ಥೋಡೀಸಿ ಶಿಫ್ಟ್ ಕರಾದೆ..

ಥೋಡೀಸಿ ಶಿಫ್ಟ್ ಕರಾದೆ..

ದೇವರ ಸ್ತೋತ್ರ, ಭಜನೆ, ಮಂತ್ರ ಹೇಳುವಾಗ ಅರ್ಥ ಗೊತ್ತಿದ್ದೇ ಹೇಳಬೇಕು ಎಂದೇನಿಲ್ಲ. ಬಾಯಿಗೆ ಬಂದಹಾಗೇ ಹೇಳಿ. ದೇವರೇನೂ SSLC-PUC ವ್ಯಾಲ್ಯುವೇಶನ್ ಮಾಡುವ ಟೀಚರ್ ಅಲ್ಲ. ಕರುಣಾಮಯಿ. ತಪ್ಪಿದ್ದರೂ ತಿದ್ದಿ ಅನುಗ್ರಹಿಸುವನು.

ನಾನು ಅದ್ನಾನ್ ಸಾಮಿಯ ಅಭಿಮಾನಿ. ಅದೂ ಆತ ಭಾರೀ ಗಾತ್ರದವನಿದ್ದಾಗ- ಭಾರೀ ಅಭಿಮಾನಿಯಾಗಿದ್ದೆ. ಆತನ "ಥೋಡಿಸಿ ಲಿಫ್ಟ್ ಕರಾದೆ.." (  http://www.youtube.com/watch?v=u24iXd9KsUk&feature=related )ಎಂಬ ಹಾಡನ್ನು ಹೋಗುವಾಗ, ಬರುವಾಗ, ನಿಂತಾಗ, ಕುಳಿತಾಗ, ಮಲಗಿದ್ದಾಗಲೂ...ಹಾಡಿದ್ದೇ ಹಾಡಿದ್ದು. ನನಗೆ ಆ ಹಾಡಿನ ಅರ್ಥ ಗೊತ್ತಿರಲಿಲ್ಲ. ಹಾಡುವಾಗ ತಪ್ಪುಗಳೂ ಅನೇಕವಿದ್ದವು. ಆದರೂ ದೇವರು ನನ್ನ ಭಕ್ತಿಗೆ ಮೆಚ್ಚಿ, "ಲಿಫ್ಟ್ ಇರುವ ಫ್ಲಾಟ್‌"ಗೆ ಶಿಫ್ಟ್ ಆಗುವಂತೆ ಅನುಗ್ರಹಿಸಿದರು.

ದೇವರೇನೋ, ನಾನು ಬಯಸದೇ(ಹಾಡಿನಲ್ಲಿ ಬಯಸಿದ್ದು ಮಾತ್ರ) ಅನುಗ್ರಹಿಸಿದರು. ಮನೆ ಶಿಫ್ಟ್ ಮಾಡುವುದು ಅಷ್ಟು ಸುಲಭವಾ?

ಹಳೆಯದಾದರೂ, ಹಾಳಾಗಿದ್ದರೂ..ಮುಂದೆ ಬೇಕಾಗಬಹುದೆಂದು ತೆಗೆದಿಟ್ಟುಕೊಳ್ಳುವ ಅಭ್ಯಾಸ ನನ್ನದು. ಹಳೇ ಮಿಕ್ಸಿ, ಇಸ್ತ್ರಿಪೆಟ್ಟಿಗೆ, ಫ್ಯಾನ್, ಗಡಿಯಾರಗಳು, ಕುಕ್ಕರುಗಳು.........ಚೋರ್ ಬಜಾರ್‌ನಲ್ಲಿ ಸಿಗದ್ದೂ ಸಹ ನಮ್ಮ ಮನೆಯಲ್ಲಿ ಹುಡುಕಿದರೆ ಸಿಗುತ್ತಿತ್ತು.

