ದಶಾವತಾರದ ಕಲ್ಪನೆಯ ಕಾಲಮಾನವೇನು
ದಶಾವತಾರದ ಮೊದಲ ಎಂಟು ಅವತಾರಗಳು ಸರಿ, ನಮ್ಮ ಪುರಾಣಗಳಲ್ಲಿ ಪ್ರಸ್ತಾಪ ಮಾಡಲ್ಪಟ್ಟಿದೆ, ಮತ್ತು ಆ ಅವತಾರಗಳು ಹಿಂದುಗಳ ನಂಭಿಕೆ, ಧರ್ಮ ಗಳೊಡನೆ ಸಂಬಂದಿಸಿದೆ, ಆದರೆ ನನಗೆ ಸದಾ ಅನುಮಾನ ಹುಟ್ಟುವುದು ಕಡೆಯ ಎರಡು ಅವತಾರಗಳ ಬಗೆಗೆ . ಕೃಷ್ಟಾವತಾರವನ್ನು ವಿಷ್ಣುವಿನ ಎಂಟನೆ ಅವತಾರ ಎಂದು ಬಣ್ಣಿಸಲ್ಪಟ್ಟಿದೆ ಹಾಗು ಅಲ್ಲಿ ಭಗವದ್ಗೀತೆಯಲ್ಲಿ ಕೃಷ್ಣನೆ ತಾನೆ ನೇರವಾಗಿ ’ಎಲ್ಲವು ನಾನೆ’ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲಿಯವರೆಗು ಸರಿಯೆ.
ಆದರೆ ದಶಾವತಾರದ ಒಂಬತ್ತನೆ ಅವತಾರ ಬುದ್ದ ಅಥವ ಗೌತಮ ಬುದ್ದ ಎಂದು ಎಲ್ಲಡೆ ಹೇಳಲ್ಪಡುತ್ತದೆ. ಆದರೆ ಬೌದ್ದ ಧರ್ಮ ಬೇರೆಯದೆ ಆದ ತಳಹದಿಯ ಮೇಲಿದ್ದು, ಅದನ್ನು ಹಿಂದು ಧರ್ಮದ ಒಂದು ಬಾಗ ಎಂದು ಎಲ್ಲಿಯು ಹೇಳಿಲ್ಲ. ಅಲ್ಲದೆ ನನಗೆ ತಿಳಿದಂತೆ ಬೌದ್ದ ಧರ್ಮವು ದೇವರ ಇರುವಿಕೆಯನ್ನಾಗಲಿ, ಅಥವ ವೇದಗಳನ್ನು ನಂಬುವದಾಗಲಿ ಮಾಡುವದಿಲ್ಲ. ಬೌದ್ದ ಧರ್ಮವು ಈ ಎರಡು ವಿಷಯದಲ್ಲಿ ವಿರುದ್ದ ನಿಲುವನ್ನೆ ತಳೆದಿರುವಂತೆ ಗೋಚರಿಸುತ್ತದೆ, ಹಾಗಿರಲು ಬೌದ್ದ ಧರ್ಮದ ಸ್ಥಾಪಕನಾದ ಬುದ್ದನನ್ನು ವಿಷ್ಟುವಿನ ಒಂಬತ್ತನೆ ಅವತಾರ ಎಂದು ಯಾವ ರೀತಿ ಹೇಳಿರುತ್ತಾರೆ ತಿಳಿಯುವದಿಲ್ಲ.
