ದೇವನಹಳ್ಳಿ ಕೋಟೆ









ದೇವನಹಳ್ಳಿಯಲ್ಲಿ ಮಣ್ಣಿನ ಕೋಟೆಯನ್ನು ಕ್ರಿ.ಶ. ೧೫೦೧ರಲ್ಲಿ ಆವತಿಯ ಸಾಮಂತರಾಜ ಮಲ್ಲಬೈರೇಗೌಡ, ದೇವನದೊಡ್ಡಿ(ದೇವನಹಳ್ಳಿ)ಯ ದೇವರಾಯನಿಂದ ಅನುಮತಿಪಡೆದು ಕಟ್ಟಿದನು.
೧೭೪೭ರಲ್ಲಿ ಆ ಕೋಟೆಯು ಮೈಸೂರು ಅರಸರ ಆಧೀನಕ್ಕೆ ಬಂದಿತು. ಆ ಯುದ್ಧದಲ್ಲೇ ಹೈದರಾಲಿಯ ಪ್ರತಾಪ ಪ್ರಸಿದ್ಧಿಗೆ ಬಂದಿದ್ದು. ಹೈದರಾಲಿ-ಟಿಪ್ಪು ಕಾಲದಲ್ಲಿ ಕೋಟೆಯ ಪುನರ್ ನಿರ್ಮಾಣವಾಗಿದ್ದು. ಈ ಕೋಟೆ ಹದಿನೆಂಟನೇ ಶತಮಾನದ ಮೈಸೂರು ಪ್ರಾಂತ್ಯದ ಸೇನಾವಾಸ್ತು ಶಿಲ್ಪಕ್ಕೆ ಒಳ್ಳೆಯ ಉದಾಹರಣೆ. ಇದರ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ ಗೋಡೆ, ಫಿರಂಗಿ ಧಾಳಿಯನ್ನು ತಡೆಯುವುದಕ್ಕಾಗಿಯೇ ನಿರ್ಮಿಸಲಾಗಿದೆ. ಕೋಟೆಯ ಸುತ್ತಲೂ ಕಂದಕ, ಹಾಗೆಯೇ ಬೇಕಾದಾಗ ತೆಗೆದು ಹಾಕಬಹುದಾದ ಸೇತುವೆಯೂ ಇತ್ತು. ಕೇವಲ ಕೆಲವೇ ಸೈನಿಕರು ಕೋಟೆಯ ರಕ್ಷಣೆ ಮಾಡಬಹುದಾದಂತಹ ವ್ಯವಸ್ಥೆಯೂ ಕೋಟೆಯ ಮೇಲೆ ಇತ್ತು. ಆದರೂ........
೧೭೯೧ರಲ್ಲಿ ಕಾರ್ನ್‌ವಾಲಿಸ್ ಸೈನ್ಯ ದೇವನಹಳ್ಳಿ ಕೋಟೆಯೆದುರು ಬಂದಾಗ, ಯಾವುದೇ ಪ್ರತಿರೋಧವಿಲ್ಲದೇ ಕೋಟೆ ಅವನ ವಶವಾಗಿದೆ! ಭದ್ರವಾದ ಕೋಟೆಯೊಂದಿದ್ದರೆ ಮಾತ್ರ ಸಾಲದು, ಅದಕ್ಕೊಬ್ಬ ಧೀರ ನಾಯಕನಿರಬೇಕು. ಅಂತಹ ನಾಯಕ "ಮೈಸೂರ ಹುಲಿ" ಟಿಪ್ಪುಸುಲ್ತಾನ್, ಆಂಗ್ಲೋ-ಮೈಸೂರು ಯುದ್ಧದಲ್ಲಿ ಸೋತಿದ್ದರಿಂದ, ಈ ಕೋಟೆಯ ರಕ್ಷಣೆಗಿದ್ದ ಯೋಧರು, ಬ್ರಿಟಿಶ್ ಸೈನ್ಯ ಬರುವ ಮೊದಲೇ ಓಡಿಹೋಗಿದ್ದರು.
ಈಗಂತೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಕೋಟೆಯೊಂದು ಭಾಗವನ್ನು ಬಿಟ್ಟು, ಉಳಿದ ಒಳಗಿನ ಇಂಚಿಂಚು ಜಾಗವನ್ನೂ ಜನಗಳು ವಶಪಡಿಸಿಕೊಂಡಿದ್ದಾರೆ. ಕೆಲವು ಕಡೆ ಕೋಟೆಯನ್ನೇ ತಮ್ಮ ಮನೆ ಗೋಡೆಯಾಗಿ ಮನೆ ಕಟ್ಟಿಕೊಂಡಿದ್ದಾರೆ. ಇವರನ್ನೆಲ್ಲಾ ಒಕ್ಕಲೆಬ್ಬಿಸುವುದು ಆಗದ ಮಾತು. ಅಳಿದುಳಿದಿರುವ ಕೋಟೆಯನ್ನು ಪ್ರಕೃತಿ ಮತ್ತು ವಿಕೃತರಿಂದ ರಕ್ಷಿಸುವ ದೊಡ್ಡ ಹೊಣೆ ಸಂಬಂಧಿಸಿದ ಇಲಾಖೆಯ ಮೇಲಿದೆ. ಬಲಭಾಗದ ಕೋಟೆಗೆ ಬೇಲಿ ಹಾಕಿ ಬೀಗ ಜಡಿದಿದ್ದಾರೆ. ಎಡಭಾಗದ ಕೋಟೆಯಲ್ಲೇ ನೋಡಲು ಬೇಕಾದಷ್ಟಿದೆ.