ಹಳೇ ಪೇಪರ್,ಮ್ಯಾಗಝೀನ್ ರಾಶಿ ಮಾರಲು ಬಿಡುತ್ತಿರಲಿಲ್ಲ. ಇಂಪಾರ್ಟೆಂಟ್ ಸುದ್ದಿ, ಚಿತ್ರಗಳನ್ನು ಕಟ್ ಮಾಡಿದ ಮೇಲೆ ಕೊಡಬಹುದು ಎನ್ನುತ್ತಾ ದಿನ ಮುಂದೆ ಹಾಕುತ್ತಿದ್ದೆ.."ಕ್ಯಾಸೆಟ್‌ಗಳನ್ನು ಕೇಳದೇ ವರ್ಷಗಳಾಗಿದೆ. ಮೊಬೈಲ್, ಪೆನ್ ಡ್ರೈವ್‌ಗಳಲ್ಲಿ ಹಾಡುಗಳಿರುವಾಗ, ಇದು ಯಾಕೆ?" ಎಂದರೆ- " ಆ ಕಾಲದಲ್ಲಿ ೬೦ ರೂ ಕೊಟ್ಟು ತೆಗೆದುಕೊಂಡದ್ದು!"ಎಂದು ಎತ್ತಿ ಇಡುತ್ತಿದ್ದೆ.

ಹೀಗೇ ಎರಡು ದಶಕಗಳ ಕಾಲ ವಾಸಿಸಿದ್ದ ಮನೆಯಲ್ಲಿ ಏನೆಲ್ಲಾ ಸಂಗ್ರಹವಾಗಿರಬಹುದು ಆಲೋಚಿಸಿ.. ಅಷ್ಟನ್ನೂ ಹೊಸ ಮನೆಗೆ ಸಾಗಿಸಬೇಕು! ಅದಕ್ಕಾಗಿ ತಿಂಗಳ ಮೊದಲಿಂದಲೇ ತಯಾರಿ ನಡೆಸಿದ್ದೆ. ಮೊದಲಿಗೆ ಮನೆಯ ಪ್ರತೀ ಕೋಣೆಯಲ್ಲಿರುವ ವಸ್ತುಗಳ ಪಟ್ಟಿ ಮಾಡಿದೆ. ಅದರಲ್ಲಿ ಯಾವುದೆಲ್ಲಾ ಹೊಸ ಮನೆಯ ಯಾವ ಕೋಣೆಯಲ್ಲಿಡುವುದು ಎಂದು ಟಿಕ್ ಮಾಡಿದೆ. ಹೇಗೇ ಲೆಕ್ಕಾಚಾರ ಹಾಕಿದರೂ, ಇನ್ನೆಷ್ಟೇ ಅಡ್ಜಸ್ಟ್ ಮಾಡಿದರೂ..ಈ ಸಾಮಾನೆಲ್ಲಾ ಅಲ್ಲಿ ಜೋಡಿಸಲು ಇನ್ನೂ ಎರಡು ರೂಮು ಎಕ್ಸ್‌ಟ್ರಾ ಬೇಕೇಬೇಕು! ಸದ್ಯಕ್ಕೆ ಎಲ್ಲವನ್ನೂ ಅಲ್ಲಿ ತೆಗೆದುಕೊಂಡು ಹೋಗಿ ಹಾಕುವುದು. ನಂತರ ನಿದಾನಕ್ಕೆ ಎಲ್ಲಾ ಜೋಡಿಸಿಡುವುದು ಎಂದು ತೀರ್ಮಾನಿಸಿದೆ.

ನನಗೆ ನಿಜವಾಗಿ ತಲೆತಿಂದದ್ದು-ಕಂಪ್ಯೂಟರ್! ಸುಮಾರು ೧೫ ವರ್ಷದಿಂದ ಪಟ್ಟಾಗಿ ಕುಳಿತಿರುವ ಅದರ ಹಿಂದೆ ಹೋಗಿ ನೋಡಿದರೆ-ಟೆಲಿಫೋನ್ ಎಕ್ಸ್‌ಚೇಂಜ್‍ನಲ್ಲೂ ಇಲ್ಲದಷ್ಟು ವಯರ್‌ಗಳು. ಯಾರೂ ಅದನ್ನು ಮುಟ್ಟಬಾರದು ಎಂದು ನಾನು ಆಜ್ಞಾಪಿಸಿದ್ದರಿಂದ, ಅಲ್ಲಿ ಮಣ್ಣು, ಧೂಳು, ಜತೆಗೆ ಅನೇಕ ಕ್ರಿಮಿಕೀಟಗಳು ಸುಖಸಂಸಾರ ನಡೆಸುತ್ತಾ ಇದ್ದವು. ಈ ವಯರ್‌ಗಳನ್ನೆಲ್ಲಾ ಬಿಚ್ಚಿ, ಪುನಃ ಹೊಸಮನೆಯಲ್ಲಿ ಹೇಗೆ ಜೋಡಿಸುವುದು?

