ದುಡ್ಡಿದ್ದರೆ ಪ್ರೇಮದ ಘಮ...!

ದುಡ್ಡಿದ್ದರೆ ಪ್ರೇಮದ ಘಮ...!

ಪ್ರೀತಿ...
    ಮನಗಳ ಬೆಸುಗೆ, ನಿಯಮಗಳ ಬಂಧವಿಲ್ಲದ, ಅಳೆಯಲು ಅಳತೆಗೋಲಿಲ್ಲದ ಭಾವ ಲೋಕ. ಕ್ಷಮೆಯಿಂದ ದಂಡಿಸುವ ಜ್ಞಾನದ ಮುನ್ಸೂಚಿ. ಸ್ನೇಹ, ಕರುಣೆ, ಮರುಕ, ದಯೆ, ವಿಶ್ವಾಸ, ಸಹಾನುಭೂತಿ, ಸಂತಸಗಳ ಕಾಮನಬಿಲ್ಲು. ಈ ವರ್ಣಮಯ  ಲೋಕಕ್ಕೆ ಹೊಸ ಭಾಷೆ ಬರೆದು, ಪ್ರೇಮಲೋಕ ಸೃಷ್ಟಿಸಲು ಜನ್ಮತಳೆದಿರುವುದೇ ವ್ಯಾಲನ್ಟೈನ್ಸ್ ಡೇ.
    ಗಿಫ್ಟು, ಗ್ರೀಟಿಂಗ್ಸ್, ರೆಡ್ ರೋಸ್ ನೀಡಿ ಇಷ್ಟಪಟ್ಟವರನ್ನು ಒಲಿಸಿಕೊಳ್ಳಲು ಒಂದೆಡೆ ಈ ವ್ಯಾಲನ್ಟೈನ್ಸ್ ಡೇ ಸೇತುವೆಯಾಗಿದ್ದರೆ, ಮತ್ತೊಂದೆಡೆ ಹೋಟೆಲ್ಲು, ಪಾಕರ್ು, ಸಿನಿಮಾ ಹಾಗೂ ಪಾಟರ್ಿಗಳತ್ತ ಹೆಜ್ಜೆ ಹಾಕಿ ಡೇಟಿಂಗ್ ಮಾಡಿ ಹೃದಯ ದಾಹ ಇಂಗಿಸಿಕೊಂಡು ಪ್ರಣಯಕ್ಕೆ ವಿನೂತನ ಪೀಠಿಕೆ ಬರೆಯುವವರಿಗೆ ವೇದಿಕೆಯಾಗಿದೆ. ಪಾಶ್ಚಿಮಾತ್ಯ ಆಚರಣೆಯೆ ಆದರೂ ಭಾರತದಲ್ಲೂ ಪ್ರೇಮಿಗಳ ದಿನಕ್ಕೆ ಭಾರಿ ಮನ್ನಣೆ ದೊರೆತಿದೆ.
ರೋಮಿನಿಂದ ಬಂತು: ಪ್ರಣಯ ಪಕ್ಷಿಗಳ ಈ ದಿನಕ್ಕೆ ನೂರಾರು ವಸಂತದ ಐತಿಹ್ಯವಿದೆ. ಪುರಾತನ ರೋಮ್ನ ಯುವಕರು ಸೇನೆಯಲ್ಲಿ ಫುಲ್ಟೈಮ್ ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಲ್ಲಿಯ ದೊರೆ ಕ್ಲಾಡಿಯಸ್ ವಿವಾಹ ನಿರ್ಬಂಧ ಹೇರಿದ್ದ. ಈ ಆಜ್ಞೆಯನ್ನು ವಿರೋಧಿಸಿ ವ್ಯಾಲನ್ಟೈನ್ ಎಂಬ ಪಾದ್ರಿ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದರು. ಈ ವಿಷಯ ತಿಳಿದು ಕೆರಳಿದ ದೊರೆ ಪಾದ್ರಿಯನ್ನು ಫೆಬ್ರವರಿ 14 (ಕ್ರಿ.ಶ.269)ರಂದು ಕೊಲೆ ಮಾಡಿಸಿದ. ಅಂದಿನಿಂದ ಪ್ರತಿ ವರ್ಷ ಪ್ರೇಮಿಗಳು ಈ ಪಾದ್ರಿಯ ಸ್ಮರಣಾರ್ಥ ಪ್ರೇಮಿಗಳ ದಿನ ಆಚರಿಸಲು ಪ್ರಾರಂಭಿಸಿದರು. ಇದುವೇ ಈಗ ಪ್ರೇಮಿಗಳ ದಿ
ನವಾಗಿ ಪರಿವರ್ತನೆ ಆಗಿದೆ.
