ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ – 29ನೇ ದುಂಡು ಮೇಜಿನ ಸಮ್ಮೇಳನ

ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ – 29ನೇ ದುಂಡು ಮೇಜಿನ ಸಮ್ಮೇಳನ

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಜನವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ ಕುರಿತು 29 ನೇ ಅಂತಾರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನವನ್ನು ಆಯೋಜಿಸಿದೆ.

 

ದಕ್ಷಿಣ ಏಷ್ಯಾ ಭಾಷೆಗಳ ಕುರಿತು ವಿಶೇಷವಾಗಿ ಅಧ್ಯಯನ ಮಾಡಿರುವ/ಮಾಡುತ್ತಿರುವ ಸುಮಾರು 120 ಮಂದಿ ಭಾಷಾತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಅಮೆರಿಕ, ಕೆನಡ, ಸಿಂಗಪೂರ್, ಮಲೇಶಿಯ, ಜಪಾನ್ ಮುಂತಾದ ದೇಶಗಳ 25 ಮಂದಿ ಭಾಷಾತಜ್ಞರು ಕೂಡ ಸೇರಿದ್ದು, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

 

ಭಾರತದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನವು ಈ ಹಿಂದೆ 2006ರಲ್ಲಿ ಡಿಸೆಂಬರ್ 19ರಿಂದ 21ರವರೆಗೆ ಮೂರು ದಿನಗಳ ಕಾಲ ಮೈಸೂರಿನಲ್ಲಿಯೇ ನಡೆದಿತ್ತು. ಆಗ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿತ್ತು. 

Rating
No votes yet