ದೃಷ್ಠಿ ವರ್ಗ ಹೋಮ
ಮಧ್ಯರಾತ್ರಿ ಗೌಡ್ರ ಫೋನ್ ಬಂತೆಂದರೆ ಯಾವುದೋ ಸ್ಮಶಾನದಿಂದಲೇ.
ಕೂಡಲೇ ಗಾಡಿ ಏರಿ ಅಲ್ಲಿ ಹೋದರೆ ಜೋರಾಗಿ ಹೋಮ ನಡೆಯುತಿತ್ತು.
ಅದಕ್ಕೂ ಜೋರಾಗಿತ್ತು ಗೌಡರ ಅಳು.
'ಮುಹೂರ್ತ ಮೀರಿ ಹೋಗುತ್ತಿದೆ.ನೀವು ಹೀಗೆ ಅಳುತ್ತಿದ್ದರೆ ಬೆಂಕಿ ಹೊತ್ತಿಸುವುದು ಹೇಗೆ?'ಎಂದು ಶ್ರೀಶ್ರೀಶ್ರೀ(ಒಟ್ಟು ೨೨ಶ್ರೀ)ಜ್ಯೋತಿಷಿ ಹೇಳುತ್ತಿದ್ದರು.ಓಡಿ ಹೋಗಿ ಗೌಡ್ರಿಗೂ ೨೨ಶ್ರೀಗೂ ಅಡ್ಡಬಿದ್ದೆ.ಗೌಡ್ರು ಅಳು ನಿಲ್ಲಿಸಿದರು.
'ಇವನೇ ಏನ್ರೀ, ಗ ಅಕ್ಷರದಿಂದ ಸುರುವಾಗುವ ಗಮಾರ'ಅಂದರು ೨೨ಶ್ರೀಗಳು.'ಗಮಾರ ಅಲ್ಲ ಸಾರ್,ಗಣೇಶ'ಅಂದೆ.
"ಸರಿ,ಸರಿ,ನೋಡು,ಶನಿ ಗೌಡರ ೮ನೇ ಮನೆಯಲ್ಲಿ ನಿಂತು ೩ನೇ ಮನೆ ಕಡೆ ವಕ್ರವಾಗಿ ನೋಡುತ್ತಿದ್ದಾನೆ.ಅದಕ್ಕೇ ಇಷ್ಟೆಲ್ಲಾ ನಡೆಯಿತು.ಈಗ'ದೃಷ್ಠಿ ವರ್ಗ'ಹೋಮದ ಮೂಲಕ ಶನಿ ದೃಷ್ಠಿಯನ್ನು ನಿನ್ನ ಕಡೆಗೆ ಹಾಯಿಸುತ್ತೇನೆ.ನೀನು ಗೌಡರ ಹಿಂದೆ ನಿಂತು ಈ ದರ್ಬೆಯಿಂದ ಅವರ ಬೆನ್ನನ್ನು ಮುಟ್ಟಿಕೊಂಡಿರು"ಎಂದರು.ಶನಿ ದೃಷ್ಠಿಯನ್ನಾದರೂ ಸಹಿಸಬಹುದು,ಗೌಡ್ರ ವಕ್ರದೃಷ್ಟಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಸುಮ್ಮನೆ ಹಿಂದೆ ಹೋಗಿ ಅವರು ಹೇಳಿದಂತೆ ನಿಂತೆ.
೨೨ಶ್ರೀಗಳು ಯಾಗದ ನಡುನಡುವೆ ಮೊಬೈಲ್ನಲ್ಲಿ ಮಾತನಾಡುವಾಗ ಗೌಡರ ಬಳಿ ಕೇಳಿದೆ'ಸಾರ್,ಮನೆಯಲ್ಲಿ ಹೆಂಡತಿ ಮಕ್ಕಳು ನನ್ನನ್ನೇ ನಂಬಿದ್ದಾರೆ.ಈ ಯಾಗದಿಂದ ನನಗೇನೂ ತೊಂದರೆಯಿಲ್ಲವೇ?'
'ಭಯ ಬೀಳಬೇಡ.ನಿನಗೆ ಉತ್ತಮ ಭವಿಷ್ಯ ಕಾದಿದೆ.'ಎಂದು ಹೇಳಿ ಮೌನವಾದರು.ಹರಕೆಯ ಕುರಿ ನೆನಪಾಗಿ ಕಣ್ಣು ಕತ್ತಲಾಯಿತು.
ಎಚ್ಚರವಾದಾಗ ಗೌಡರ ಮನೆಯಲ್ಲಿದ್ದೆ(ಎಷ್ಟನೆಯ ಮನೆಯೋ?).ಪಕ್ಕದಲ್ಲಿ ಮುಗುಳ್ನಗುತ್ತಾ ಗೌಡರಿದ್ದರು.'ಕರ್ನಾಟಕದ ಮುಖ್ಯಮಂತ್ರಿಗೆ ನಮಸ್ಕಾರ'ಎಂದ್ರು.ತಿರುಗಿ ನೋಡಿದರೆ ಯಡಿಯೂರಪ್ಪನವರು ಎಲ್ಲೂ ಕಾಣಿಸಲಿಲ್ಲ.