ಮತ್ತು ಕಡೆಯದಾಗಿ ಹತ್ತನೆ ಅವತಾರವಾದ ಕಲ್ಕಿ ಅವತಾರದ ಪ್ರಸ್ತಾಪದ ಬಗ್ಗೆಯು ಕುತೂಹಲ ಮೂಡುತ್ತದೆ. ಇನ್ನು ಹತ್ತನೆ ಅವತಾರವನ್ನು ವಿಷ್ಣು ತಳೆದಿರುವನೊ ಇಲ್ಲವೊ ನನಗೆ ಸ್ವಷ್ಟತೆ ಇಲ್ಲ. ಇಲ್ಲಿ ಕಲ್ಕಿ ಎಂದರೆ ಕಾಲವನ್ನು ಕುರಿತು ಹೇಳಿದ್ದಾರ ಹೇಗೆ ತೀಳಿಯುತ್ತಿಲ್ಲ. ಮತ್ತೆ ಮೊದಲ ಅವತಾರಗಳೆಲ್ಲವು ನೇರವಾಗಿ ವಿಷ್ಣುವಿನ ಅಂಶವೆಂದ ಹೇಳಲ್ಪಟ್ಟಿದೆ, ಇನ್ನು ಕಲ್ಕಿ ಯಾರು ಅವನ ಅವತಾರ ಆಗಿದೆಯ ಅಥವ ಆಗಬೇಕಿದೆಯ ತಿಳಿದಿಲ್ಲ. ಹಾಗಿದ್ದರು ಅದು ದಶಾವತಾರದ ಹತ್ತನೆ ಪಾತ್ರ.
ಹಾಗೆ ನೋಡುವಾಗ ದಶಾವತಾರದ ಕಲ್ಪನೆ ಬೌದ್ದಾವತಾರದ ನಂತರ ಅಂದರೆ ಈಚಿನ ಕಾಲಮಾನದಲ್ಲಿ ಬಂದಿರುವಂತೆ ಅನ್ನಿಸುತ್ತದೆ. ಇಲ್ಲದಿದ್ದರೆ, ಒಂದು ವೇಳೆ ಈ ಕಲ್ಪನೆ ಕೃಷ್ಣ ಅಥವ ರಾಮನ ಕಾಲದ್ದಾಗಿದ್ದಲ್ಲಿ, ಅದನ್ನು ಅಷ್ಟಾವತಾರ ಎಂದೊ ಸಪ್ತಾವತಾರ ಎಂದೊ ಅನ್ನುತ್ತಿದ್ದರು. ಅಥವ ಇನ್ನು ಆಗಿಲ್ಲದ ಕಲ್ಕಿಯ ಅವತಾರವ ಕಲ್ಪಿಸುತ್ತ ದಶಾವತಾರ ಎನ್ನುವಂತೆ, ಕೃಷ್ಣನ ಕಾಲದಲ್ಲಿಯೆ ಬುದ್ದಾವತಾರದ ಕಲ್ಪನೆಯು ಏಕೆ ಬರಲಿಲ್ಲ.
ದಶಾವತಾರದ ಕಲ್ಪನೆ ಯಾವ ಕಾಲಮಾನದಲ್ಲಿ ಪ್ರಾರಂಬವಾಯಿತು ಯಾರಾದರು ತಿಳಿಸುವಿರ ?
Rating
Comments
ನೋಡಿ -
ನೋಡಿ -
http://sampada.net/blog/shamala/08/05/2009/19997?page=5
http://sampada.net/blog/uniquesupri/07/02/2008/7367
http://www.kannadalyrics.com/?q=node/4053
In reply to ನೋಡಿ - by ananthesha nempu
ವಂದನೆಗಳು ಅನಂತೇಶ ನೆಂಪುರವರೆ
ವಂದನೆಗಳು ಅನಂತೇಶ ನೆಂಪುರವರೆ
'ಸಂಪದ' ಎಂದಿದ್ದರು 'ಸಂಪದ'ವೆ ಯಾವ ವಿಷಯ ಕೆದಕಿದರು ವಿವರ ಸಿಗುವುದು , ವಿಶ್ವಕೋಶದಂತೆ
In reply to ವಂದನೆಗಳು ಅನಂತೇಶ ನೆಂಪುರವರೆ by partha1059
ಆದರೆ ಕೆದಕಲು (ಹುಡುಕಲು) ಈಗ
ಆದರೆ ಕೆದಕಲು (ಹುಡುಕಲು) ಈಗ ಗು0ಡಿಗಳೇ (option) ಇಲ್ಲವಾಗಿದೆಯಲ್ಲಾ :)
In reply to ಆದರೆ ಕೆದಕಲು (ಹುಡುಕಲು) ಈಗ by ananthesha nempu
ಬೆಂಗಳೂರಿನಲ್ಲಿ ಗುಂಡಿಗೆ ಬರವೆ ?
