ದಿನಚರಿ - ೨೩/೧೨/೨೦೦೫

ದಿನಚರಿ - ೨೩/೧೨/೨೦೦೫

ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ.

ಮೊನ್ನೆ ಮೊನ್ನೆ, ನನ್ನ Homepageನ ಡೇಟಬೇಸ್ ಬ್ಯಾಕಪ್ ತೆಗೆಯುವಾಗ [:http://www.hpnadig.net/blog/index.php/archives/2005/12/18/unicode-on-mysql-messed-up-ups-gone-dud/|ಒಂದಷ್ಟು ಹೆಚ್ಚು ಕಡಿಮೆಯಾಗಿ] ಇಡಿಯ ತಾಣದ ಯೂನಿಕೋಡ್ ನಲ್ಲಿರುವ ಮಾಹಿತಿ ಗಬ್ಬೆದ್ದುಹೋಯ್ತು. ಇವತ್ತು ಸರಿಮಾಡೋಣಾಂತ ಕೂತ್ಕೊಂಡ್ರೆ ಯಾವ ಕ್ಯಾರೆಕ್ಟರ್ ಸೆಟ್ ಕನ್ವರ್ಟರ್ ಬಳಸಿದ್ರೂ ಆಗ್ವಲ್ಲದು. ಕೊನೆಗೆ ಗ್ನು ರಿಕೋಡ್ ಎಂಬುದನ್ನ ಬಳಸಿ ನೋಡ್ದೆ, ಅದೂ ಫಲ ಕೊಡ್ಲಿಲ್ಲ.