ಸಂಪದದ ಕಂಪ್ಯೂಟರ್ ಮಿತ್ರರನ್ನು ಕರೆಯೋಣವೆಂದರೆ, ಅವರು ಒಮ್ಮೆ ಇದನ್ನು ನೋಡಿ- "ಇದನ್ನು ಸ್ಕ್ರ್ಯಾಪ್‌ಗೆ ಹಾಕಿ ಗಣೇಶರೆ, ಒಂದು ಒಳ್ಳೆಯ ಲಿನಕ್ಸ್ ಅಳವಡಿಸಿದ ಲ್ಯಾಪ್ ಟಾಪ್ ತೆಗೆದುಕೊಳ್ಳಿ.." ಅಂದಾರು.ಆನ್ ಮಾಡಿ ಊಟಕ್ಕೆ ಹೋದರೆ, ಊಟ ಮುಗಿಸಿ ಬರುವಾಗ ಸಂಪದ ತೆರೆದು ಕುಳಿತಿರುವುದು.ರಾತ್ರಿ ಜಾಸ್ತಿ ಹೊತ್ತಾದರೆ, ಅದೇ ನೆಟ್ ಕನೆಕ್ಷನ್ ಕಟ್ ಮಾಡಿ ಮಲಗಲು ಸೂಚಿಸುವುದು.ಎಡೆಯಲ್ಲಿ ಬೇರೆ ಕೆಲಸ ಮಾಡುವವರೆಗೂ, "ಪಾರ್ಥಸಾರಥಿಯ ಚಕ್ರ" ತಿರುಗುತ್ತಿದ್ದು, ಮುಗಿಸಿ ಬರುವಾಗ ಲೇಖನಗಳನ್ನು ಓಪನ್ ಮಾಡುವುದು. ಇದೆಲ್ಲಾ ಆಪ್ಶನ್‌ಗಳು ಈಗಿನ ಲ್ಯಾಪ್‌ಟಾಪ್‌ಗಳಲ್ಲಿ ಇಲ್ಲ.

ಮೊಬೈಲಲ್ಲಿ ಕಂಪ್ಯೂಟರ್ ಹಿಂಬದಿಯ ಕನೆಕ್ಷನ್‌ಗಳ ಫೋಟೋಗಳನ್ನು ಎಲ್ಲಾ ಆಂಗ್‌ಲ್‌ಗಳಲ್ಲೂ ತೆಗೆದೆ. ಇಷ್ಟು ವರ್ಷ ಬಾಡಿಗೆ ಕೊಡದೇ ವಾಸಿಸಿದ್ದ ಕ್ರಿಮಿಕೀಟಗಳಿಗೆ ಬೇರೆ ಮನೆ ಹುಡುಕಲು ಒಂದು ತಿಂಗಳ ನೋಟೀಸ್ ಕೊಟ್ಟೆ.

ಇನ್ನು ಸಾಗಾಣೆ ವಾಹನದ ಬಗ್ಗೆ- ಪ್ರೊಫೆಶನಲ್ ಸಾಗಾಣೆದಾರರು ಒಂದಕ್ಕೆ ನಾಲ್ಕು ಪಟ್ಟು ಹೇಳುವರು. ಅವರು ಬೇಡ. ಲಾರಿಯಾದರೆ ಲೋಡ್/ ಅನ್‌ಲೋಡ್ ಮಾಡುವಾಗ ಎರಡೂ ಕಡೆ ಟ್ರಾಫಿಕ್ ಜಾಮ್. ಅದೂ ಬೇಡ. ಒಂದು ವ್ಯಾನ್‌ನವನಿಗೆ ನಾಲ್ಕು ಜನರೊಂದಿಗೆ ನಾನು ಸೂಚಿಸಿದ ದಿನ ಬೆಳಗ್ಗೆ ಬರಬೇಕೆಂದು ಹೇಳಿದೆ.

ಅಲ್ಲಿ ಹೋಗಿ ಎಲ್ಲಾ ಸೆಟ್ ಮಾಡಿ ಅಡುಗೆ ಶುರು ಮಾಡಲು ಒಂದೆರಡು ದಿನ ಬೇಕಾಗಬಹುದೆಂದು, ನಾಸ್ಟಾ/ಊಟಕ್ಕೆ ಒಳ್ಳೆಯ ವೆಜ್ ಹೋಟಲ್ ಸಹ ಹುಡುಕಿದೆ.

"ದಿನಾ ಫೋನ್ ಮಾಡಿ ವಿಚಾರಿಸುತ್ತಿದ್ದಾನೆ. ನಿಮಗೂ ಸಹಾಯವಾಗುವುದು. ನನ್ನ ತಮ್ಮನಿಗೆ ಬರಲು ಹೇಳಲಾ?" ಎಂದು ನನ್ನಾಕೆ ನನ್ನ ಪರದಾಟ ನೋಡಿ ಕೇಳಿದಳು. " ಎಲ್ಲಾ ಅಪ್‌ಟುಡೇಟ್ ರೆಡಿಯಾಗಿದೆ. ಆತನ ಮಕ್ಕಳಿಗೆ ಪರೀಕ್ಷೆಯ ಸಮಯ..ತೊಂದರೆಕೊಡಬೇಡ" ಎಂದು ಜೋರು ಮಾಡಿದೆ.

ನಾನು ಬೇಡ ಎಂದರೂ, ಶಿಫ್ಟ್ ಮಾಡುವ ದಿನ ಬೆಳಗ್ಗೆ ಭಾವ ಹಾಜರ್! ಆತನೊಂದಿಗೆ ನಾಸ್ಟಾ ಮಾಡುತ್ತಾ ನಾನು ಮಾಡಿದ ತಯಾರಿಯ ಪಟ್ಟಿ ಹೇಳುತ್ತಿದ್ದೆ. "ಅರ್ಜೆಂಟ್ ಕೆಲಸವಿದೆ. ಹತ್ತು ನಿಮಿಷ ಬಂದು ಹೋಗಿ" ಎಂದು ಆಫೀಸಿನಿಂದ ಕರೆಬಂತು. "ಮಧ್ಯಾಹ್ನದ ನಂತರ ವ್ಯಾನ್‌ಗೆ ಬರಲು ಹೇಳು. ಶಿಫ್ಟ್ ಮಾಡೋಣ" ಎಂದು ಹೇಳಿ ಆಫೀಸ್‌ಗೆ ಹೋದೆ. ಹತ್ತು ನಿಮಿಷದ ಕೆಲಸ ಮುಗಿಸಿಯಾಗುವಾಗ ಮಧ್ಯಾಹ್ನದ ಒಂದೂವರೆಗಂಟೆ! ಅದೇ ಸಮಯಕ್ಕೆ "ಊಟದ್ದು ಮತ್ತೆ ನೋಡೋಣ. ನೀವೀಗ ಅರ್ಜೆಂಟ್ ಹೊಸಮನೆಗೆ ಬನ್ನಿ" ಎಂದು ಭಾವನ ಫೋನ್ ಬಂತು. ಫ್ಲಾಟಲ್ಲಿ ಇನ್ನೇನು ತಾಪತ್ರಯವಾಗಿದೆಯೋ ಎಂದು ಚಿಂತಿಸುತ್ತಾ ಹೋಗಿ ನೋಡುತ್ತೇನೆ...........

ಎಲ್ಲಾ ನೀಟಾಗಿ ಜೋಡಿಸಿಟ್ಟಾಗಿದೆ!

ಪ್ರತೀ ಕೋಣೆಯಲ್ಲೂ!

ಕಂಪ್ಯೂಟರ್ ಸಹ!

ತಲೆತಿರುಗಿ ಬೀಳುವುದು ಬಾಕಿ-"ಮೊದಲು ಊಟ ಮಾಡೋಣ" ಎಂದು ಪತ್ನಿ ಕರೆದಾಗ!