'ನೀನೆ ಕಣಪ್ಪಾ, ಮುಖ್ಯಮಂತ್ರಿ'ಎಂದು, ನಾನು ಚೇತರಿಸಿಕೊಳ್ಳುವ ಮೊದಲೇ "ನನಗೀಗ ಅರ್ಜೆಂಟ್ ದೆಹಲಿಗೆ ಹೋಗಬೇಕು.ನಾನು ಹೇಳಿದಂತೆ ಮಾಡು.ಪ್ರಶ್ನೆ ಕೇಳಬೇಡ.ಎಲ್ಲಾ ಪಕ್ಷದವರನ್ನು ಒಪ್ಪಿಸಿಯಾಗಿದೆ.ಇನ್ನು ೮-೧೦ ತಿಂಗಳು ನೀನು ಮುಖ್ಯಮಂತ್ರಿಯಾಗಿರು.ನಿನ್ನನ್ನು ಎಮ್.ಎಲ್.ಏನೋ.,ಎಮ್.ಎಲ್.ಸೀನೋ ಮಾಡುವೆ.ಮುಂದೆ ನನ್ನ ಮಗ ಮುಖ್ಯಮಂತ್ರಿಯಾಗುವವರೆಗೆ ನನ್ನ ನಂಬಿಗಸ್ತ ಒಬ್ಬ ಆ ಪ್ಲೇಸ್ನಲ್ಲಿ ಇರಬೇಕು"ಎಂದು ಮೊಬೈಲ್ ಕಿವಿಗಿಟ್ಟುಕೊಂಡು ಹೊರಟೇಬಿಟ್ಟರು.ಬಿ.ಜೆ.ಪಿ.,ಕಾಂಗೈಯವರು ಒಪ್ಪಿದ್ದಾರಾ ಎಂದು ಕೇಳಲು ಹೊರಟವನು ಗೌಡರ ತಾಕತ್ತಿನ ಅರಿವಾಗಿ ಸುಮ್ಮನಾದೆ.
ಮೆಲ್ಲನೆ ಎದ್ದು ಕನ್ನಡಿಯಲ್ಲಿ ಮುಖ್ಯಮಂತ್ರಿ ಗತ್ತಿನಲ್ಲಿ ನೋಡಿದೆ.ಸಣಕಲ ಕಡ್ಡಿ ಕೌನ್ಸಿಲರ್ ಪಟ್ಟಕ್ಕೂ ಯೋಗ್ಯನಲ್ಲ ಎಂದು ಒಳ ಮನಸ್ಸು ಹೇಳಿತು.ಗೌಡ್ರು ಬೆಂಬಲಕ್ಕಿರುವಾಗ ನನಗ್ಯಾಕೆ ಚಿಂತೆ ಎಂದು ತಿರುಗಿದಾಗ ಗೋಣಿ ತುಂಬಾ ಪೇಪರುಗಳನ್ನು ತಂದು ಒಬ್ಬಾತ ಎದುರಿಗಿಟ್ಟು 'ಗೌಡ್ರು ಸೈನ್ ಹಾಕಲು ಹೇಳಿದ್ದಾರೆ'ಎಂದು ಹೇಳಿ ಹೋದ.ತೆಗೆದು ನೋಡಿದೆ.'ಷರತ್ತು ಪತ್ರಗಳು'ಬರೀ ಓದಲಿಕ್ಕೇ ಇನ್ನು ಮೂರುದಿನ ಬೇಕಾಗಬಹುದು.'ನನ್ನಿಂದಾಗದು,ನನ್ನಿಂದಾಗದು'ಎಂದು ಕಿರುಚಿದೆ.'ಪರವಾಗಿಲ್ಲಾ,ಸುಮ್ಮನೆ ಮಲಗಿ'ಎಂದಳು ನನ್ನಾಕೆ.
Comments
ಉ: ದೃಷ್ಠಿ ವರ್ಗ ಹೋಮ
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by gopinatha
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by kpbolumbu
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by ಗಣೇಶ
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by gopinatha
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by ಗಣೇಶ
ಉ: ದೃಷ್ಠಿ ವರ್ಗ ಹೋಮ
In reply to ಉ: ದೃಷ್ಠಿ ವರ್ಗ ಹೋಮ by kpbolumbu
ಉ: ದೃಷ್ಠಿ ವರ್ಗ ಹೋಮ
ಉ: ದೃಷ್ಠಿ ವರ್ಗ ಹೋಮ
ಉ: ದೃಷ್ಠಿ ವರ್ಗ ಹೋಮ