ದರ್ಬಾರ್ ಇದು ಕಾಮಿಡ ದರ್ಬಾರ್...

ದರ್ಬಾರ್ ಇದು ಕಾಮಿಡ ದರ್ಬಾರ್...

ಕನ್ನಡದ ಕಾಮಿಡಿಯನ್ ಯಾರು..ಇಂತಹ ಪ್ರಶ್ನೆಗಳಿಗೆ ಈಗ ಹಲವು ಉತ್ತರಗಳು ಸಿಗುತ್ತವೆ. ಆಗ ಕೇವಲ ಕೆಲವೇ ಕೆಲವು. ನರಸಿಂಹರಾಜು,ದಿನೇಶ್,ಮುಸ್ರಿಕೃಷ್ಣಮೂರ್ತಿ, ಆದರೆ, ಇವರ ಕಾಲ  ಇತಿಹಾಸ ಪುಟ ಸೇರಿದ ನಂತರ ಅನೇಕರು ಬಂದರು. ಈಗಲೂ ಬರುತ್ತಿದ್ದಾರೆ.ಚಿತ್ರದ ನಾಯಕರೂ ಹಾಸ್ಯ ಮಾಡುವುದನ್ನ ಕಲೆತಿದ್ದಾರೆ. ರಮೇಶ್ ಅರವಿಂದ್ ಅಂತಹ ನಟರು ಕಾಮಿಡಿ ಟೈಮಿಂಗ್ ಟ್ರೈ ಮಾಡುವ ನಾಯಕ ಅಂದ್ರೆ, ತಪ್ಪಾಗೋದಿಲ್ಲ. ಸಾಧು ಕೋಕಿಲ ರಂತಹ ನಟರಿಗೆ ಲ್ಯಾಂಗ್ಜೇಜೆ ಬೇಡ. ಸ್ಕ್ರೀನ್ ಮೇಲೆ ಬಂದರೆ ಸಾಕು. ನಗೆ ತಾನೇ ಚಿಮ್ಮುತ್ತದೆ.  ರಂಗಾಯಣ ರಘು ಎಲ್ಲ ಥರದ ಕ್ಯಾರೆಕ್ಟರ್ ಹ್ಯಾಂಡಲ್ ಮಾಡಿ ಕಾಮಿಡಿ ಮಾಡಬಲ್ಲ ಚತುರ ಕಲಾಕಾರ್...


ಇವರಲ್ಲಿ ಈ ಮೂವರು ಒಟ್ಟಿಗೆ ಸೇರಿ ಒಂದೇ ಸ್ಕ್ರೀನ್ ಮೇಲೆ ಬಂದರೇ ಹೇಗೆ. ಇಂತಹದ್ದೇ ಒಂದು ಕೆಲಸ ಕನ್ನಡದಲ್ಲಿ ನಡೆದಿದೆ.`ಹೆಂಡ್ತಿರ್ ದರ್ಬಾರ್' ಚಿತ್ರದಲ್ಲಿ ಸಾಧು ಕೋಕಿಲ್  ಮತ್ತು ರಂಗಾಯಣ ರಘು ನೆರೆ ಹೊರೆಯವರಾಗಿದ್ದಾರೆ. ಇವರ ಮಧ್ಯೆ ನಾಯಕ ರಮೇಶ್ ಅರವಿಂದ್ ಅವರ ಕಾಮಿಡಿ ಟಚ್ ಬೇರೆ.
ಇಷ್ಟಂದ್ರೆ ಹೇಳಬೇಕೆ.ಕೌಟುಂಬಿಕ ಸಮಸ್ಯೆಗಳ ಜೊತೆ..ಜೊತೆಗೆ ಖ್ಯಾತ್ ನಿರ್ದೇಶಕ ವಿ.ಶೇಖರ್ ಹಾಸ್ಯಲೇಪತಿ ಚಿತ್ರ ಮಾಡಿದ್ದಾರೆ.


ಆದ್ರೆ, ನಿಮಗೆ ಈಗಾಗಲೆ ಅನಿಸಿರಬಹುದು. ಕನ್ನಡದಲ್ಲಿ ವಿ.ಶೇಖರ್ ಅನ್ನೊ ನಿರ್ದೇಶಕರೇ ಇಲ್ಲವಲ್ಲ.ಯಾರಿದು ಅಂತ ನಿಮ್ಮಲ್ಲಿ ಪ್ರಶ್ನೆ ಹುಟ್ಟಿಕೊಂಡಿರಬಹುದು. ನಿಜ, ಇವರು ಕನ್ನಡದವರಲ್ಲ  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರು. ಸರಿ ಸುಮಾರು 18 ಚಿತ್ರಗಳನ್ನ ಮಾಡಿದ್ದಾರೆ.ತಮಿಳನಲ್ಲಿ ಇವರ ಈ 18 ಸಿನೆಮಾಗಳಲ್ಲಿ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಅದೇ ಚಿತ್ರಗಳಲ್ಲಿ ಕೆಲವು ಕನ್ನಡಕ್ಕೂ ಬಂದಿವೆ. ಮುದ್ದಿನ ಮಾವ,ಯಾರಿಗೆ ಸಾಲುತ್ತೇ ಸಂಬಳಗಳಂತಹ ಕನ್ನಡದ ಕೌಟುಂಬಿಕ ಚಿತ್ರಗಳೆಲ್ಲ   ಇವರ  ಅನುಭವದಿಂದಲೇ ಹೊರಹೊಮ್ಮಿ ಕನ್ನಡಕ್ಕೆ ಬಂದಿವೆ.


