ದಿಲೀಪ್ ಕುಮಾರ್ ಲತಾ ದೀದಿಯವರ ಜತೆ ಹಾಡಿದಾಗ' !
ವರ್ಷ ೧೯೫೦ ರ ಬೊಂಬಾಯಿನ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದ ನಟ ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ 'ಲೋಕಲ್ ಟ್ರೇನ್' ನಲ್ಲೆ ಪ್ರಯಾಣ ಮಾಡುತ್ತಿದ್ದರು. ಚಿತ್ರ ನಿರ್ಮಾಪಕ ಅನಿಲ್ ಬಿಸ್ವಾಸ್ ಅವರ ಸಹಾಯಕ, ಲತಾ ಮಂಗೇಶ್ಕರ್ (ಪಶ್ಚಿಮ ರೈಲ್ವೆ) ಲೋಕಲ್ ರೈಲಿನಲ್ಲಿ ಕುಳಿತು ಮಲಾಡ್ ನಲ್ಲಿದ್ದ ಬಾಂಬೆ ಟಾಕೀಸ್ ಗೆ ಹೋಗುತ್ತಿದ್ದರು. ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ದಿಲೀಪ್ ಕುಮಾರ್ ಡಬ್ಬಿಯ ಒಳಗೆ ಹತ್ತಿದರು. ಅವರು ಅನಿಲ್ ಬಿಸ್ವಾಸ್ ರ ಹತ್ತಿರದ ಸೀಟ್ ನಲ್ಲಿ ಬಂದು ಕುಳಿತು, ಯಾರು ಈ ಹುಡುಗಿ, ? ಎಂದು ವಿಚಾರಿಸಿದಾಗ, ಅನಿಲ್ ಬಿಸ್ವಾಸ್ 'ಮಹಾರಾಷ್ಟ್ರಿಯನ್ ಹುಡುಗಿ. ಒಳ್ಳೆ ಹಾಡ್ತಾಳೆ. ಮುಂದೊಂದು ದಿನ ದೊಡ್ಡ ಹೆಸರ್ಮಾಡ್ತಾಳೆ '; ಎಂದಾಗ ದಿಲೀಪ್ 'ಹೌದಾ ಅದಕ್ಕೇ ದಾಲ್ ಭಾತ್ ಖುಷ್ಬೂ ಬರ್ತಿದೆ ನನ್ನ ಮೂಗಿಗೆ 'ಎಂದರು. ನಿಜಹೇಳಬೇಕೆಂದರೆ ಅವರ ಮಾತಿನ ಅರ್ಥ, ಉರ್ದು ಭಾಷೆಯಲ್ಲಿ ತಲಫುಲ್ ಎನ್ನುವುದು ಅವರ ಮಾತಿನ ಮೂಲಾರ್ಥ. ಉರ್ದು ಜ್ಞಾನ ವಿಲ್ಲಾ ಎಂದು ಹೇಳಿದರು. ಇದರಿಂದ ಲತಾಮಂಗೇಶ್ಕರ್ ಗೆ ತನ್ನ ಕೀಳರಿಮೆಯ ಅರ್ಥವಾಯಿತು ಮನೆಗೆ ಹೋದೊಡನೆಯೇ ತನಗೆ ಪರಿಚಯವಿದ್ದ ಮ್ಯೂಸಿಕ್ ಡೈರೆಕ್ಟರ್ ಮೊಹಮ್ಮದ್ ಶಫಿಯನ್ನು ಕರೆದು, ಶಾಸ್ತ್ರೀಯ ಸಂಗೀತಾಭ್ಯಾಸ ತಮಗೆ ಮಾಡಬೇಕಿದೆ ಯಾರಾದರೂ 'ಉರ್ದು ಭಾಷೆ ಗೊತ್ತಿರುವ ಒಬ್ಬ ಸಮರ್ಥ ಟ್ಯೂಟರ್' ನ್ನು ಕರೆತರಲು ಬೇಡಿದರು. ಮೊಹಮ್ಮದ ಶಫಿ, ಸಿನಿಮಾ ರಂಗದ ದಿಗ್ಗಜ ಸಂಗೀತಕಾರ ನೌಶಾದ್ ರವರ ಸಹಾಯಕನಾಗಿ ೧೪ ವರ್ಷ ದುಡಿದಿದ್ದರು. ಸ್ವತಃ, 'ಹಲ್ ಚಲ್', 'ಬಾಜೂ ಬಂದ್' ಮೊದಲಾದ ಚಿತ್ರಗಳಿಗೆ ಸಂಗೀತವನ್ನೂ ಕೊಟ್ಟು ಹೆಸರುಮಾಡಿದ್ದರು. ಚಿತ್ರದಲ್ಲಿ ಲತಾದೀದಿ ಸಹಿತ ಹಾಡಿದ್ದರು. ಶಫಿಯವರು ಒಬ್ಬ ಮೌಲಾನಾರನ್ನು ಕರೆದುಕೊಂಡು ಬಂದು ಲತಾ ದೀದಿಗೆ ಪರಿಚಯಿಸಿ ಉರ್ದು ಕಲಿಸಲು ಕೋರಿದರು. ಹೆಸರಾಂತ ಸಂಗೀತ ನಿರ್ದೇಶಕ ಹೃಶೀಕೇಶ ಮುಖರ್ಜಿಯವರಿಗೆ ಲತಾ ದಿಲೀಪ್ ಒಟ್ಟಿಗೆ ಒಂದು ಹಾಡು ಹಾಡಿಸಲು ಇಚ್ಛೆ ಇತ್ತು. ೧೯೫೭ ರಲ್ಲಿ ರಿಲೀಸ್ ಆದ, ತಮ್ಮ ಮೊದಲ ಚಿತ್ರ'ಮುಸಾಫಿರ್' ನಲ್ಲಿ ಸಂಗೀತಕಾರ, ಸಲೀಲ್ ಚೌಧರಿಯವರನ್ನು ಆರಿಸಿದರು.
ದಿಲೀಪ್ ಕುಮಾರ್, ಲತಾಮಂಗೇಶ್ಕರ್ ಜೋಡಿ ಚೆನ್ನಾಗಿ ಹಾಡಬೇಕು ಒಬ್ಬ ಕುಶಲ ಸಂಗೀತಕಾರನ ತರಹವೆಂದು ಕನಸುಕಂಡಿದ್ದರು. ಅದಕ್ಕಾಗಿ ಶ್ರಮವಹಿಸಿ ೩ ತಿಂಗಳು ರಿಯಾಜ್ ಮಾಡಿದರು. ಹಾಡಿನ ಧುನ್ ಈ ರೀತಿಯಿತ್ತು. ಲಾಗಿ ನಾಹೀ ಚುಟು ರಾಮ, ಚಾಹೀ ಜಿಯಾ ಜಾಯ್, ಜತೆ ಸ್ವಲ್ಪ ಹೊಂದಿಸಿಕೊಂಡು ಹಾಡಲು ದಿಲೀಪ್ ಕುಮಾರ್ ಎಂದೂ ಸಾರ್ವಜನಿಕವಾಗಿ ಹಾಡಿ ಗೊತ್ತಿಲ್ಲದವರು. ಮನೆಯಲ್ಲಿ ಒಬ್ಬರೇ ಇದ್ದಾಗ ಬಾತ್ ರೂಮ್ ನಲ್ಲಿ ಹಾಡುತ್ತಿದ್ದರು ಅಷ್ಟೇ. ಅವರು ಲತಾ ದೀದಿ ಯವರಿಗೆ 'ಜರ ಸಮ್ಝುನ್ ಗ್ಯಾ' 'ನಿಮ್ಮ ಸರಿಸಮ ಹಾಡಲು ನನಗೆ ಬರಲ್ಲವೆನ್ನುವುದು ನನಗೆ ತಿಳಿದಿದೆ ; ಆದರೆ ಅದು ಬೇರೆಯವರಿಗೆ ಗೊತ್ತಾಗದ ಹಾಗೆ ಕಾಳಜಿ ವಹಿಸಿ ಹಾಡುವೆರೆಂದು ಎಣಿಸುತ್ತೇನೆ, ಇದು ನಿಮಗೆ ಅರ್ಥವಾಯಿತೆಂದು ನಂಬುತ್ತೇನೆ' ; ಎಂದು ಅವರು ಲತಾ ದೀದಿಯವರ ಮುಖನೋಡಿ ಬಿನ್ನವಿಸಿಕೊಂಡಿದ್ದರು. ರೆಕಾರ್ಡ್ ಅದನಂತರ ಅದನ್ನು ಕೇಳಿಸಿಕೊಂಡ ದಿಲೀಪ್ ಕುಮಾರ್ ಬಹಳ ಸಿಟ್ಟಾದರು, ತಮ್ಮ ಜೋಡಿ ತಮ್ಮಂತೆ ಸಾಮಾನ್ಯವಾಗಿ ಹಾಡಲು ಪ್ರಯತ್ನಿಸದೆ, ಖ್ಯಾತ ಗಾಯಕಿ ಲತಾಮಂಗೇಶ್ಕರ್ ತರಹ ಹಾಡಿ, ಲತಾ ಮಂಗೇಶ್ಕರ್ ಮುಂದೆ ತಾವೇನೂ ಸಾಟಿಯೇ ಅಲ್ಲವೆನ್ನುವ ತರಹ ಅಭಿಪ್ರಾಯ ಕೊಟ್ಟು ತಮಗೆ ಅವಮಾನಮಾಡಿದರೆಂದು ಬೇಸರಪಟ್ಟರು. ಮತ್ತೊಮ್ಮೆ ರಿಕಾರ್ಡ್ ಮಾಡಲು ಬಿನ್ನವಿಸಿದಾಗ ಹೃಶೀಕೇಶ್ ಮುಖರ್ಜಿ, 'ಚೆನ್ನಾಗಿಯೇ ಇದೆಯಲ್ಲಾ ಮತ್ತೇಕೆ ಪುನಃ ರೆಕಾರ್ಡ್ ಮಾಡಬೇಕು' ? ಎಂದುಹೇಳಿದಾಗ, ದಿಲೀಪ್ ಕುಮಾರರಿಗೆ ಕೋಪಬಂದು, ಲತಾದೀದಿಯವರ ಜತೆ ೧೩ ವರ್ಷ ಮಾತು ಬಿಟ್ಟಿದ್ದರು. ಈ ಸನ್ನಿವೇಶ ಲತಾ ಮಂಗೇಶ್ಕರ್ ರಿಗೂ ಬಹಳ ಬೇಸರತಂದಿತ್ತು. ಮುಂದೆ ಡಿಸೆಂಬರ್ ೨೦೧೪ ರಲ್ಲಿ ಇಬ್ಬರೂ ಅಂತಿಮವಾಗಿ ದಿಲೀಪ್ ಕುಮಾರ್ ರವರ ಪಾಲಿ ಹಿಲ್ ನ ಬಂಗಲೆಯಲ್ಲಿ ಭೆಟ್ಟಿಯಾದರು. ಆ ಸಮಯದಲ್ಲಿ ದಿಲೀಪ್ ಕುಮಾರ್ ಯಾರ ಜತೆಗೂ ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಹಾಗಾಗಿ, ಅವರನ್ನು ಖಂಡಿತ ಗುರುತುಹಿಡಿಯುವುದು ಕಷ್ಟವೆಂದು ತಿಳಿದಿದ್ದರೂ, 'ಲಾಗೇ ನಹೀ ಛೂಟೆ' ಎಂದು ಹೇಳಿದಾಗ, ದಿಲೀಪ್ ಕುಮಾರ್ ರಿಗೆ ಥಟ್ಟನೆ ನೆನಪಾಗಿ, 'ಚಾಹೇ ಚಲೇ ಜಾಯ್' ಎಂದು ಸೇರಿಸಿದರು. ಅವರ ಮುಖದಲ್ಲಿ ಮಂದಹಾಸ ಮಿನುಗಿತು. ಬಹಳ ಕಷ್ಟದಿಂದ ದಿಂಬುಗಳಿಂದ ತುಂಬಿದ್ದ ಹಾಸಿಗೆಯಿಂದ ಮೇಲೆದ್ದು ಕುಳಿತು ಲತಾ ಪಕ್ಕದಲ್ಲಿ ಬಂದು ಕುಳಿತರು. ಚಾಯ್ ಪಾನಿ ನಾಸ್ತಾ ಮಾಡಿದ ಬಳಿಕ ಲತಾ ದೀದಿಯವರು ತಮ್ಮ ದಿಲೀಪ್ ಭಯ್ಯಾರವರಿಗೆ ಮಾಲ್ ಪೊವ ತಿನ್ನಿಸಿದರು. ಹಳೆಯ ದಿನಗಳ ನೆನಪುಗಳನ್ನು ಹಂಚಿಕೊಳ್ಳುತ್ತಾ ಜೊತೆಯಲ್ಲಿ ಇಬ್ಬರೂ ಬಹಳ ಸಂತೋಷಪಟ್ಟರು.
ಸೌಜನ್ಯತೆ : -ಮುಂಬಯಿ ಸಿನಿಮಾ ಸಂಬಂಧಿಸಿದ ಕಥೆಗಳು , ರಾಹುಲ್ ವಿತ್ ೭೦ ಎಂ. ಎಂ. ವೀಡಿಯೋಸ್ !
Rating