ಕೋಟೆ ಮೇಲೆ ಹತ್ತಿ ನೋಡೋಣ ಬನ್ನಿ...
Comments
ಉ: ದೇವನಹಳ್ಳಿ ಕೋಟೆ
ಈ ಕೋಟೆಯ ರಕ್ಷಣೆಗಿದ್ದ ಯೋಧರು, ಬ್ರಿಟಿಶ್ ಸೈನ್ಯ ಬರುವ ಮೊದಲೇ ಓಡಿಹೋಗಿದ್ದರು.
ಈಗಂತೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಕೋಟೆಯೊಂದು ಭಾಗವನ್ನು ಬಿಟ್ಟು, ಉಳಿದ ಒಳಗಿನ ಇಂಚಿಂಚು ಜಾಗವನ್ನೂ ಜನಗಳು ವಶಪಡಿಸಿಕೊಂಡಿದ್ದಾರೆ. ಕೆಲವು ಕಡೆ ಕೋಟೆಯನ್ನೇ ತಮ್ಮ ಮನೆ ಗೋಡೆಯಾಗಿ ಮನೆ ಕಟ್ಟಿಕೊಂಡಿದ್ದಾರೆ. ಇವರನ್ನೆಲ್ಲಾ ಒಕ್ಕಲೆಬ್ಬಿಸುವುದು ಆಗದ ಮಾತು. ಅಳಿದುಳಿದಿರುವ ಕೋಟೆಯನ್ನು ಪ್ರಕೃತಿ ಮತ್ತು ವಿಕೃತರಿಂದ ರಕ್ಷಿಸುವ ದೊಡ್ಡ ಹೊಣೆ ಸಂಬಂಧಿಸಿದ ಇಲಾಖೆಯ ಮೇಲಿದೆ
>>>>>>
ಕೋಟೆ ಎಂದರೇ ಹಾಗೆ ಅಲ್ಲವೇ ಸದಾ ಯಾರದರು ಒಬ್ಬರು ಅದರ ಮೇಲೆ ಆಕ್ರಮಣ ನಡೆಸುತ್ತಲೇ ಇರುತ್ತಾರೆ.
ಈಗ ಜನರ ಸರದಿ! ರಾಜಕಾರಣಿಗಳ ಸರದಿ !
ಕೋಟೆ ಮಾತ್ರ ಒಳಗಿರುವರು ಯಾರು ಎಂದು ಭೇದಭಾವ ಮಾಡದೆ ರಕ್ಷಣೇ ನೀಡುತ್ತಲೆ ಇರುತ್ತದೆ, ಯಾರೇ ಇದ್ದರೂ!
ಉ: ದೇವನಹಳ್ಳಿ ಕೋಟೆ
>>ಕೋಟೆ ಮಾತ್ರ ಒಳಗಿರುವರು ಯಾರು ಎಂದು ಭೇದಭಾವ ಮಾಡದೆ ರಕ್ಷಣೇ ನೀಡುತ್ತಲೆ ಇರುತ್ತದೆ, ಯಾರೇ ಇದ್ದರೂ!
ಪಾರ್ಥರೆ, ಕೋಟೆಯ ಬಗ್ಗೆ ಒಳ್ಳೆ ಕೋಟೆ(quote :) ). dna ಪತ್ರಿಕೆಯಲ್ಲಿ (ಎ.೨೦೧೨) ಬಂದ ವರದಿ-http://www.dnaindia.com/bangalore/report-last-man-standing-for-devanahal... ಪರಿಸ್ಥಿತಿ ಈಗೇನೂ ಸುಧಾರಿಸಿಲ್ಲ.
ಪಾರ್ಥರಿಗೂ ಪಾಟೀಲರಿಗೂ ಧನ್ಯವಾದಗಳು.
ಉ: ದೇವನಹಳ್ಳಿ ಕೋಟೆ
ನಾಗೇಶರೆ, >>ಉಳಿದಿದ್ದನ್ನಾದರೂ ಉಳಿಸಿಕೊಂಡು ಹೋದರೆ ಪುಣ್ಯ...:) ಒಳಗೆ ಹೋಗಲು ಜಾಗ ಕಿರಿದು ಅಂತ, ಅಭಿವೃದ್ಧಿ ನೆಪದಲ್ಲಿ ಗೋಡೆಯನ್ನೇ ಒಡೆಯಲೂಬಹುದು.:( ಇಲ್ಲಿ ಕೋಟೆ ನೋಡಲು ದುಡ್ಡು ಕೊಡಬೇಕಾಗಿಲ್ಲ. ಯಾರ ಪರ್ಮಿಶನ್ನೂ ಬೇಕಿಲ್ಲ. ನೋಡಲು ಜಾಸ್ತಿ ಸಮಯವೂ ಬೇಡ. ನಂದಿಬೆಟ್ಟಕ್ಕೆ ಹೋಗುವವರು, ಅರ್ಧಗಂಟೆ ಸಮಯ ಮಾಡಿಕೊಂಡು ಕೋಟೆ ನೋಡಿ ಹೋಗಬಹುದು.