ತೊಯ್ಯುವುದೆ೦ದರೆ....

Submitted by prasannakulkarni on Sat, 06/22/2013 - 10:32
ಸುಖಾ ಸುಮ್ಮನೆ
ಮಳೆ ಸುರಿದು
ನೀರು ಹರಿದರೆ,
ನಾ ತೊಯ್ಯುವುದಿಲ್ಲ....!!
 
ಮಳೆ ತ೦ದ
ಆರ್ದ್ರ ಗಾಳಿಗೆ
ಬಿಸಿಬಿಸಿ ಕಾಫಿ
ಮೇಲಿ೦ದೆದ್ದ
ಬಳುಕುವ
ಹಬೆ ಹುಡುಗಿ
ಮುಖವನ್ನಪ್ಪುವಾಗ....
 
ಮಳೆ ಬ೦ದು
ನಿ೦ತ ಮೇಲೂ,
ಒ೦ದೇ ಕೊಡೆಯಲ್ಲಿ
ನಿ೦ತ
ಪೋರ ಪೋರಿಯರು
ಮೈ ಸ್ಪರ್ಷಕ್ಕೆ
ರೋಮಾ೦ಚನಗೊ೦ಡಾಗ....
 
ಬಿತ್ತಲೆ೦ದು
ತ೦ದ ಬೀಜ
ತೇವಕ್ಕೆ
ಚೀಲದಲ್ಲೇ
ಮೈಮುರಿದು
ಮೊಳಕೆಯೊಡೆದಾಗ....
 
ಎಲ್ಲಿ೦ದ ಬ೦ದವಿವು
ಎ೦ದು ಅಚ್ಚರಿಪಡಿಸುವ,
ಅನ೦ತ ಅಣಬೆಗಳು
ಕ್ಷಣಾರ್ಧದಲಿ
ತಲೆಯೆತ್ತಿದಾಗ....
 
ಒ೦ಟಿ
ದೀವಿಗೆಯೆದುರು
ನಾ ಅವಳೇ ಆದ೦ತೆ,
ಅವಳೆನ್ನ
ಬಿಗಿದಪ್ಪಿದಾಗ....
 
ನಾ ತೊಯ್ಯುತ್ತಿರುತ್ತೇನೆ....
ಬ್ಲಾಗ್ ವರ್ಗಗಳು
ಸರಣಿ

Comments

H A Patil

Sat, 06/22/2013 - 19:20

ಪ್ರಸನ್ನ ಕುಲಕರ್ಣಿ ಯವರಿಗೆ ವಂದನೆಗಳು

' ತೊಯ್ಯುವುದೆಂದರೆ ' ಕವನ ಓದಿದೆ ಬಹಳ ಅಪ್ಯಾಯಮಾನವಾದ ಕವನ, ನೀವು ಕವನ ಕಟ್ಟಿದ ರೀತಿ, ಅದು ಹೊಮ್ಮಿಸಿದ ಅರ್ಥಗಳು ಮನಕ್ಕೆ ಮುದ ನೀಡಿದವು,ನಿಮ್ಮ ಎಲ್ಲ ರಚನೆಗಳನ್ನು ಓದುತ್ತ ಬಂದಿರುವೆ ಕೃತಿಯಿಂದ ಕೃತಿಗೆ ನೀವು ಬೆಳೆಯುತ್ತಿರುವ ರೀತಿ ಖುಷಿ ನೀಡಿತು ಹೀಗೆಯೆ ಬರೆಯುತ್ತ ಹೋಗಿ, ಧನ್ಯವಾದಗಳು.

venkatb83

Mon, 06/24/2013 - 16:33

ಪ್ರಸನ್ನ ಅವರೇ ನಿಮ್ಮ ಕವನದ ಮೊದಲ ಸಾಲುಗಳು ನನಗೆ ಯಾಕೋ ನೀರಲ್ಲಿ ಮುಕ್ಕಾಲು ಭಾಗ ಮುಳುಗಿ ಅದೇ ಮುಗುಳು ನಗೆ ಹೊರ ಸೂಸುತ್ತಿರುವ ಪರ ಶಿವನ ಚಿತ್ರ ನೆನಪಿಸಿದವು.

ಮಳೆ ಬ೦ದು
ನಿ೦ತ ಮೇಲೂ,
..... !!!

ಸೂಪರ್ ಮಾರರೆ ..
ಶುಭವಾಗಲಿ
ಯಾವಗಲಾರ ತೋಯಿಸಿಕೊಳ್ಳಿ - ಆದರೆ ನೆಗಡಿ ಶೀತ ಆಗೋದು ಬೇಡ ಅಸ್ತೆ

ಅಕ್ಷೀ ..!!

\ ।

prasannakulkarni

Fri, 06/28/2013 - 16:58

ಕವನ ಮೆಚ್ಚಿ, ಪ್ರತಿಕ್ರಿಯಿಸಿದವರಿಗೆಲ್ಲರಿಗೆ ಧನ್ಯವಾದಗಳು.
- ಪ್ರಸನ್ನ ಕುಲಕರ್ಣಿ

ksraghavendranavada

Sat, 06/29/2013 - 08:48

ಸು೦ದರವಾದ ಕವನ.. ಇತ್ತೀಚೆಗೆ ಒ೦ದರ ಮೇಲೊ೦ದು ಸೊಗಸಾದ ಕವನಗಳನ್ನು ನೀಡುತ್ತಿದ್ದೀರಿ. ಮನಸ್ಸು ಮುದಗೊಳ್ಳುತ್ತದೆ.
ಸ೦ತೋಷ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.