ದಿಟತನದಿಂದಿರಲು ದಿಟ್ಟತನ ಬೇಕು

ದಿಟತನದಿಂದಿರಲು ದಿಟ್ಟತನ ಬೇಕು

ನಾನು ಇನ್ ಮೇಲೆ ಸುಳ್ಳು ಹೇಳುವದನ್ನು ಬಿಡಬೇಕೆಂದಿದ್ದೇನೆ. ಇದು ಸುಳ್ಳಲ್ಲ, ನಂಬಿ ಪ್ಲೀಸ್, ಪ್ಲೀಸ್ ಅನ್ನಬೇಕಾಗಿಲ್ಲ, ಯಾಕೆ ಅಂದರೆ ಈ ಸುಳ್ಳಿನಿಂದ ಎಸ್ಟು ತೊಂದರೆ ಅಂಬುದನ್ನು ಮನಗಂಡು, ಈ ಒಂದು ತೀರ್ಮಾನಕ್ ಬಂದೀದಿನಿ. ಸಣ್ಣ-ಪುಟ್ಟ ಸುಳ್ಳೇ ಆದರೂ, ಒಂದು ಸುಳ್ಳನ್ನ ಉಳಿಸಲು ಮತ್ತೊಂದು, ಹಾಗೆ ಮಗದೊಂದು ಅಂತ ಸುಳ್ಳಿನ ರಾಶಿನೇ ಬೆಳೆದು ನಿಲ್ಲುತ್ತೆ.

ಮತ್ತು ಸುಳ್ಳು ಹೇಳುವದು ಹೇಡಿತನದ ರೂಪ ಅಂತಾನೂ ಅನ್ನಿಸ್ತಿದೆ. ನಾವು ಸುಳ್ಳು ಹೇಳಿದವರ ಜೊತೆ ಬಿಚ್ಚು ಮನಸ್ಸಿಂದ ಮಾತಾಡೋಕಾಗಲ್ಲಾ.

ಸುಳ್ಳು ಎಸ್ಟೇ ಚೆಂದವಾಗಿದ್ದರೂ, ಅದು ಸುಳ್ಳು ಅಂತ ತಿಳಿದ ಮೇಲೆ ಕವಡೆ ಕಾಸಿನ ಬೆಲೇನೂ ಇರಲ್ಲಾ.

ಅದಕ್ಕೆ ಸತ್ಯ-ಶಿವ-ಸುಂದರ ಅಂತಾರೆ. ಸತ್ಯದಿಂದ ಕೂಡಿದ ಸೌಂದರ್ಯವನ್ನು ಎಲ್ಲರೂ ಮೆಚ್ಚುತ್ತಾರೆ.

ದಿಟವನ್ನು ಹೇಳೋಕಾಗದೇ ಇರುವ ಹೊತ್ತಲ್ಲಿ, ಸುಮ್ಮನಾಗೋದು ಒಳ್ಳೆಯದೇ ಹೊರತು, ಸುಳ್ಳು ಮಾತ್ರ ಹೇಳಲೇಬಾರದು ಅನಿಸುತ್ತೆ.

Rating
No votes yet

Comments