ಬೆಳಗ್ಗೆ ನಾಸ್ಟಾನೂ ಸರಿಯಾಗಿ ಮಾಡದೇ ಹೋಗಿದ್ದರಿಂದ ಹಸಿವು ಜಾಸ್ತಿಯಾಗಿತ್ತು. ಊಟ ಮಾಡುತ್ತಾ ಕೇಳಿದೆ "ಇನ್ನುಳಿದ ಸಾಮಾನುಗಳೆಲ್ಲಾ ಎಲ್ಲಿ?" ಪತ್ನಿ ತನ್ನ ತಮ್ಮನ ಕಡೆ ನೋಡಿದಳು. "ಬೇಕಾದುದನ್ನು ಇಟ್ಟುಕೊಂಡು ಉಳಿದದ್ದೆಲ್ಲಾ ಗುಜರಿಗೆ ಹಾಕು ಎಂದು ವ್ಯಾನಿನವನಿಗೆ ಹೇಳಿದೆ. ಎರಡು ಲೋಡ್ ಕಸ! ಗುಜರಿಗೆ ಹೋಯಿತು.." ಎಂದನು ಭಾವ.

ನನಗೂ ತಿಂಗಳುಗಳಿಂದ ಹೊತ್ತುಕೊಂಡ ಭಾರವೆಲ್ಲಾ ಇಳಿದು ಹಗುರವಾದಂತಾಗಿ, ಊಟ ಮುಗಿಸಿ ಹಾಯಾಗಿ ಮಲಗಿದೆ.

 

 

Rating
No votes yet

Comments

Submitted by ಗಣೇಶ Thu, 09/20/2012 - 23:32

In reply to by lpitnal@gmail.com

>>ಏನೇನೋ ಅಂದುಕೊಂಡರೂ ಅಂದುಕೊಂಡಂತೆ ಆಗುವುದಿಲ್ಲವೆಂಬುದಕ್ಕೆ ಮತ್ತೊಂದು ಉದಾಹರಣೆ ನಿಮ್ಮ ಪ್ರಸಂಗ........................

- ಬೆಂಗಳೂರು ದಕ್ಷಿಣದಲ್ಲಿ (ಪಾರ್ಥಸಾರಥಿಯವರ ವಾಕಿಂಗ್ ದಾರಿಗೆ ಸಮೀಪ :) ) ಮನೆ ಕಟ್ಟಬೇಕೆಂದು ಪ್ಲಾನ್ ಮಾಡಿದ್ದೆ...................................... ಎಲ್ಲಾ ಉಲ್ಟಾಪಲ್ಟಾ ಆಯಿತು.:) ಆದರೆ ಆದದ್ದೆಲ್ಲಾ ಒಳಿತೇ ಆಯಿತು.

ಧನ್ಯವಾದಗಳು.

ಗಣೇಶ.

Submitted by ಗಣೇಶ Thu, 09/20/2012 - 23:43

In reply to by ananthesha nempu

ತಮ್ಮ ಮೆಚ್ಚುಗೆಗೆ ನನ್ನಿ.
ಮಕ್ಕಳು ಶ್ಲೋಕ ತಪ್ಪು ಉಚ್ಚರಿಸುವಾಗ, ಅವರಿಗೆ ದೇವರ ಮೇಲಿನ ಭಕ್ತಿಯೇ ಹೋಗುವಂತೆ ಹಿರಿಯರಾದವರು ಜೋರು ಮಾಡುವರು.

Submitted by ಗಣೇಶ Sat, 09/22/2012 - 23:52

In reply to by kavinagaraj

>>>ಆದರೆ, ಹಾಯೆನಿಸಿತೆಂದು ಬರೆದಿದ್ದೀರಿ. ನೀವು ಏಕೆ ದುಂಡು ದುಂಡಗೆ ಇರುವಿರೆಂದು ತಿಳಿಯಿತು!!
:) :) ಕೋಪ, ಸಿಟ್ಟು ಒಳ್ಳೆಯದಲ್ಲಾ ಎಂದು ಕವನ ಬರೆದೂ ಬರೆದೂ ನನ್ನನ್ನ ಇನ್ನೂ ದುಂಡಗೆ ಮಾಡುವುದರಲ್ಲಿ ನಿಮ್ಮ ಪಾಲೂ ಇದೆ. :)
ಧನ್ಯವಾದಗಳು.

