ಥಟ್ ಅಂತ ಹೇಳಿ ೧೫೦೦ರ ಸಂಭ್ರಮ.

ಥಟ್ ಅಂತ ಹೇಳಿ ೧೫೦೦ರ ಸಂಭ್ರಮ.

ಥಟ್ ಅಂತ ಹೇಳಿ ೧೫೦೦ರ ಸಂಭ್ರಮ.

೧೩ ಜೂನ್ ರಂದು ದೂರದರ್ಶನದ ಚಂದನವಾಹಿನಿಯವರು ನಡೆಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿತ್ತು. ಈ ತರಹದ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಹಳದಿನಗಳಿಂದ ಇತ್ತು. ಅದು ಹೇಗೆ, ಎತ್ತ ಎಂಬ ಕುತೋಹಲದ ಜೊತೆಗೆ ಅಲ್ಲಿ ಇರುವ ಪುಳಕವೇ ಪುಳಕ. ಇಲ್ಲಿ ಚಲನಚಿತ್ರ/ಕಿರುತೆರೆಯ ನಿರ್ಮಾಣದ ಒಂದು ತುಣುಕಿನ ಅನುಭವವಾಯಿತು. ನೇರಪ್ರಸಾರ ಇದ್ದಾಗ ಕಾರ್ಯಕ್ರಮವನ್ನು ನಡೆಸಿಕೊಡುವವರಿಗೆ ಹೆಚ್ಚಿನ ಜಾಗರೂಕತೆ ಇರುವ ಬಗ್ಗೆ ಮನವರಿಕೆ (ಎಡಿಟಿಂಗ್ ಇಲ್ಲದಿರುವ ಕಾರಣ) ಆಯಿತು. ಜೊತೆಗೆ ಬೆಳಕಿನ, ಮೈಕಿನ ಮತ್ತು ಕ್ಯೇಮರಗಳ ಅಳವಡಿಕೆ ಚಾಲನೆ ನೋಡಿ ಕಾರ್ಯಕ್ರಮ ಮಾಡಲು ಇರಬಹುದಾದ ಸಂಕೀರ್ಣ ಏರ್ಪಡಿನ ಬಗ್ಗೆ ತಿಳಿಯಿತು.

ಇನ್ನೊಂದು ಹೆಚ್ಚಿನ ಸಂಗತಿ ಎಂದರೆ `ಥಟ್ ಅಂತ ಹೇಳಿ'ಅಲ್ಲಿ ಭಾಗವಹಿಸಲು ಐದು ಅಭ್ಯರ್ಥಿಗಳನ್ನು ಆರಿಸಿದ ಬಗೆ. ಸಭಿಕರು ಇಷ್ಟಪಟ್ಟಲ್ಲಿ ತಮ್ಮ ಉಮೇದುವಾರಿಕೆಯನ್ನು ಚೀಟಿಯಲ್ಲಿ ಬರೆದುಹಾಕಿದರೆ ಆ ಚೀಟಿಗಳನ್ನು ಲಾಟರಿ ಎತ್ತಿ ಆರಿಸಿದರು. ನಾನೂ ನನ್ನ ಉಮೇದುವಾರಿಕೆ ಹಾಕಿದ್ದೆ. ಲಾಟರಿ ನನಗೆ ಒಲಿಯಲ್ಲ ಎನ್ನುವುದು ಬೇರೇ ಮಾತು. ಮತ್ತೊಂದು ವಿಶಾದದ ಸಂಗತಿ ಎಂದರೆ ಸಭಿಕರು ಅಭ್ಯರ್ಥಿಗೆ ಕೇಳಿದ ಪ್ರಶ್ನೆಗಳಿಗೆ ಅವರೇ ಉತ್ತರಕೊಡುವ ಮೊದಲೇ ತಲೆತೂರಿಸಿ ಪ್ರೊಮ್^ಪ್ಟ್ ಮಾಡುತ್ತಿದ್ದರು. ಕೆಲವು ಸರಿ ಅಭ್ಯರ್ಥಿಯ ಉತ್ತರ ಸರಿಯಾಗಿಲ್ಲದಿದ್ದರೆ, ಸರಿ ಉತ್ತರ ಕೊಟ್ಟ ಸಭಿಕರಲ್ಲಿ ಒಬ್ಬರಿಗೆ ಬಹುಮಾನ ಕೊಟ್ಟ ಕಾರಣ, ಈ ಅನುಚಿತ ಬೆಳವಣಿಗೆಗೆ ಉತ್ತೇಜನ ಸಿಕ್ಕಂತಾಯಿತು. ಇರಲಿ, ಇದೂ ಒಂದು ಮೋಜು ಅನ್ನೋಣ.

ಆಹ್ವಾನಿತ ಮುಖ್ಯಸ್ತರುಗಳ ಪ್ರಶಂಸಾತ್ಮಕ ಮತ್ತು ವಿಮರ್ಶಾತ್ಮಕ ನುಡಿಗಳು, ಮಧ್ಯೆ ಜಾನಪದಗೀತೆ, ನೃತ್ಯ ಇದ್ದ ಕಾರಣ ಜನ ತಮ್ಮ ಆಸನಗಳಿಗೆ ಅಂಟುಕೊಂಡಿದ್ದರು. ಸಮಯ ಕಳೆದಿದ್ದೇ ತಿಳಿಯಲಿಲ್ಲ. ಒಂದು ಸುಂದರ ಸಂಜೆ ಅನ್ನಿಸಿತು.

Rating
No votes yet