ದೀಪಾವಳಿಯ ಶುಭಾಶಯಗಳು
ಸಡಗರ ಸಂಭ್ರಮದ ಹಬ್ಬಹರಿಗಳೆಲ್ಲ ಕಣ್ಮರೆಯಾಗುತಿವೆ
ತೋರಿಕೆಯ ಆಡಂಬರ ಅಟ್ಟಹಾಸವೆಲ್ಲೆಡೆ ಮೆರೆಯುತಿವೆ
ಸಂಸ್ಕೃತಿಯ ಸೊಗಡ ಕಾಣದ ಆಚಾರ ವಿಜ್ರಮಿಸುತಿವೆ
ಸಂಸ್ಕೃತಿಯ ಸೊಗಡಿನ ಅಭ್ಯಂಜನ ಇತಿಹಾಸದ ಪುಟ ಸೇರಿದೆ
ಅಭ್ಯಜನವ ನೆನಪಿಸುವ ದೀಪಾವಳಿ ಮತ್ತೊಮ್ಮೆ ಬರುತಲಿದೆ
ಸಂತಸವನೀವ ಸಹಕಾರ ಸಹಬಾಳ್ವೆ ಮೂಲೆಗುಂಪಾಗುತಿವೆ
ಸಂಯಮದ ಸಭ್ಯ ಜೀವನಕೆ ಒಂದಿಷ್ಟೂ ಬೆಲೆಯಿಲ್ಲವಾಗುತಿದೆ
ಬರಲಿರುವ ದೀಪದ ಹಬ್ಬ ಅಂಧಕಾರವ ಕಳೆಯಲಿ
ಸುಖ ಶಾಂತಿ ಸಮೃದ್ಧಿ ಸಂತಸವ ಎಲ್ಲರಿಗೂ ನೀಡಲಿ
ಸಂಭ್ರಮದ ದೀಪಾವಳಿಯಾಗಲಿ
ಪರಮ ಸುಖವ ಎಲ್ಲರಿಗೂ ನೀಡಲಿ
ದಹ್ಯವಾಗಲಿ ಎಲ್ಲಾ ಅವಗುಣ ಎಂದು ಹಾರೈಸುತ್ತಾ
ಸಂಪದ ಬಳಗದವರಿಗೆಲ್ಲಾ ದೀಪಾವಳಿಯ ಶುಭಾಶಯಗಳು
Rating
Comments
ಉ: ದೀಪಾವಳಿಯ ಶುಭಾಶಯಗಳು
In reply to ಉ: ದೀಪಾವಳಿಯ ಶುಭಾಶಯಗಳು by makara
ಉ: ದೀಪಾವಳಿಯ ಶುಭಾಶಯಗಳು