Submitted by ಗಣೇಶ Sat, 09/22/2012 - 23:54

In reply to by gopaljsr

ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಇನ್ನಷ್ಟು ಕ್ಲೂ ಸಿಕ್ಕಿತೆಂದು ಗೋಪಾಲ್‌ಜಿ ಬರೆಯುತ್ತಾರೆಂದುಕೊಂಡಿದ್ದೆ...

Submitted by gopaljsr Mon, 09/24/2012 - 11:08

In reply to by ಗಣೇಶ

<<ಇನ್ನಷ್ಟು ಕ್ಲೂ ಸಿಕ್ಕಿತೆಂದು ಗೋಪಾಲ್‌ಜಿ ಬರೆಯುತ್ತಾರೆಂದುಕೊಂಡಿದ್ದೆ>>
:)))))))))))))...

ಮಲ್ಲೇಶ್ವರಂ ೭ನೆ Crossಲ್ಲಿ ನನ್ನ ಗೆಳೆಯನ ಫ್ಲಾಟ್ ಲಿಫ್ಟ್ ಕೆಟ್ಟುಹೋಗಿದೆ ಎಂಬ ಸುದ್ದಿ ....ಒಂದು ವಾರದ ಹಿಂದೆ ಒಬ್ಬರು ಹೊಸದಾಗಿ ಶಿಫ್ಟ ಆಗಿದ್ದಾರೆ ಎಂದು ಕೂಡ ಹೇಳುತ್ತಿದ್ದ ...:)))

Submitted by ಗಣೇಶ Mon, 09/24/2012 - 23:52

In reply to by gopaljsr

:) :) ಗೋಪಾಲ್‌ಜಿ,
ಭಾಮು(c/o ಪಾಸಾ,ಚಲೋ ಮಲ್ಲೇಶ್ವರ) ನಿಂದಾಗಿ, ಲಿಫ್ಟ್ ವಿಷಯ ಬಿಡಿ, ಮಲ್ಲೇಶ್ವರ ಆಸುಪಾಸಿನಲ್ಲಿ ಓಡಾಡುವಂತೆಯೇ ಇಲ್ಲವಲ್ಲಾ :(

Submitted by ಗಣೇಶ Mon, 09/24/2012 - 23:58

In reply to by nkumar

ಶಿಫ್ಟ್ ನಲ್ಲಿ ನೀವು ಕೂಡ ಸೇರಿದ್ದರೆ ಸ್ವಲ್ಪ ತೂಕ ಇಳಿಸಬಹುದಿತ್ತೇನೋ ;).-- ಆ ಚಾನ್ಸ್ ಸಹ ಇಲ್ಲವಾಯಿತೇ. :(
>>>ನಿಮ್ಮ ಪ್ರೋಫೈಲ್ ಗೆ ಹಳೆಯ ಗಿಣಿ ಚಿತ್ರವೇ ಸರಿಯಾದ‌ ಹೊಂದಾಣಿಕೆ :)
ನಂದ ಅವರೆ, ಗಿಣಿ ಚಿತ್ರ ಇನ್ನೂ ಮರೆತಿಲ್ಲ! ನಿಮಗಾಗಿ ಗಿಣಿಯ ಲೇಟೆಸ್ಟ್ ಚಿತ್ರ ಇಲ್ಲಿ ಸೇರಿಸಲು ಪ್ರಯತ್ನಿಸಿದೆ..ಆಗುತ್ತಿಲ್ಲ. :(

Submitted by ಗಣೇಶ Tue, 09/25/2012 - 00:05

In reply to by makara

:) :) ಜೀ,
"ಥೋಡೀಸಿ ಲಿಫ್ಟ್ ಕರಾದೆ" ಅಂತ ಹಾಡಿಕೊಂಡು ಲಿಫ್ಟ್ ಬಳಿ ಹೋದರೆ, ಈ ನಾರ್ತ್‌ನ ಸೆಕ್ಯುರಿಟಿಗಳು "ಥೋಡೀಸಿ ಲಿಫ್ಟ್ ಕರಾಬ್ ಹೆ..ಆಪ್ ಸ್ಟೇರ್‌ಕೇಸ್ ಸೆ ಜಾಯಿಯೇ.." ಎನ್ನುವರು :(