ಕನ್ನಡದ ಹೆಂಡ್ತಿರ್ ದರ್ಬಾರ್ ಕೂಡ  ತಮಿಳು ಭಾಷೆಯಲ್ಲಿ ಸಿದ್ಧವಾಗಿತ್ತು. ತಮ್ಮ ಚಿತ್ರಗಳ ಬಿಗ್ ಫ್ಯಾನ್ ರಾಮಚಂದ್ರನ್ ಒತ್ತಾಯದ ಮೇರೆಗೆ ಖುದ್ ವಿ.ಶೇಖರ್ ಕನ್ನಡಕ್ಕೆ ಬಂದು `ಹೆಂಡ್ತಿರ ದರ್ಬಾರ್ 'ಮಾಡಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು,ರಮೇಶ್ ಅರವಿಂದ್ ಅವರುಗಳ ಕಡೆಯಿಂದ ತಮ್ಮ ಕಲ್ಪನೆಯಲ್ಲಿ ಹೇಗಿದೆಯೋ..ಹಾಗೇನೆ ದರ್ಬಾರ್ ಸಿದ್ಧಗೊಳಸಿದ್ದಾರೆ.


ಬರುವ ಜುಲೈ 2 ರಂದು ಚಿತ್ರ ತೆರೆಗೂ ಬರಲಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅಂತ  ಈಗಲೇ ಹೇಳೊದು ಕಷ್ಟ. ಚಿತ್ರ ಬಂದ ಮೇಲೆ ಇದರ ಬಗ್ಗೆ ಒಂದು ವಿಮರ್ಶೆ ಮಾಡಬಹುದು. ಆದ್ರೆ, ಚಿತ್ರೀಕಣದ ಸಂದರ್ಭದಲ್ಲಿಯ ಕೆಲವು ಸನ್ನಿವೇಶಗಳನ್ನ ನಾಯಕ ರಮೇಶ್ ಅರವಿಂದ್ ಈಗ ಹಂಚಿಕೊಂಡಿದ್ದಾರೆ.ನಿರ್ದೇಶಕ ವಿ.ಶೇಖರ್ ರಮೇಶ್ ಅವರಿಗೆ ಹೆಂಡ್ತಿ ಥರವೇ ಕಾಡಿದ್ದಾರೆ. ಚಿತ್ರದ ವೇಳೆ ತಮಗೆ ಹೇಗೆ ಬೇಕೊ. ಹಾಗೆ ಸೀನ್ಸ್ ಬರದೇ ಹೋದ್ರೆ ಹೆಂಡ್ತೀರ ಥರ ಹಠ ಮಾಡ್ತಿದ್ದರಂತೆ.ಹಾಗೇನಾದ್ರೂ ಅದು ಅಸಾಧ್ಯವೆನಿಸಿದಾಗ ಹೆಂಡ್ತಿ ಮುದ್ದು ಮಾಡೋ ಹಾಗೆ ಮುದ್ದು ಮಾಡಿ..ಐಸ್ ಇಟ್ಟು ಕೆಲಸ ತೆಗೆತಿದ್ದರಂತೆ..


ಹೊಸ ಹುಡುಗಿ ಅಂಬಿಕಾ ಎಕ್ಸ್ ಪಿಯರೆನ್ಸ್ ಹೀಗೆಲ್ಲ  ಇಲ್ಲ ಬಿಡಿ. ಹೆಚ್ಚು ಸಾಧು ಅವರೊಟ್ಟಿಗೇನೆ ಈ ರಂಗಭೂಮಿ ಕಲಾವಿದೆಯ ಸೀನ್ ಗಳಿವೆ,ಸಂಭಾಷಣೆಗಳಿವೆ. ಹಾಗಾಗಿ, ಈ ನಟಿಗೆ ಸಾಕಷ್ಟು ಹಾಸ್ಯಭರಿತ ಸನ್ನಿವೇಷಗಳು ಎದುರಾಗಿವೆ.ತೆರೆಯ ಹಿಂದಿನ ಶೂಟಿಂಗ್ ಅನುಭವದಲ್ಲಿ ಒಂದು ಸನ್ನಿವೇಷವನ್ನ ಹಂಚಿಕೊಂಡ್ರು. ಸಾಧು ಅವರಿಗೆ ಅಂಬಿಕಾ ಹೊಡೆಯುವ ಸೀನ್ ಅದು. ಡೈರೆಕ್ಟರ್ ಟೇಕ್ ಹೇಳೊದೇ ತಡ. ಅಂಬಿಕಾ ಹೊಡೆದದ್ದೇ ಹೊಡದದ್ದು.  ಇದನ್ನ ನೋಡಿದವರೆಲ್ಲ ಸಖತ್ ಎಂಜಾಯ್ ಮಾಡಿದ್ರಂತೆ. ಸೀನ್ ಮುಗಿಯೋದೇ ತಡ. ನಿಜವಾಗಲೂ ಸೀನ್ ಸಖತ್ ಆಗಿತ್ತು ಅಂತ ಹೊಗಳಿದರಂತೆ..


ಆದ್ರೆ, ರಂಗಾಯಣ ರಘು ಆಗಲಿ, ಸಾಧು ಕೋಕಿಲ  ಆಗಲಿ.ದರ್ಬಾರ್ ನ ದರ್ಬಾರ್ ಗಿರಿ ಹಂಚಿಕೊಳ್ಳು ಬಂದಿರಲಿಲ್ಲ. ಇದು ಸಿಗದೇ ಇದ್ದರೇ ಏನಾಯ್ತು.ಇವರ ಹಾಸ್ಯವನ್ನ ತೆರೆ ಮೇಲೆ ನೋಡಿಯೇ ಎಂಜಾಯ್  ಮಾಡೋಣ   ಅಲ್ಲವೇ...


ರೇವನ್ ಪಿ.ಜೇವೂರ್

Rating
No votes yet

Comments