ದಯಾಮಯ (ಠಾಗೋರರ ಗೀತಾಂಜಲಿಯಿಂದ Little Flute ಕವಿತೆಯ ಕನ್ನಡಾನುವಾದ )

ದಯಾಮಯ (ಠಾಗೋರರ ಗೀತಾಂಜಲಿಯಿಂದ Little Flute ಕವಿತೆಯ ಕನ್ನಡಾನುವಾದ )

ರಚನೆ: ಬಾಲ ಮಧುರಕಾನನ
ಸ್ವರ ಸಂಯೋಜನೆ: ಶ್ರೀಶ ಹೊಸಬೆಟ್ಟು

ನಿನ್ನ ಇಚ್ಛೆಯ ತೆರದೆ ಎನ್ನ ಜೀವನವನ್ನು
ಸಂತೋಷದಿಂದಿಂದು ಕೊನೆಯಿಲ್ಲದಾಗಿಸಿದೆ
ಈ ಕಲಶ ದುರ್ಬಲವು ಬರಿದುಗೊಳಿಸುತಲದನು
ಮತ್ತೆ ನೀನದರಲ್ಲಿ ನವಜೀ ವವನೆರೆದೆ ||೧||

ಈ ಕಿರಿದು ಮುರಳಿಯಲಿ ನಿನ್ನುಸಿರನೂದಿದೆಯ
ಎಲ್ಲೆಡೆಗು ಎನ್ನ ದನಿಯ ಕೇಳಿಸುತಲಿಂದು
ಗುಡ್ಡೆ ಕಣಿವೆಗಳಲ್ಲಿ ಕೊಂಡೊಯ್ದೆ ನೀನದನು
ನಿತ್ಯ ಸುಸ್ವನವ ನೆನ್ನಿಂದ ಹೊಮ್ಮಿಸುತ ||೨||

ನಿನ್ನ ಕರಗಳ ಅಮರ ಸ್ಪರ್ಶಕೆನ್ನೆದೆ ಮರೆತು
ಮೀರಿ ಪಾರವ ಒಲವಿನೊ ಳೋಲಾಡಿತು
ನಿನ್ನ ಕರಗಳ ಮಧುರ ಸ್ಪರ್ಶಕೆನ್ನೆದೆ ಅರಳಿ
ಬಣ್ಣಿಸೆ ಅಸಾಧ್ಯವಹ ಮಾತ ಹೊಮ್ಮಿಸಿತು||೩||

ಅಗಣಿತದ ಕೊಡುಗೆಗಳು ನಿನ್ನಿಂದ ಬರುತಿರಲು
ಸ್ವೀಕರಿಸುವೆ ಈ ಎರಡು ಪುಟ್ಟ ಕರಗಳಲಿ
ಎರೆಯುತಿಹೆ ಕರುಣೆಯನು ಕಾಲ ಉರುಳುತಲಿರಲಿ
ತಾವಿಹುದು ಬಾಕಿಯಿದೊ ಇನ್ನೂ ನನ್ನೊಳಗೆ ||೪||

<iframe width="100%" height="450" scrolling="no" frameborder="no" src="https://w.soundcloud.com/player/?url=https%3A//api.soundcloud.com/tracks..."></iframe>

Rating
No votes yet

Comments