Submitted by manju787 Thu, 09/20/2012 - 13:45

ಸೂಪರ್ ಕಣ್ರೀ ಗನೇ"ಸಣ್ಣ", ಈ ನಿಮ್ಮ ಭಾವನ ಐದಿಯಾನ ಸೀದಾ ಅದ್ನಾನ್ ಸಮಿಗೆ ಕಳಿಸಿದ್ದೇನೆ. ಅವನಿ೦ದ ನಿಮಗೆ ಶೀಘ್ರದಲ್ಲೇ ಫೋನ್ ಕಾಲ್ ಬರಬಹುದು! -:)

Submitted by ಗಣೇಶ Tue, 09/25/2012 - 00:09

In reply to by manju787

ಮಂಜಣ್ಣ, ಆತನ ಮುಂದಿನ ಹಾಡಿಗೆ ನನ್ನನ್ನೇ ಡ್ಯಾನ್ಸ್‌ಗೆ (ಆತ ತೆಳ್ಳಗಾಗಿರುವುದರಿಂದ) ಸಿಲೆಕ್ಟ್ ಮಾಡಲು ಕೇಳಿಕೊಳ್ಳುವೆ. :)
ನಿಮ್ಮ ಲೇಖನಗಳನ್ನು ನೋಡದೇ ಬಹಳ ದಿನವಾಯಿತು. ಅವುಗಳ ನಿರೀಕ್ಷೆಯಲ್ಲಿ..
-ಗಣೇಶ.

Submitted by bhalle Thu, 09/20/2012 - 18:34

<<ಮೊಬೈಲಲ್ಲಿ ಕಂಪ್ಯೂಟರ್ ಹಿಂಬದಿಯ ಕನೆಕ್ಷನ್‌ಗಳ ಫೋಟೋಗಳನ್ನು ಎಲ್ಲಾ ಆಂಗ್‌ಲ್‌ಗಳಲ್ಲೂ ತೆಗೆದೆ. ಇಷ್ಟು ವರ್ಷ ಬಾಡಿಗೆ ಕೊಡದೇ ವಾಸಿಸಿದ್ದ ಕ್ರಿಮಿಕೀಟಗಳಿಗೆ ಬೇರೆ ಮನೆ ಹುಡುಕಲು ಒಂದು ತಿಂಗಳ ನೋಟೀಸ್ ಕೊಟ್ಟೆ.>>
:-))))))))))

Submitted by bhalle Thu, 09/20/2012 - 18:35

In reply to by bhalle

"ಮೊಬೈಲಲ್ಲಿ ಕಂಪ್ಯೂಟರ್ ಹಿಂಬದಿಯ ಕನೆಕ್ಷನ್‌ಗಳ ಫೋಟೋಗಳನ್ನು ಎಲ್ಲಾ ಆಂಗ್‌ಲ್‌ಗಳಲ್ಲೂ ತೆಗೆದೆ. ಇಷ್ಟು ವರ್ಷ ಬಾಡಿಗೆ ಕೊಡದೇ ವಾಸಿಸಿದ್ದ ಕ್ರಿಮಿಕೀಟಗಳಿಗೆ ಬೇರೆ ಮನೆ ಹುಡುಕಲು ಒಂದು ತಿಂಗಳ ನೋಟೀಸ್ ಕೊಟ್ಟೆ."
:-)))

Submitted by venkatb83 Fri, 09/21/2012 - 17:00

In reply to by bhalle

ಗಣೇಶ್ ಅಣ್ಣ... ನಿಮ್ಮವರೆನೋ ಎಲ್ಲ ಹಳೆಯ ವಸ್ತುಗಳನ್ನು ಗುಜರಿಯವನಿಗೆ ಹಾಕಿ ಭಲೇ ಖ್ಸುಹಿ ಆಗಿರುವ ಹಾಗಿದೆ... ಆದರೆ ನೀವು ಮತ್ತೆ ಮೊದಲಿಂದ ಹಳೆಯದೆಲ್ಲವನ್ನು ಸಂಗ್ರಹಿಸಲು ಶುರು ಮಾಡಿದರೆ (ಇವತ್ತಿನ ಹೊಸದು, ಇವತ್ತು ಸಂಜೆಗೆ ಹಳತು)...!!!

