ದಾಸ ಸಾಹಿತ್ಯ

ದಾಸ ಸಾಹಿತ್ಯ

ದಾಸ ಸಾಹಿತ್ಯದ ವಿಷಯದಲ್ಲಿ ಕನ್ನಡ ಸಾರಸ್ವತ ಲೋಕ ಬಹಳ ಶ್ರೀಮಂತವಾಗಿದೆ. ಸುಮಾರು ೧೩೦೦೦ ಕ್ಕೂ ಹೆಚ್ಚು ಕೀರ್ತನೆಗಳು, ೩೦೦೦ ಸುಳಾದಿಗಳು, ೫೦೦ ಉಗಾಭೋಗಗಳು ಇತ್ಯಾದಿ ಇದುವರೆಗೆ ದೊರೆತಿರುವ ಅಂಕಿ ಅಂಶಗಳು. ದಾಸಸಾಹಿತ್ಯ.ಆರ್ಗ್ ನಲ್ಲಿ ಇವೆಲ್ಲವನ್ನೂ ಶೇಖರಿಸಲಾಗಿದೆ ಎಂದು ಕೇಳಿದೆ, ಇದೊಂದು ಕರ್ನಾಟಕ ಸರ್ಕಾರದ ಯೋಜನೆ. ಆದರೆ ಆ ತಾಣವನ್ನು ತೆಗೆದು ಓದಲು ಸಾಧ್ಯವಾಗುತ್ತಿಲ್ಲ. ಕೆಲವು ತಂತ್ರಾಂಶ ತೊಂದರೆಗಳಿವೆ ಅನ್ನಿಸುತ್ತೆ. , ಇಷ್ಟೆಲ್ಲಾ ಮಾಡಿದರೂ ಹೀಗೆ ಓದುಗರಿಗೆ ಅನುಕೂಲವಾಗದಿದ್ದರೆ ಏನುಪಯೋಗ?

ಸುಳಾದಿಗಳ ಪುಸ್ತಕವಂತೂ ಮಾರುಕಟ್ಟೆಯಲ್ಲಿ ಒಂದೂ ಲಭ್ಯವಿಲ್ಲ. ಧಾರವಾಡದ ಒಂದು ಸಂಘಟನೆಯವರು ಒಂದು ಹೊತ್ತಿಗೆಯನ್ನು ಕೆಲವು ತಿಂಗಳಹಿಂದೆ ಬಿಡುಗಡೆ ಮಾಡಿದ್ದಾರೆಂದು ಕೇಳಿದೆ. ಅದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಮೇಲೆ ಹೇಳಿದ ಎಲ್ಲ ಸಾಹಿತ್ಯವನ್ನೂ ಒಂದು ಸಿ.ಡಿ ಯಲ್ಲಿ ಅಥವಾ ಒಂದು ಅಂತರ್ಜಾಲತಾಣದಲ್ಲಿ ತರುವ ಪ್ರಯತ್ನ ಅಗತ್ಯವಾಗಿದೆ.

Rating
No votes yet

Comments