ದೂರದ ಬೆಟ್ಟ
ದೂರದಲ್ಲೊಂದು ಸುಂದರ ಬೆಟ್ಟ
ಸನಿಹಕ್ಕೆ ಹೋಗಬೇಕೆಂಬ ಹಂಬಲ
ಅಲ್ಲಿ ಏನಿರ ಬಹುದೆಂಬ ಕುತೂಹಲ
ಬರುವಾಗ ದಾರಿ ತಪ್ಪಿದರೆ ಎನ್ನುವ ಭಯ
ಹೋಗಲೋ, ಬೇಡವೋ ಮನಸ್ಸಿನ ತಳಮಳ.
ಒಲ್ಲದ ಮನಸ್ಸಿನಿಂದ ಬೆಟ್ಟ ತಲುಪಿದೆ
ಬರೀ ಗಿಡ, ಗಂಟೆ, ಕಲ್ಲು, ಮುಳ್ಳು
ದೂರದಿಂದ ಸುಂದರವಾಗಿ ಕಂಡಿದ್ದು ಇದೇನಾ?
ಬೆಟ್ಟ ದೂರದಿಂದಲೆ ಚೆನ್ನ.
ಹೌದು ಎನ್ನಿತು ಮನಸು.
ಕೆಲವು ಸ್ನೇಹಿತರು ಹೀಗೆ
ಮಾತಿನಲ್ಲಿ ಸನಿಹತೆ
ಇನ್ನಿಲ್ಲದ ಸ್ನೇಹ ತೋರ್ಪಡಿಕೆ
ಒಳ ಮನಸ್ಸು ಅರಿತಾಗಲೇ
ದೂರದ ಬೆಟ್ಟವ ಸನಿಹ ತಲುಪಿದ ಅನುಭವ.
ಮತ್ತೆ ಕೆಲವರು ಬೈಯ್ಯುವರು
ಎಲ್ಲರೆದರು ತೆಗಳುವರು
ಒಳ ಮನಸ್ಸಿನಲ್ಲಿ ಪ್ರೀತಿ ಇಟ್ಟವರು
ಇವರಲ್ಲವೆ ನಿಜವಾದ ಕಾಳಜಿಯುಳ್ಳವರು
ಇವರ ಸನಿಹ ಮುಳ್ಳೆನಿಸಿದರೂ
ಕರೆದುಕೊಂಡು ಹೋಗುವರು ಉತ್ತಮ ನಡೆಗೆ!
Rating
Comments
ಉ: ದೂರದ ಬೆಟ್ಟ
ಉ: ದೂರದ ಬೆಟ್ಟ
ಉ: ದೂರದ ಬೆಟ್ಟ
In reply to ಉ: ದೂರದ ಬೆಟ್ಟ by asuhegde
ಉ: ದೂರದ ಬೆಟ್ಟ
In reply to ಉ: ದೂರದ ಬೆಟ್ಟ by komal kumar1231
ಉ: ದೂರದ ಬೆಟ್ಟ
ಉ: ದೂರದ ಬೆಟ್ಟ
ಉ: ದೂರದ ಬೆಟ್ಟ
In reply to ಉ: ದೂರದ ಬೆಟ್ಟ by kavinagaraj
ಉ: ದೂರದ ಬೆಟ್ಟ
In reply to ಉ: ದೂರದ ಬೆಟ್ಟ by suresh nadig
ಉ: ದೂರದ ಬೆಟ್ಟ
ಉ: ದೂರದ ಬೆಟ್ಟ