ಅಂದ್ ಹಾಗೆ ನೀವು ಮತ್ತೆ ಮನೆ ಶಿಫ್ಟ್ ಮಾಡಿದಿರಾ?? ನೀವು ಒಂದೇ ಕಡೆ ನೆಲೆ ನಿಲ್ಲುವವರಲ್ಲವೇ?? ನಮ್ಮ ಕಡೆ ಬನ್ನೀ ಪ...!
ವಿಳಾಸ ನಿಮಗೆ ಗೊತ್ತಲ್ಲ...

ಶುಭವಾಗಲಿ..

ಶುಭ ಸಂಜೆ

ನನ್ನಿ

\|

Submitted by sathishnasa Sat, 09/22/2012 - 15:32

" ಶಿಪ್ಟಿಂಗ್ " ಕಥೆ ಸಖತ್ ಗಣೇಶ್ ರವರೇ, ಆದರೆ ಯಾವ ಏರಿಯಾದಿಂದ ಯಾವ ಏರಿಯಾಕ್ಕೆ ಶಿಪ್ಟ್ ಆಗಿದ್ದೀರಾ(ವಿಳಾಸದ ಜೊತೆಗೆ) ಅಂತ ತಿಳಿಸಿದ್ದರೆ ನಿಮ್ಮನ್ನ ಹುಡುಕುವುದು ಸುಲಭವಾಗುತಿತ್ತು...!!
...ಸತೀಶ್

Submitted by venkatb83 Sat, 09/22/2012 - 18:20

In reply to by sathishnasa

ಅವರು ಶಿಫ್ಟ್ ಆಗಿರೋದು ಹೇಳಿದರೆ ಆ ಕ್ಷಣವೇ ಇಲಿವರ್ಗೆ ಕಾದಿಟ್ಟ ಅವರ ಪರಮ ರಹಸ್ಯ ಬಯಲಿಗೆ ಬರೋಲ್ಲವೇ ??? ರಹಸ್ಯ ಯಾವತ್ತು ರಹಸ್ಯವೇ ,ಪರಮ ರಹಸ್ಯವೇ ಆಗಿರಬೇಕು ಅನ್ನೋದು ಅವರ ಅಲಿಖಿತ ನಿಯಮ....!!

Submitted by ಗಣೇಶ Sat, 09/22/2012 - 23:40

In reply to by venkatb83

>>>ಪರಮ ರಹಸ್ಯವೇ ಆಗಿರಬೇಕು ಅನ್ನೋದು ಅವರ ಅಲಿಖಿತ ನಿಯಮ....!! :)
ಹಾಗೇನಿಲ್ಲ. :) ಒಂದು ಪುಟ್ಟ ಹಳ್ಳಿಗೆ ಶಿಫ್ಟ್ ಅಗಿರುವೆ ಎಂದು ನಿಮ್ಮ ಬಳಿ ಆಗಲೇ ಹೇಳಿರುವೆನಲ್ಲ.
ಸತೀಶ್ ಮತ್ತು ಸಪ್ತಗಿರಿವಾಸಿಯವರಿಗೆ ಧನ್ಯವಾದಗಳು.

Submitted by Chikku123 Wed, 09/26/2012 - 12:06

:):) :)

ಪಾಪ ಗಣೇಶಣ್ಣ...
ಥೋಡೀ ಸೀ ಬದ್ಲು ಫುಲ್ ಶಿಫ್ಟ್ ಮಾಡ್ಸಿದ್ದಾರೆ!!

Submitted by Shreekar Mon, 10/15/2012 - 12:44

In reply to by ಗಣೇಶ

>>>>> ದೇವರ ಸ್ತೋತ್ರ, ಭಜನೆ, ಮಂತ್ರ ಹೇಳುವಾಗ ಅರ್ಥ ಗೊತ್ತಿದ್ದೇ ಹೇಳಬೇಕು ಎಂದೇನಿಲ್ಲ. ಬಾಯಿಗೆ ಬಂದಹಾಗೇ ಹೇಳಿ <<<<

ಸರಿಯಾಗಿ ನಾಲಗೆ ಹೊರಳದ ವಾಲ್ಮೀಕಿ ಜಪಿಸಿದ ಮಂತ್ರ ಮರಾ ಮರಾ ನೆನಪಾಯಿತು.
http://www.trinethram-divine.com/2011/07/mara-mara-mara-valmiki-chanting-rama.html#!/2011/07/mara-mara-mara-valmiki-chanting-rama.html