ಬೆಂಗಳೂರಿನಲ್ಲಿ ಗುಂಡಿಗೆ ಬರವೆ ? ಬೇಕಾದಷ್ಟಿವೆ ಹಹ್ಹಹ್ಹ :)
In reply to ಬೆಂಗಳೂರಿನಲ್ಲಿ ಗುಂಡಿಗೆ ಬರವೆ ? by partha1059
ಇದನ್ನು ಓದಿ: http://pvravi
ಇದನ್ನು ಓದಿ: http://pvravi.blogspot.com/2006/10/blog-post_09.html
ಕನ್ನಡದಲ್ಲಿ ಕಲ್ಕಿಯ ಬಗೆಗೆ
ಕನ್ನಡದಲ್ಲಿ ಕಲ್ಕಿಯ ಬಗೆಗೆ ತಿಳಿಯಲು http://kn.wikipedia.org/wiki/%E0%B2%95%E0%B2%B2%E0%B3%8D%E0%B2%95%E0%B2%BF (http://kn.wikipedia.org/wiki/ಕಲ್ಕಿ ) ನೋಡಿ. - ಇದನ್ನು ನಾನೇ ಸೇರಿಸಿದ್ದು .
ಇಂಗ್ಲೀಷ್ ವಿಕಿಪೀಡಿಯ (http://en.wikipedia.org/wiki/Kalki) ದಲ್ಲಿ ಹೆಚ್ಚಿನ ಮಾಹಿತಿ ಇದೆ.
ಹತ್ತು ಅವತಾರಗಳ ಪಟ್ಟಿಯಲ್ಲಿ ಪರಶುರಾಮನ ಬದಲಿಗೆ ಬುದ್ಧನನ್ನು ಸೇರಿಸಿರುವ ಬಗೆಗೆ ಎಲ್ಲೋ ಓದಿದ್ದೆ.
In reply to ಕನ್ನಡದಲ್ಲಿ ಕಲ್ಕಿಯ ಬಗೆಗೆ by shreekant.mishrikoti
ಪರಶುರಾಮನಲ್ಲ, ಹಲಾಯುಧ..
ಪರಶುರಾಮನಲ್ಲ, ಹಲಾಯುಧ.. ಈಗಲೂ ದಶಾವತಾರದ ಮಣ್ಣಿನ ವಿಗ್ರಹಗಳಲ್ಲಿ ನೋಡಿದರೆ ನಿಮಗೆ ಹಲಾಯುಧ ಸಿಗುತ್ತಾನೆ. ಅದನ್ನು ಬಲರಾಮ ಎಮ್ದು ತಪ್ಪಾಗಿ ಗುರುತಿಸುವ ವಾಡಿಕೆಯಿದೆ. ಇಲ್ಲಿ ಚಿಟಕಿಸಿ ನೋಡಿ. http://pvravi.blogspot.com/2006/10/blog-post_09.html
In reply to ಪರಶುರಾಮನಲ್ಲ, ಹಲಾಯುಧ.. by hamsanandi
ಹಂಸಾನಂದಿಯವರೆ ಹಲಾಯುಧನ ಹೆಸರನ್ನು
ಹಂಸಾನಂದಿಯವರೆ ಹಲಾಯುಧನ ಹೆಸರನ್ನು ಇದೆ ಪ್ರಥಮ ಬಾರಿ ಕೇಳುತ್ತಿದ್ದೇನೆ, ಆದರೆ ಅದಕ್ಕೆ ಸಂಬಂದಿಸಿದ ಇತಿಹಾಸ ಕತೆ ಪುರಾಣಗಳನ್ನು ಎಲ್ಲಿಯೂ ಕೇಳಿಲ್ಲ. ಅವನು ಬಲರಾಮನಾಗಿರುವ ಸಾದ್ಯತೆ ಇಲ್ಲ, ಹಲಾಯುಧನು ಒಂದು ಅವತಾರವೆಂದು ಒಪ್ಪಿದಲ್ಲಿ, ಲಕ್ಷ್ಮಣನನ್ನು ಅವತಾರ ಎಂದೆ ಒಪ್ಪಬೇಕಾಗುತ್ತೆ ಅಲ್ಲವೆ ? ಮಾಹಿತಿಗೆ ಧನ್ಯವಾದ
In reply to ಹಂಸಾನಂದಿಯವರೆ ಹಲಾಯುಧನ ಹೆಸರನ್ನು by partha1059
ಹಂಸಾನಂದಿಯವರೇ , ನೀವು ಕೊಟ್ಟ
ಹಂಸಾನಂದಿಯವರೇ , ನೀವು ಕೊಟ್ಟ ಕೊಂಡಿಗಾಗಿ ಧನ್ಯವಾದಗಳು , ಹಲಾಯುಧನ ಕುರಿತು ಬಹಳಷ್ಟುಮಾಹಿತಿ ಅಲ್ಲಿದೆ.
