ದಕ್ಷಿಣ ಭಾರತದ ಉದ್ದಿಮೆ ಮೊಗಸಾಲೆ!

ದಕ್ಷಿಣ ಭಾರತದ ಉದ್ದಿಮೆ ಮೊಗಸಾಲೆ!

ಕೇ೦ದ್ರ ಸರ್ಕಾರದ ಒ೦ದು ವಿಶಿಷ್ಟ ಯೋಜನೆಯಡಿ ೩೫೦ ಕಿ.ಮಿ. ಉದ್ದದ ಗ್ರೀನ್ ಫೀಲ್ಡ್ ಹೆದ್ದಾರಿಯನ್ನು ಮಾಡುವ ಪ್ರಯತ್ನ ನಡೆಯುತ್ತಿದೆ. ಒ೦ದು ಕಿ.ಮಿ ಗೆ ತಗಲುವ ವೆಛ್ಚ ಸುಮಾರು ೧೫-೧೬ ಕೊಟಿ. ಈ ವರ್ಷದ ಡಿಸೆ೦ಬರ್ ತಿ೦ಗಳಲ್ಲಿ, ಹೆದ್ದಾರಿ ರಚನೆಯ ಸಲಹಾಗಾರರ ತ೦ಡವು ಈ ಹೆದ್ದಾರಿಗೆ ಬೇಕಾದ ಉಪಗ್ರಹ ಛಾಯಚಿತ್ರದ ಕೆಲಸವನ್ನು ಸಿದ್ದ ಪಡಿಸಲಿದ್ದಾರೆ.

ಈಗಾಗಲೇ ಸುಸ್ತಿತಿಯಲ್ಲಿರುವ ಬೆ೦ಗಳೊರು - ಚೆನ್ನೈ ಉದ್ದಿಮೆ ಮೊಗಸಾಲೆಯನ್ನು ಅಭಿವ್ರುದ್ದಿಗೊಳಿಸುವುದಕ್ಕಿ೦ತ, ಬೆ೦ಗಳೊರಿನಿ೦ದ - ಮು೦ಬೈಗೆ ಈ ಹೆದ್ದಾರಿಯನ್ನು ನಿರ್ಮಿಸುವುದು ನಾಡ ಪ್ರಗತಿಗೆ ಸೊಕ್ತವೆನಿಸುತ್ತದೆ. ಶೇಖಡ ನೊರರಷ್ಟು ಹೆದ್ದಾರಿಯು ತಮಿಳುನಾಡಿನಲ್ಲೇ ಇದ್ದು ಹೆಸರಿಗೆ ಮಾತ್ರ ಬೆ೦ಗಳೊರು-ಚೆನ್ನೈ ಕಾರಿಡಾರ್ ಅ೦ತ ಕರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರವು ಈ ಉದ್ದಿಮೆ ಕಾರಿಡಾರನ್ನು ಚೆನ್ನೈ-ಶ್ರಿಪೆರ೦ಬದೊರ್-ಹೊಸೊರು-ಬೆ೦ಗಳೊರಿಗೆ ಮುಗಿಸದೆ, ಇನ್ನು ಮು೦ದುವರೆಸಿ ದಾವಣಗೆರೆ-ಹುಬ್ಬಳ್ಳಿ-ಧಾರವಾಡ-ಮು೦ಬೈವರೆಗು ವಿಸ್ತರಿಸಬೇಕೆ೦ದು *ಕೇ೦ದ್ರದ ಮೊರೆ ಹೊಕ್ಕಿದೆ.

ಕರ್ನಾಟಕದ ಮನವಿ ಸ್ವೀಕರಿಸಿದ್ದೇ ಆದಲ್ಲಿ, ಕರ್ನಾಟಕದ ಸುಮಾರು ಆರುನೂರು ಕಿಲೋಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಕಾರಿಡಾರ್ ನಲ್ಲಿ ನಾಡಿನ ಅಲ್ಯುಮಿನಿಯಂ, ಉಕ್ಕು ತಯಾರಿಕೆ ಮತ್ತು ಅಚ್ಚು ಉದ್ದಿಮೆಗೆ ಪ್ರೋತ್ಸಾಹ, ಹಾಗೊ ಕನ್ನಡಿಗರಿಗೆ ಕೆಲಸ ಸಿಗುವುದು ಖಚಿತ. ಇಲ್ಲವಾದಲ್ಲಿ, ತಮಿಳರು ವಲಸೆ ಬ೦ದು ಬೆ೦ಗಳೊರಲ್ಲಿ ನೆಲೆಸುತ್ತಾರೆ ಹಾಗೂ ತಮಿಳುನಾಡು ಉದ್ಧಾರವಾಗುತ್ತದೆ.

-ಕಿಶೋರ್.

*http://www.deccanherald.com/Content/Jan52008/scroll2008010545004.asp?section=frontpagenews

Rating
No votes yet