    ಜಗತ್ತಿನ ನಾನಾ ಕಡೆಯಲ್ಲಿ ಇದನ್ನು ವಿವಿಧ ನಮೂನೆಯಲ್ಲಿ ಆಚರಿಸಲಾಗುತ್ತಿದೆ. ಸ್ವೀಡನ್ನಲ್ಲಿ ಹೃದಯಗಳ ದಿನ, ಫೀನ್ಲ್ಯಾಂಡಿನಲ್ಲಿ ಗೆಳೆಯರ ದಿನ, ಏಷ್ಯಾದ ಕೆಲವೆಡೆ ಚಾಕಲೇಟು ದಿನ ಎಂದೂ ಕರೆಯಲಾಗುತ್ತಿದೆ. ಕೆಲ ದೇಶಗಳು ಈ ದಿನದಂದು ಸಾರ್ವಜನಿಕ ರಜೆಯನ್ನೂ ಘೋಷಿಸುತ್ತವೆ. ಅದೇನೆ ಇರಲಿ, ಈ ದಿನ ಮಾತ್ರ ಪ್ರೇಮಿಗಳ ಉತ್ಸುಕತೆ, ಭಾವನೆ ಹಾಗೂ ಕನಸುಗಳಿಗೆ ಜೀವ ತುಂಬುವ ದಿನವಾಗಿದೆ. ಆದರೆ, ಇದರಿಂದ ಲಾಭ ಪಡೆಯುತ್ತಿರುವವರು ಮಾತ್ರ ವ್ಯಾಪಾರಿಗಳು.
ಗಿಫ್ಟು, ಗ್ರೀಟಿಂಗ್ಸ್ ದರ್ಬಾರು: ವ್ಯಾಲನ್ಟೈನ್ಸ್ ದಿನದ ಗಮ್ಮತ್ತು ಇರುವುದು ಗಿಫ್ಟು, ಗ್ರೀಟಿಂಗ್ ಕಾಡರ್ುಗಳ ವಿನಿಮಯದಲ್ಲಿ. ಪ್ರತಿ ವರ್ಷ ಸುಮಾರು ಒಂದು ಬಿಲಿಯನ್ ಕಾಡರ್ುಗಳು ಈ ದಿನದಂದು ಬಿಕರಿ ಆಗುತ್ತಿವೆ. ಅಂದಹಾಗೆ, ಈ ಗ್ರೀಟಿಂಗ್ ಕಲ್ಚರ್ ಹುಟ್ಟಿಕೊಂಡಿದ್ದು ಬ್ರಿಟನ್ನಲ್ಲಿ. 1797ರಲ್ಲಿ ಇಲ್ಲಿನ ಮುದ್ರಕನೋರ್ವ ಲವರ್ಸ್ ಡೇಗೆ ವಿಶೇಷ ಪತ್ರಗಳನ್ನು ಪ್ರಿಂಟ್ ಮಾಡಿ ಮಾರಾಟ ಮಾಡಿದ್ದ. ಅಂದಿನಿಂದ ಗ್ರೀಟಿಂಗ್ ಇಲ್ಲದ ವ್ಯಾಲನ್ಟೈನ್ ಡೇ ಉಪ್ಪಿಲ್ಲದ ಅಡುಗೆಯಂ
ತೆ ಆಯಿತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಾಲ್ಮಾಕರ್್, ಆಚರ್ೀವ್ಸ್ನಂತಹ ಕಂಪೆನಿಗಳು ಪ್ರೇಮಿಗಳಿಗಾಗಿಯೇ ಸಾವಿರಾರು ಡಿಸೈನ್ನ ಗ್ರೀಟಿಂಗ್ ಕಾಡರ್ುಗಳನ್ನು ರೂಪಿಸಿವೆ.