In reply to ಪರಶುರಾಮನಲ್ಲ, ಹಲಾಯುಧ.. by hamsanandi
ಹೌದು ಅದು ಬಲರಾಮ ಇರಬಹುದು,
ಹೌದು ಅದು ಬಲರಾಮ ಇರಬಹುದು, ಸರಿಯಾಗಿ ನನಗೆ ನೆನಪಿಲ್ಲ.
In reply to ಕನ್ನಡದಲ್ಲಿ ಕಲ್ಕಿಯ ಬಗೆಗೆ by shreekant.mishrikoti
ಶ್ರೀಕಾಂತರೆ ಉತ್ತಮ ಮಾಹಿತಿ
ಶ್ರೀಕಾಂತರೆ ಉತ್ತಮ ಮಾಹಿತಿ ಒದಗಿಸಿದರಿ ಧನ್ಯವಾದಗಳು. ಹಾಗೆ ನೀವು ಸೇರಿಸಿರುವ ಪುಟ ಸಹ ನೋಡಿದೆ, ಅಲ್ಲಿ ಕನ್ನಡದಲ್ಲಿ ವರ್ಣಮಾಲೆಯ ಪ್ರಕಾರವೆ ವಿಕಿಪೀಡಿದ ದಲ್ಲಿ ಹುಡುಕಬಹುದು! , ಹಾಗೆ ಕಲ್ಕಿಯ ಬಗೆಗೆ ಗರುಡ ಪುರಾಣದಲ್ಲಿ ತಿಳಿಸಿಲಾಗಿದೆ. ಬಹುಷಃ ಒಂಬತ್ತನೆ ಅವತಾರ ಬುದ್ದನ ಬಗೆಗೆ ಗರುಡಪುರಾಣದಲ್ಲಿರಲು ಸಾದ್ಯವಿಲ್ಲ ಅನ್ನಿಸುತ್ತದೆ, ಏಕೆಂದರೆ ಗರುಡಪುರಾಣವು ಬುದ್ದನ ಕಾಲಕ್ಕಿಂತಲು ಹಳೆಯದು ಅನ್ನಿಸುತ್ತೆ. ಹಾಗಾಗಿ ನೀವು ಹೇಳಿದಂತೆ ಪರುಶರಾಮನನ್ನು ವಿಷ್ಣುವಿನ ಅಂಶ ಎಂದುಕೊಳ್ಳಬಹುದೇನೊ, ಹಾಗೆ ಬಾಗವತಪುರಾಣದಲ್ಲಿ ೨೫ ಅವತಾರ ಅನ್ನುವ ವಿಷಯ ತಿಳಿದು ಆಶ್ಚರ್ಯವಾಯಿತು !. ಬುದ್ದನ ಅವತಾರವು ನಂತರ ಯಾವಾಗಲೊಸೇರಿರುವ ಸಾದ್ಯತೆಯೆ ಹೆಚ್ಚು. ನೀವು ಕೊಟ್ಟಿರುವ ಲಿಂಕ್ ಗಳಿಗೆ ಧನ್ಯವಾದಗಳು
ಪಾರ್ಥ ಅವರೆ,
ಪಾರ್ಥ ಅವರೆ,
ಬುದ್ದನ ಬಗ್ಗೆ ನನ್ನ ತಿಳುವಳಿಕೆ = http://sudhieblog.blogspot.in/2012/12/blog-post_7.html
ಕಾರಾಣಾ0ತರದಿ0ದ ಈ ಲೇಖನ ಇಲ್ಲಿ ಪ್ರಕಟಿಸಲು ಸಾಧ್ಯವಾಗಲ್ಲಿಲ್ಲ .. ಕ್ಷಮೆ ಇರಲಿ.
