ತೊಣಚಿ ಡೈರಿ

ತೊಣಚಿ ಡೈರಿ

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ
ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು
ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ
ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ
ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ.
ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅಂತ ಗಂಟ್ ಗಟ್ಲೆ ಗಂಟ್ಲು
ಹರ್ಕಂಡು, ಪೆನ್ನು ಮುರ್ಕಂಡು ಕಶ್ಟ ಪಡೋದು ತಪ್ತದೆ. ಅಲ್ವಾ?

ತೃತೀಯ ರಂಗಕ್ಕೆ ಯಾವುದೇ ವಿಷನ್ ಇಲ್ಲ: ಪ್ರಣಬ್ ಮುಖರ್ಜಿ

ಒಕ್ಕೂಟ ರಚನೆ ಮಾಡೋಕೆ ರಾಜಕೀಯ ಪಕ್ಷ ಕಟ್ಕಣಕೆ ದುಡ್ಡು ಕಾಸು, ಹೆಂಡ, ಸೀರೆ ಬೇಕೋ ಹೊರ್ತು ವಿಷನ್ನು, ಪಾಲಿಸೀಸು ಬೇಕು ಅಂತ ಯಾವೋನ್ ಹೇಳ್ದವ?

ಅಧಿಕಾರ ಹಿಡ್ಕಬೇಕು, ಕುರ್ಚಿ ಮೇಲೆ ಕುತ್ಕಬೇಕು, ದುಡ್ ಮಾಡ್ಕೋ ಬೇಕು ಇದ್ಕಿಂತ ದೊಡ್ ವಿಷನ್ನು, ಪಾಲಿಸಿ, ಆದರ್ಶ ಇರೋಕ್ ಸಾಧ್ಯ ಐತಾ?

ಈ ಯುಪಿಎ ಹುಟ್ದಾಗ್ ಇರ್ದೇ ಇದ್ದ ವಿಷನ್ನುಗಳಾ ಇವು? ಜನ ಇಂಥದ್ದೆಲ್ಲಾ ಇಲ್ಯೂಶನ್ನಿಗೆ ಬಲಿಯಾಗ್ತಾರೆ ಇನ್ನೂ ಅಂದ್ಕಂಡೀರಾ?

ಮಳೆ ಬರ್ಸೋಕೆ ಕಪ್ಪೆ ಮದ್ವೆ

ಸಿಟೀಲ್ ಕುಂತು ಕೀಬೋರ್ಡ್ ಕುಟ್ಟುವ ನಿಂಗೆ ಇದ್ನ ಓದಿದ್ರೆ
ಬಿದ್ ಬಿದ್ ನಗೋಷ್ಟು ಸಿಲ್ಲಿ ಅನ್ಸುತ್ತೆ ಅಲ್ವಾ? ಆದ್ರೂ ಹೇಳ್ತೀನ್ ಕೇಳಿ, ಈ ಜನ
ಮಾಡ್ತಿರೋದ್ಕು ನೀವ್ ಬುದ್ಧಿವಂತ್ರು, ಪೇಟೆ ಜನ ಮಾಡ್ತಿರೋದ್ಕು ವ್ಯತ್ಯಾಸ ಇದ್ಯಾ?

ಇವ್ರು ಮಳೆ ಇಲ್ಲದ್ ನಾಡಿಗೆ ನೀರ್ ಸಿಕ್ಲಿ ಅಂತ ಎರಡ್ ಕಪ್ಪೆ ಹಿಡ್ದು ಮದ್ವೆ
ಮಾಡ್ತಾರೆ. (ಮದ್ವೆ ಇಲ್ದೆ ಅವೇನ್ ಮಕ್ಳೇ ಮಾಡಲ್ವಾ ಅಂನ್ಬೇಡ್ರಿ. ಶ್ರೀರಾಮ್ ಸೇನೆ
ಮುತಾಲಿಕ್ ಕಿವಿಗೆ ಬಿದ್ರೆ ಪ್ರಾಣಿಗಳ್ಲೂ ಹೆಣ್ಣು ಗಂಡು ರಾಖಿ ಅಥ್ವಾ ತಾಳಿ ಇಲ್ದೇ
ಒಡಾಡೋಕ್ ಬಿಡಲ್ಲ ಆತ!) ಮಳೆ ಬರುತ್ತೊ ಇಲ್ವೋ ಗೊತ್ತಿಲ್ಲ. ಮಳೆ ಬರ್ಲಿ ಅನ್ನೋ
ಉದ್ದೇಶಾಂತೂ ಅವ್ರಲ್ಲಿ ಇರ್ತದೆ. ನೀವ್ ಮಾಡಾದೇನು? ಸರ್ಕಾರ ಒಳ್ಳೇ ಆಡಳಿತ ಕೊಡ್ಲಿ
ಅಂತಂದ್ ಓಟ್ ಹಾಕ್ತೀರಿ, ಪ್ರತಿ ಸಲಾನೂ ಇವ್ರು ತಮ್ ಬುದ್ಧಿ ತೋರ್ಸಿದ್ರೂ ಮನೆ ಎದ್ರು
ಬಂದ್ ಹಲ್ ಕಿರಿದ್ರೆ ಮತ್ತೆ ನಂಬ್ತೀರಿ…

ಈಗ್ ಹೇಳ್ರಿ ಯಾರು ಮೂಢ್ರು?

Rating
No votes yet

Comments