    ಭಾರತದಲ್ಲಿಯೂ ಗ್ರೀಟಿಂಗ್ ಪ್ರವಾಹ ಸೃಷ್ಟಿಯಾಗಿದೆ. ಹಾಗಾಗಿಯೇ ಪ್ರತಿ ವರ್ಷ ಈ ದಿನದಂದು ಗ್ರೀಟಿಂಗ್ಸ್ ಉದ್ಯಮ ಶೇ.25-30ರಷ್ಟು ಅಧಿಕ ಲಾಭಗಳಿಸುತ್ತಿವೆ. ಕಳೆದ ವರ್ಷ ಸುಮಾರು 65 ಕೋಟಿ ರುಪಾಯಿ ಮೌಲ್ಯದ ಕಾಡರ್ುಗಳು ಸೇಲ್ ಆಗಿದ್ದವು ಎಂದು ಮಾರುಕಟ್ಟೆ ವಿಶ್ಲೇಷಣೆಗಳು ಹೇಳುತ್ತಿವೆ. ಈ ವರ್ಷ ಇದು ಇನ್ನಷ್ಟು ಏರಿಕೆಯಾಗಲಿದೆ. ಕೆಳೆದ ಕೆಲ ವರ್ಷದಿಂದ ಗೇ ಕಾಡರ್ುಗಳ ಮಾರಾಟವೂ ಹೆಚ್ಚಾಗಿದೆ. ಹೀಗಾಗಿಯೇ ಗ್ರೀಟಿಂಗ್ ಕಂಪೆನಿಗಳು 5-6 ಬಗೆಯ ವಿಶೇಷ ಗೇ ವ್ಯಾಲನ್ಟೈನ್ಸ್ ಕಾಡರ್ುಗಳನ್ನೂ ರೂಪಿಸಿವೆ. ಇದರ ಜತೆ ಗಿಫ್ಟುಗಳ ಕಲರವಕ್ಕೇನು ಕಡಿಮೆಯಿಲ್ಲ. ಪ್ರೇಮಿಗಳ ದಿನದಂದು ಟೆಡ್ಡಿಬೇರ್, ಬಗೆ ಬಗೆಯ ಚಕಲೇಟುಗಳು, ಸುಗಂಧ ದ್ರವ್ಯ, ಹೃದಯಾಕಾರದ ವಜ್ರ ಹಾಗೂ ಚಿನ್ನದ ಪೆಂಡೆಂಟ್, ಆಭರಣಗಳು ಹಾಗೂ ಬಟ್ಟೆಗಳನ್ನೇ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಹಚ್ಚಾಗಿ ಗಿಫ್ಟ್ ಮಾಡುತ್ತಾರೆ.
ರೆಡ್ರೋಸ್ ಪರ್ವ: ಪ್ರೀತಿಯ ಸಂಕೇತ ಆಗಿರುವ ಕೆಂಗುಲಾಬಿಗೆ ಪ್ರೇಮಿಗಳ ದಿನದಂದು ಭಾರಿ ಡಿಮಾಂಡ್ ಇರುತ್ತದೆ. ಗಿಫ್ಟು, ಗ್ರೀಟಿಂಗ್ಸ್ಗೆ ಇ
ರುವುದಕ್ಕಿಂತಲೂ ಹೆಚ್ಚಿನ ಗಮ್ಮತ್ತು ರೆಡ್ ರೋಸಿಗೆ ಇದೆ. ಈ ಟ್ರಂಡ್ ಪ್ರಾರಂಭ ಮಾಡಿದ್ದು ಅಮೆರಿಕಾದ ಆಭರಣ ಕಂಪೆನಿ. 1980ರಲ್ಲಿ ಕೆಂಗುಲಾಬಿ ಜತೆ ಆಭರಣವನ್ನು ಉಡುಗೊರೆಯಾಗಿ ನೀಡುವುದ ಶುದ್ಧ ಪ್ರೇಮದ ಸಂಕೇತ ಎಂದು ಆ ಕಂಪೆನಿ ಬಿಂಬಿಸಿತು. ಸಿರಿವಂತರು ಆಭರಣದೊಂದಿಗೆ ಕೆಂಪು ಗುಲಾಬಿ ನೀಡಿ ತಮ್ಮ ಪ್ರೇಮ ಪರಿಶುದ್ಧ ಎಂದುಕೊಂಡರೇ, ಮಧ್ಯಮ ಹಾಗೂ ಕೆಳವರ್ಗದ ಪ್ರೇಮಿಗಳು ಕೇವಲ ಕೆಂಗುಲಾಬಿ ನೀಡಿ ಪ್ರೇಮ ಅಜರಾಮರಗೊಳಿಸುವ ಪ್ರಯತ್ನ ಮಾಡಿದರು. ಇದರಿಂದಾಗಿ ಪ್ರೇಮಿಗಳು ಗುಲಾಬಿಗೆ ಪವಿತ್ರ ಸ್ಥಾನ ಕೊಡಲಾರಂಭಿಸಿದರು.
    ಈ ಸಂಪ್ರದಾಯ ಫೆ.4ರಂದು ಭಾರತದ ಹೂವು ಮಾರುಕಟ್ಟೆಯಲ್ಲಿ 5-6 ಮಿಲಿಯನ್ ಡಾಲರ್ ವಹಿವಾಟಿಗೆ ಕಾರಣವಾಗಿದೆ. ಅಂದು ಪ್ರತಿ ಕೆಂಪು ಗುಲಾಬಿಗೆ 20-30 ರುಪಾಯಿ ವರೆಗೂ ಬೆಲೆ ತೆರಬೇಕಾಗುತ್ತದೆ. ಇದಲ್ಲದೆ ಇತರೆ ಹೂವುಗಳ ಬೆಲಯೂ ಗಗನ ಚುಂಬಿಸಿರುತ್ತದೆ. ಹೂಗುಚ್ಛಗಳಿಗೂ ಭಾರಿ ಡಿಮಾಂಡ್ ಇರುತ್ತದೆ.
ಆನಲೈನ್, ಹೋಟೆಲ್ ಲವ್: ವ್ಯಾಲನ್ಟೈನ್ಸ್ ದಿನದಂದು ಪ್ರೇಮಿಗಳ ಅಸಹಾಯಕತೆ ಹಾಗೂ ಉತ್ಸಾಹವನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ಆ
ನ್ಲೈನ್ ಮತ್ತು ಮೊಬೈಲ್ ಕಂಪೆನಿಗಳು ಸ್ಫರ್ಧಗೆ ಬಿದ್ದಂತೆ ವತರ್ಿಸುತ್ತವೆ. ಆನ್ಲೈನ್ ಮೂಲಕ ಗಿಫ್ಟ್ ಕಳುಹಿಸುವ ಪರಿಪಾಠ ಈಗ ಆರಂಭ ಆಗಿದೆ. ಈ ದಿನದ ಒಟ್ಟು ವಹಿವಾಟಿನ ಶೇ.30ರಷ್ಟು ಪಾಲು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಇಲ್ಲಿ ಎರಡು ಪಟ್ಟು ಅಧಿಕ ಬೆಲೆ ತೆತ್ತು ಗಿಫ್ಟ್ ಖರೀದಿಸುವುದು ಪ್ರತಿಷ್ಟೆಯಾಗಿದೆ. ಅಲ್ಲದೆ ದೂರದಲ್ಲಿರುವ ಪ್ರೇಮಿಗೆ ಗಿಫ್ಟ್ ರವಾನಿಸಲೂ ಇದು ಸಹಕಾರಿಯಾಗಿದೆ. ಹೀಗಾಗಿಯೇ ನೂರಾರು ವೆಬ್ಸೈಟ್ಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ. ಎಸ್ಸೆಮ್ಮೆಸ್ಸಿಗೆ ಬೆಲೆ ವಿಧಿಸಿ ಮೊಬೈಲ್ ಕಂಪೆನಿಗಳೂ ಲಾಭ ಗಿಟ್ಟಿಸಿಕೊಳ್ಳುತ್ತಿವೆ.