In reply to ಪಾರ್ಥ ಅವರೆ, by ಸುಧೀ೦ದ್ರ
ಚುಟುಕು ಕುಟುಕು ಚೆನ್ನಾಗಿದೆ ,
ಚುಟುಕು ಕುಟುಕು ಚೆನ್ನಾಗಿದೆ , ಬುದ್ದನೆ0ದರೆ ಬುದ್ದನಲ್ಲ ಮತ್ತೊಬ್ಬ ಬುದ್ದ !
ದಶಾವತಾರ ಕೆದಕಲು ಹೊರಟು ಏನೆಲ್ಲ ವಿಷಯಗಳು !
ವನ್ದನೆಗಳು ಸುಧೀಮ್ದ್ರ ರವರಿಗೆ
In reply to ಚುಟುಕು ಕುಟುಕು ಚೆನ್ನಾಗಿದೆ , by partha1059
ಧನ್ಯವಾದಗಳು ಪಾರ್ಥರೆ :) ಕಲ್ಕಿ
ಧನ್ಯವಾದಗಳು ಪಾರ್ಥರೆ :) ಕಲ್ಕಿ ಅವತಾರದ ಬಗ್ಗೆ ಮಾಹಿತಿ ಕಲೆ ಹಾಕಿ ಒ0ದು ಲೇಖನ ಬರೀಬೇಕು ಅ0ತ ಅ0ದುಕೊ0ಡಿದ್ದೆನೆ. ಕಾಲ ಕೂಡಿ ಬರಬೇಕು.
ನಿಮ್ಮ ಶೀರ್ಷಿಕೆ ನನಗೆ
ನಿಮ್ಮ ಶೀರ್ಷಿಕೆ ನನಗೆ ಒಪ್ಪಿಗೆಯಾಯಿತು. ಕಲ್ಪನೆ ಆದ್ದರಿಂದ ವಾಸ್ತವವಲ್ಲ! ಮುಂದೆ ಏಕಾದಶಾವತಾರದ ಕಲ್ಪನೆ ಬರುವ ದಿನಗಳು ದೂರವಿಲ್ಲ. ಆ ಸ್ಥಾನಕ್ಕೆ ಬಲು ದೊಡ್ಡ ಪೈಪೋಟಿಯೇ ಇದೆ!
