆ-
" ಪ್ರೀತಿಸಲೆಂದೇ ಹೂಗಳ ತಂದೆ
........
ತೆರೆಯೇ ಬಾಗಿಲನು ..ರಮಾ.., ತಮ್ಮಣ್ಣ ಅವರೆ, ಇದು ಸಿನಿಮಾ..,ಅಲ್ಲ ಸಿನೆಮಾದವರು ಈ ಹಾಡನ್ನು ಕದ್ದಿದ್ದಾರೆ ಅಲ್ಲವಾ?" ಅಂದೆ.
"ಎಕ್ಸಾಕ್ಟ್‌ಲೀ. ಕದ್ದಿದ್ದೂ ಅಲ್ಲದೇ ಸುಂದರ ಕವಿತೆಯನ್ನು ಹಾಳು ಮಾಡಿದ್ದಾರೆ. ತೆರೆಯೋ ಬಾಗಿಲನು! ರಾಮ!! ರಾಮ ಏನು ಗೇಟ್‌ಕೀಪರಾ? ನನ್ನ ಕವಿತೆಯಲ್ಲಿರುವ ಪ್ರೀತಿ, ಆರ್ದ್ರತೆ ಒಂದೂ ಇಲ್ಲಾ.."
ಈ ಜನ ಇನ್ನೂ ಎಷ್ಟು ಕವಿತೆ ಕದ್ದಿದ್ದಾರೋ..ಒಂದೊಂದೇ ಓದಲು ಹೇಳಿದರೆ ಕಷ್ಟ. ಅದಕ್ಕೇ ವಿಷಯ ಬದಲಾಯಿಸಿದೆ. "ತಮ್ಮಣ್ಣನವರೆ, ತಮ್ಮ ದಿನಚರಿಯ ಬಗ್ಗೆ ಹೇಳುವಿರಾ?"
"ಈಗಿನ ದಿನಚರಿಯ ಬಗ್ಗೆ ಏನು ಹೇಳಲಿ? ಆಹಾ.. ಅದೊಂದು ಕಾಲವಿತ್ತು...
***
(ಮುಂದಿನ ವರುಷ ಮುಂದುವರಿಸಲಾ..)
-ಗಣೇಶ.
Comments
ಉ: ತೆರೆಯೋ ಬಾಗಿಲನು..
In reply to ಉ: ತೆರೆಯೋ ಬಾಗಿಲನು.. by manju787
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
In reply to ಉ: ತೆರೆಯೋ ಬಾಗಿಲನು.. by raghumuliya
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
In reply to ಉ: ತೆರೆಯೋ ಬಾಗಿಲನು.. by partha1059
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
In reply to ಉ: ತೆರೆಯೋ ಬಾಗಿಲನು.. by bhalle
ಉ: ತೆರೆಯೋ ಬಾಗಿಲನು..
ಉ: ತೆರೆಯೋ ಬಾಗಿಲನು..
In reply to ಉ: ತೆರೆಯೋ ಬಾಗಿಲನು.. by venkatb83
ಉ: ತೆರೆಯೋ ಬಾಗಿಲನು..