ತ್ಯಾಗರಾಜನೆಂಬ ರಾಗರಾಜ

ತ್ಯಾಗರಾಜನೆಂಬ ರಾಗರಾಜ

ಐದುಹೊಳೆಯೂರಿನಲಿ* ಇದ್ದನವ ಮಹನೀಯ ಹೆಸರವನದಾಗಿತ್ತು ತ್ಯಾಗರಾಜ; ಬಗೆಬಗೆಯ ರಾಗದಲಿ ನೂರಾರು ರಚನೆಗಳ ಮಾಡಿ ಇತ್ತಿಹನೆಮಗೆ ಯೋಗಿ ರಾಜ! ತ್ಯಾಗರಾಜ ವಿರಾಗಿಯೇಕಾದೆ ಹೇಳು ನೀ ನಾಗಿರಲು ರಸಿಕ ಮನವಾಳ್ವ ರಾಜ; ಭೋಗಗಳ* ಬೇಡೆನುತ ನಿಲೆನಿಂತೆ ಹಾಡುತ್ತ ರಾಗಗಳ ನೀ ನಿಜದಿ ರಾಗ ರಾಜ! -ಹಂಸಾನಂದಿ ಕೊ: ಐದುಹೊಳೆಯೂರು = ತ್ಯಾಗರಾಜರು ಬದುಕಿ ಬಾಳಿದ ತಿರುವೈಯಾರು ಕೊ.ಕೊ: ಶರಭೋಜಿ ಮಹಾರಾಜ ತಂಜಾವೂರಿನ ಆಸ್ಥಾನವಿದ್ವಾಂಸರಾರಿರಬೇಕೆಂಬ ಆಹ್ವಾನವಿತ್ತರೂ, ತ್ಯಾಗರಾಜರು ಅದನ್ನು ಬೇಡವೆಂದೆಣಿಸಿ, ತಿರುವೈಯ್ಯಾರಿನಲ್ಲೇ ನೆಲೆ ನಿಂತರು ಕೊ.ಕೊ.ಕೊ: ಆಸಕ್ತರು ತ್ಯಾಗರಾಜರ ಬಗ್ಗೆ ಬರೆದಿದ್ದ ಸಂಗೀತರಾಜ್ಯಕ್ಕೆ ಹೀಗೊಬ್ಬ ರಾಜ ಎಂಬ ಬರಹವನ್ನಿಲ್ಲಿ ಚಿಟಕಿಸಿದರೆಓದಬಹುದು
Rating
No votes yet