ತೊಡದೇವು ಮತ್ತು ಮಂಡಿಗೆ

ತೊಡದೇವು ಮತ್ತು ಮಂಡಿಗೆ

ಸಂಪದಿಗರೆ!

ಹಳೇ ಮೈಸೂರಿನ ಕಡೆ ಮಂಡಿಗೆ ಎನ್ನುವ ತಿಂಡಿಯೊಂದಿದೆ. 

ಹಾಗೆಯೇ ಮಲೆನಾಡಿನ ಕಡೆ ತೊಡದೇವು ಎನ್ನುವ ತಿಂಡಿಯಿದೆ.

ಇವೆರಡೂ ಒಂದೇ ತಿಂಡಿಯೆನ್ನುವರು.

ಹೌದೆ?

‘ಮನಸ್ಸಿನಲ್ಲಿಯೇ ಮಂಡಿಗೆ ತಿನ್ನು’ ಎಂಬ ನುಡಿಗಟ್ಟು ಹಳೇ ಮೈಸೂರು ಪ್ರಾಂತದಲ್ಲಿದೆ. ಮನಸ್ಸಿನಲ್ಲಿ ತಿಂದ ಮಂಡಿಗೆಗೆ ಗೋಧಿ ಲೆಕ್ಕ ಕೊಡೋರ್ಯಾರು? ಎಂಬ ಮಾತೂ ಇದೆ. ಮಂಡಿಗೆ ತುಂಬಾ ರುಚಿಯಾಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ಇವೆರಡರ ‘ರಿಸಿಪಿ‘ ಯಾರಿಗಾದರೂ ತಿಳಿದಿದೆಯೆ?

ಥಟ್ ಅಂತ ಹೇಳಿಯಲ್ಲಿ ತೊಡದೇವು ಮಾಡುವುದನ್ನು ತೋರಿಸುವ ಒಂದು ದೃಶ್ಯ ಪ್ರಶ್ನೆಯಿತ್ತು. ಆ ಹಿನ್ನೆಲೆಯಲ್ಲಿ ಕೇಳುತ್ತಿದ್ದೇನೆ.

-ನಾಸೋ

Rating
No votes yet

Comments