ಮತ್ತೊಂದೆಡೆ ಹೋಟೆಲ್ಲು, ರೆಸ್ಟೋರೆಂಟು, ಕ್ಲಬ್ಬು, ಪಬ್ಬುಗಳೂ ಪ್ರೇಮಿಗಳಿಗೆ ಭರ್ಜರಿ ಆಫರ್ಗಳನ್ನು ನೀಡುತ್ತಿವೆ. ಪ್ರಮುಖ ನಗರಗಳಲ್ಲಿ
ರೇವ್ ಪಾಟರ್ಿಗಳೂ ನಡೆಯುತ್ತವೆ. ಇಲ್ಲಿಯ ಸೇವೆಗಳು ಎಂದಿಗಿಂತಲೂ ವ್ಯಾಲನ್ಟೈನ್ ದಿನದಂದು ಭಿನ್ನ ಹಾಗೂ ದುಬಾರಿ ಆಗಿರುತ್ತದೆ.
ಲೇಡಿಸ್ಸು ಸ್ವಲ್ಪ ಕಂಜೂಸು: ಪ್ರೇಮಿಗಳ ದಿನ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಆದರೆ ಮಹಿಳೆಯರು ಮಾತ್ರ ಇದರ ಕಪಿಮುಷ್ಠಿಗೆ ಸಿಲುಕಿಲ್ಲ ಎನ್ನಬಹುದು! ತಮ್ಮ ಪ್ರೀತಿಪಾತ್ರರಿಗೆ ಗಿಫ್ಟು, ಗ್ರೀಟಿಂಗ್ಸ್ ಕೊಳ್ಳುವಲ್ಲಿ ಮಹಿಳೆಯರು ತುಸು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ. ಹಿಂದಿನ ವರ್ಷಗಳ ವ್ಯಾಲನ್ಟೈನ್ ಡೇ ವ್ಯಾಪಾರದ ವಿಶ್ಲೇಷಣೆ ಇದನ್ನು ಸಾರುತ್ತದೆ. ಕಳೆದ ವರ್ಷ ಈ ದಿನದ ಪ್ರಯುಕ್ತ ಮಹಿಳೆಯರು ಸರಾಸರಿ 72.28 ಡಾಲರ್ ಖಚರ್ು ಮಾಡಿದ್ದರೆ, ಪುರುಷರು 135.35 ಡಾಲರ್ ವ್ಯಯ ಮಾಡಿದ್ದರು ಎಂದು ಸಮೇಕ್ಷೆಗಳು ತಿಳಿಸುತ್ತಿವೆ. ಮಹಿಳೆಯರ ಈ ಕಂಜೂಸು ಪ್ರವೃತ್ತಿ ವ್ಯಾಪಾರಿಗಳಿಗೆ ಸ್ವಲ್ಪ ಬೇಸರ ತರಿಸಿದೆ.
    ಅದೇನೆ ಇರಲಿ. ವ್ಯಾಲನ್ಟೈನ್ ಪಾದ್ರಿಯ ತ್ಯಾಗ, ನೈಜ ಪ್ರೇಮದ ಭಾವನೆಗಳನ್ನು ವ್ಯಾಪಾರಿ ಮನಸ್ಥಿತಿಗಳು ಮರೆಮಾಚಲು ಹೊರಟಿರುವುದು ದುರದೃಷ್ಟ. ಹೀಗಾಗಿಯೇ ಪ್ರೀತಿ ಕುರುಡು ಎಂಬ ವಾದ ಹುಟ್ಟಿಕೊಂಡಿರಬಹುದು. ಪ್ರೇಮಿಗಳು ಎಚ್ಚರ ವಹಿಸಿದರೆ ಈ ವಾದಗಳಿಗೆಲ್ಲ ಬ್ರೇಕ್ ಹಾಕಿ ನೈಜ ಪ್ರೇಮದ ಸವಿ ಸವಿಯಬಹುದು.

                                                            - ನಿತಿನ್ ಆರ್‌.ಕೈದೊಟ್ಲು

Rating
No votes yet