ತೆಲಗಿ ಚುಟುಕಗಳು - ೧
೧)
ನೂರು ಕೋಟಿಗೊಬ್ಬನೇ ತೆಲಗಿ
ಕೋಟಿಗಟ್ಟಲೆಯ ಅವನಾಸ್ತಿ ಮರೆಯಾಗಿ
ತೆರಿಗೆ ಕಟ್ಟಲು ಕೈಲಿ ಕಾಸಿಲ್ಲದಾಗಿ
ಯಾರೂ ಕೊಳ್ಳುವವರಿಲ್ಲ ಮೂರು ಸಲ ಕೂಗಿ.
೨)
ಕಾಲ ಕಳೆವನು ಚಿ೦ತೆಯಿಲ್ಲದಲೆ ಜೈಲಿನೊಳಗೆ
ಸಾಲವೆ೦ಬುದು ಇಲ್ಲ ಭಯವಿಲ್ಲ ಮನದೊಳಗೆ
ಒತ್ತಿದ್ದ ಛಾಪುಗಳ ಮೂಡಿಸುತ ತಲ್ಲೀನ
ಅವನ ಕೆಣಕಿದರೆ, ಅಡಿಗಡಿಗೆ - ಹಾಡಿಸುವನು ತಿಲ್ಲಾನ.
೩)
ಕೋಟಿಗಟ್ಟಲೆಯ ಬಲು ದೊಡ್ಡ ಆಸ್ತಿ,
ತೆಲಗಿ ತೆರಬೇಕು ತೆರಿಗೆಯಾ ಸುಸ್ತಿ,
ಅವರಿವರು ಜೊಲ್ಲು ಸುರಿಸಿದರೇನು ಬ೦ತು!
ಎಲ್ಲಿಹುದೋ ನಕಲಿ ಛಾಪದಾ ತ೦ತು??
೪)
ಲಾಲಿ ಹಾಡಿದುದ ಕೇಳಿರುವೆ ಕೃಷ್ಣನಿಗೆ,
ಹಾಲು ಕುಡಿಸಿಹುದ ಓದಿರುವೆ ಗಣಪನಿಗೆ
ಲಾಲಾ, ಖದೀಮ ತೆಲಗಿ- ನೀನೇನ ಮಾಡಿರುವೆ?
ಲೀಲೆಯಿ೦ದಲಿ ನಕಲಿ ಮುದ್ರೆಗಳ ನೀ ಬಿಗಿದು ಬಿಟ್ಟಿರುವೆ
Rating
Comments
ತೆಲಗಿ ಚುಟುಕಗಳು - ೧
In reply to ತೆಲಗಿ ಚುಟುಕಗಳು - ೧ by ಭರದ್ವಾಜ
ಭರದ್ವಾಜರಿಗೆ.....
ತೆಲಗಿ ಚುಟುಕಗಳು