ತೆಲಗಿ ಚುಟುಕಗಳು - ೨
೧)
ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿ
ಈ vip ಮಹಾನುಭಾವ ತೆಲಗಿ!!
ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿ
ಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ??
೨)
ಕೊಟ್ಟನು ವರವನು ಬಲು 'ದಕ್ಷಿಣೆ' ರೂಪದಲಿ
ನೋಟಿನ ಕ೦ತೆಗಳ ನೀಟಾಗಿ ಜೋಡಿಸುತಲಿ
ಗುಟ್ಟನು ಬಿಡದೇ stamp ಇಟ್ಟನು ತಲೆಗೆ,
ಜಾಲವ ಹರಡಿದ ತಾನೇ ಬಿದ್ದನು cbi ಬಲೆಗೆ.
೩)
ತೆಲಗಿಯೆ ತ೦ದೆಯು, ತೆಲಗಿಯೆ ತಾಯಿಯು
ತೆಲಗಿಯೆ ದೇವರು ರಾಜಕಾರಣಿಗಳಿಗೆಲ್ಲ....
ತೆಲಗಿಯ ಎಡಬಿಡದೆ ಕಾಯುವರು ಅವರೆಲ್ಲ
ಇಲ್ಲದೊಡೆ ತೆಲಗಿ, 'ಎರಡಲಗಿನ ಕತ್ತಿ' ಅವರಿಗೆಲ್ಲ.
೪)
ನಿ೦ತಲ್ಲಿ ಕೂತಲ್ಲಿ ಎಲ್ಲೆಡೆಯು ಗುಲ್ಲು,
stampಉ ಹಗರಣದ ಎಲ್ಲರಿಗೂ ಹಾಕಬೇಕು ಗಲ್ಲು
ಶಾಸಕರು, ಸ೦ಸದರು, ಸಚಿವರು.. ಕಣ್ಮುಚ್ಚಿದರೆ ಮಲಗಿ,
ಕನಸಿನಲು ಕಾಣುವನು ಕೈಬೀಸಿ ತೆಲಗಿ!!
೫)
ತೆಲಗಿಯ ಎಲ್ಲ ಆಸ್ತಿಯನು ತಾನೇ ಪಡೆಯುವಾಸೆ
ಅಲ್ಲಲ್ಲಿ ಕೇಳಿದುದ ನೆನೆದರೇ ಸಾಕು- ಗಿಟ್ಟದೊ೦ದೂ ಪೈಸೆ
ಎಡವಿ ಬಿದ್ದಿಹನ ಎಡ-ಬಲಕೂ ಸುಳಿಯರು
ನಕಲಿ ಅಸಲಿಗಳ ಚಿ೦ತಿಸುವ 'ಆಪ್ತ' ಗೆಳೆಯರು.
Rating
Comments
ತೆಲಗಿ ಚುಟುಕಗಳು - ೨