ಉಸ್ಸಪ್ಪ ಅಂತ ಇತ್ತೀಚೆಗೆ ರೇರ್ ಆಗಿ ಬಳಸುವ ಚಾಟ್ ತಂತ್ರಾಂಶವಾದ [:http://gaim.sf.net|ಗೈಮ್] ತೆರೆದೆ.(ನಾನು ಯಾಹೂ, ಎಮ್ ಎಸ್ ಎನ್ , ಗೂಗಲ್ ಇವೆಲ್ಲ ಕಂಪೆನಿಗಳು ಕೊಡುವ ಐ ಎಮ್ ಕ್ಲೈಂಟುಗಳನ್ನ ಬಳಸೋದಿಲ್ಲ. ಈ ಗೈಮ್ ಅನ್ನೋ ತಂತ್ರಾಂಶ ಇವೆಲ್ಲವನ್ನೂ ತನ್ನಲ್ಲೇ ಲಭ್ಯವಾಗಿಸುತ್ತದೆ... ಮೂರು ನಾಲ್ಕು ಚಾಟ್ ತಂತ್ರಾಂಶಗಳನ್ನು ಉಪಯೋಗಿಸುವ ತಲೆನೋವು ಇರದು). ಮೈಸೂರಿನ ಸ್ನೇಹಿತರೊಬ್ಬರಿಗೆ ಎಕ್ಕುಟ್ ಹೋಗಿರೋ ಡೇಟಬೇಸ್ ತೋರಿಸಿ ಸಹಾಯ ಮಾಡಲು ಕೇಳಿದೆ. ಅವರು sql ಪಡೆದುಕೊಂಡು ಪ್ರಯತ್ನಿಸುತ್ತೇನೆಂದರು. ಸ್ವಲ್ಪ ತಲೆ ಭಾರ ಕಡಿಮೆಯಾಯ್ತು. ಗೂಗಲ್ ಟಾಲ್ಕ್ ಗೈಮ್ ನಲ್ಲಿ ಸರಿಯಾಗಿ ಬರುತ್ತಿರಲಿಲ್ಲ. ಹಾಳಾದ್ದು SSL ಸಪೋರ್ಟ್ ಇಲ್ಲ ಅಂತ ಗೊಣಗ್ತಿತ್ತು. ಒಮ್ಮೆ gnutls ಪ್ಯಾಕೇಜ್ ಡೌನ್ಲೋಡ್ ಮಾಡಿಕೊಂಡು ಮತ್ತೊಮ್ಮೆ cvsನಿಂದ ಚೆಕ್ ಔಟ್ ಮಾಡಿದ ಗೈಮ್ compile ಮಾಡ್ದೆ. ಇದರ ಮೇಲೆ ಇನ್ನೊಂದಷ್ಟು tweaking ala ಸರ್ಕಸ್ ಮಾಡಿದ ಮೇಲೆ ಸರಿಹೋಯ್ತು. ಇಷ್ಟು ಮಾಡಿದ್ದು ಎಷ್ಟು co-incidental ಆಯ್ತು ಎಂದರೆ ಗೂಗಲ್ ಟಾಲ್ಕ್ ನಲ್ಲಿ ಲಾಗಿನ್ ಆಗುತ್ತಿದ್ದಂತೆಯೇ ಮೀಡಿಯವಿಕಿ ಬೋರ್ಡಿನ ಮೆಂಬರುಗಳು ಆನ್ಲೈನ್ ಇದ್ದರು. (ಜಾಬ್ಬರ್ ಸರಿಹೋಗ್ದಿದ್ರೆ ಎಷ್ಟು ಒಳ್ಳೇ oppurtunity ಕಳ್ಕೋತಿದ್ದೆ!) ಸರಿ, ಅಕ್ಟೋಬರಿನಲ್ಲಿ ನೆನೆಗುದಿಗೆ ಬಿದ್ದ ನನ್ನ 'ವಿಕಿಪೀಡಿಯ ಮೀಟ್' ಪ್ರಸ್ತಾವನೆ ಗಮನಕ್ಕೆ ತಂದೆ. "ಕನ್ನಡ ವಿಕಿಪೀಡಿಯ ಆಗಸ್ಟ್ ತಿಂಗಳು ೧೦೦೦ ಲೇಖನಗಳ ಗಡಿ ದಾಟಿತು. ಇದನ್ನಾಚರಿಸಲು ಹಾಗೂ ಕನ್ನಡವನ್ನ ಯೂನಿಕೋಡ್ ಮೂಲಕ ಬಳಸೋದು ಹೇಗೆ ಎಂಬುದನ್ನು ಹೆಚ್ಚು ಜನರಿಗೆ ತಿಳಿಸಲು ಒಂದು ಇಂಟರಾಕ್ಟಿವ್ ಕಾನ್ಫರೆನ್ಸ್ ತರಹ ಮಾಡೋಣ"ವೆಂದು ಪ್ಲಾನ್ ಇದ್ದದ್ದು.
'ಏಕೆ ಮರೆತರೋ ಗೊತ್ತಿಲ್ಲ, ಖಂಡಿತ ಬೆಂಬಲ ಕೊಡ್ತೀವಿ' ಎಂದರು. ಬಹಳ ಖುಷಿಯಾಯ್ತು. ಸ್ವಲ್ಪ ಹೊತ್ತಿನ ನಂತರ 'positive' ಆಗಿ ಇ-ಮೇಯ್ಲ್ ಕೂಡ ಬಂತು.
ಸೋ, ರೆಡಿಯಾಗಿ ;) ಸಾಧ್ಯವಾದಷ್ಟು ಬೇಗ (ಇನ್ನುಳಿದ ಎಲ್ಲ ಫಾರ್ಮಾಲಿಟೀಸ್ ಸ್ಮೂತ್ ಆಗಿ ಮುಂದುವರೆದ್ರೆ) ವಿಕಿಪೀಡಿಯ ಮೀಟ್ ನಡೆಸುವ. ಹೆಚ್ಚು ಹೆಚ್ಚು ಜನರಿಗೆ ಯೂನಿಕೋಡ್ ಬಗ್ಗೆ ತಿಳಿಸಿ ಕನ್ನಡವನ್ನು ಬಳಸುವಂತೆ ಮಾಡೋಣ :)
(ನೀವ್ಯಾರಾದ್ರೂ ಈ ಈವೆಂಟನ್ನ ಜೊತೆಗೆ ಸ್ಪಾನ್ಸರ್ ಮಾಡ್ತಿರೇನು? ಹಾಗೇನಾದ್ರೂ ಸ್ಪಾನ್ಸರ್ ಮಾಡೋ ಉತ್ಸಾಹ [:feedback|ಇದ್ರೆ ಸಂಪರ್ಕಿಸಿ] - ಕೃತಜ್ಞತಾಪೂರ್ವಕವಾಗಿ ನಿಮ್ಮ ಕಂಪೆನಿಯ ಬ್ಯಾನರ್ ಕೂಡ ಸೇರಿಸುತ್ತೇವೆ)

Rating
No votes yet