ಪಾರ್ಥ ಸರ್,
ಪಾರ್ಥ ಸರ್,
ಯಾರಾದರೂ ಒಳ್ಳೆಯ ವಿಚಾರವನ್ನು ಕೊಟ್ಟರೆ ಅವರನ್ನು ದೇವರ ಸ್ಥಾನದಲ್ಲಿ ಕೂರಿಸುವುದು ನಮ್ಮ ಭಾರತೀಯ ಸಂಪ್ರದಾಯ. ಪ್ರಾರಂಭದಲ್ಲಿ, ಬುದ್ಧ ಭಗವಾನನ ಬಗ್ಗೆ ವಿರೋಧವಿದ್ದರೂ ಸಹ ಅವನ ವಿಚಾರಗಳನ್ನು ಒಪ್ಪಬಹುದೆಂದೆಣಿಸಿದಾಗ ಅವನಿಗೂ ಅವತಾರದ ಸ್ಥಾನವನ್ನು ಕೊಟ್ಟು ನಮ್ಮ ಹಿರಿಯರು ಗೌರವಿಸಿದ್ದಾರಷ್ಟೇ. (ಇದರ ಬಗ್ಗೆ ಪಂಡಿತ್ ನೆಹರೂರವರ ಜಗತ್ಕಥಾವಲ್ಲರಿಯಲ್ಲಿ ಓದಿದ ನೆನಪು - Glimpses of World History. ಕನ್ನಡಕ್ಕೆ ಇದನ್ನು ಅನುವಾದಿಸಿರುವವರು ಶ್ರೀಯುತ ಸಿದ್ದವ್ವನಹಳ್ಳಿ ಕೃಷ್ಣ ಶರ್ಮ). ಹಾಗಾಗಿ ಕೆಲವು ದೇವಸ್ಥಾನಗಳಲ್ಲಿ ಬಲರಾಮ (ಹಲಾಯುಧದಾರಿ) ಒಂಭತ್ತನೇ ಅವತಾರವಾಗಿದ್ದರೆ ಕೆಲವೊಂದು ದೇವಸ್ಥಾನಗಳಲ್ಲಿ ಬುದ್ಧನ ಕೆತ್ತನೆಗಳನ್ನು ಕಾಣಬಹುದು. ಕಲ್ಕಿಯ ಅವತಾರವಂತೂ ಜಗತ್ತಿನ ಪ್ರಳಯಕಾಲವನ್ನು ಸೂಚಿಸುತ್ತದೆ ಅಂದರೆ ಪ್ರಪಂಚದ ವಿನಾಶವೊದಗುವಾಗ ಉದ್ಭವವಾಗುವ ಅವತಾರವೆಂದು ಕೇಳಿದ್ದೇನೆ. ದಶಾವತಾರದ ಕಲ್ಪನೆಯು ವೈಷ್ಣವ ಧರ್ಮವು ಪ್ರಾಚುರ್ಯಕ್ಕೆ ಬಂದಾಗ ಪ್ರಚಲಿತಗೊಂಡಿರಬೇಕು.
In reply to ಪಾರ್ಥ ಸರ್, by makara
ಭ0ಡ್ರಿರವರೆ ನಿಮ್ಮ ಮಾತು ನಿಜ ,
ಭ0ಡ್ರಿರವರೆ ನಿಮ್ಮ ಮಾತು ನಿಜ , ಆದರೆ ಅದೇಕೊ ಬುದ್ದ ನ ಸಿದ್ದಾ0ಗಳು, ವಿಷ್ಣುವಿನ ಸಿದ್ದಾ0ತಗಳಿಗೆ ಸೇರುವುದಿಲ್ಲ ಅನ್ನಿಸಿತು ಅದಕ್ಕೆ ಹಾಗೆ ಬರೆದೆ. ನಿಮ್ಮ ಮನಸಿಗೆಲ್ಲ ಬೇಸರವಾಗಿದ್ದಲ್ಲಿ ಕ್ಷಮೆ ಇರಲಿ
In reply to ಭ0ಡ್ರಿರವರೆ ನಿಮ್ಮ ಮಾತು ನಿಜ , by partha1059
ಪಾರ್ಥ ಸರ್,
ಪಾರ್ಥ ಸರ್,
ಇದರಲ್ಲಿ ಬೇಜಾರಾಗುವಂಥಹದ್ದೇನಿದೆ. ನಿಮ್ಮ ಅನುಮಾನವನ್ನು ನೀವು ಪ್ರಾಮಾಣಿಕವಾಗಿ ವ್ಯಕ್ತಮಾಡಿದ್ದೀರ. ಇಲ್ಲಿ ಅದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಲು ಎಲ್ಲರೂ ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ನೀವು ಎತ್ತಿದ ಪ್ರಶ್ನೆಯಿಂದ ದಿಗಂಬರ ಬುದ್ಧನ ಅವತಾರದ ಕುರಿತಾದ ಹೊಸ ಮಾಹಿತಿಯನ್ನು ತಿಳಿದಂತಾಯಿತು. ನಿಮ್ಮ ಪ್ರಶ್ನೆಗೆ ಮತ್ತೊಮ್ಮೆ ಧನ್ಯವಾದಗಳು.