ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
ದೇವರುಗಳಿಗೆ ಭಕ್ತ ಜನರು ಸಲ್ಲಿಸುವ ಪೂಜೆ ಪುನಸ್ಕಾರಗಳಿಗೆ,
ಪೂಜಾರಿಗಳೇ ದರ ನಿಗದಿಮಾಡಿ ಕಿತ್ತುಕೊಳ್ಳುತ್ತಿಹರಲ್ಲಾ ಇಲ್ಲಿ;
ತಮ್ಮ ಪ್ರಿಯ ದೇವರುಗಳು ಇನ್ನೂ ಬಹು ಪ್ರಿಯರಾಗುತಿಹರೆಂಬ,
ಮೂಢನಂಬಿಕೆಯಲ್ಲಿಯೇ ಭಕ್ತ ಜನರು ಇನ್ನೂ ಇದ್ದಿಹರಲ್ಲಾ ಇಲ್ಲಿ;
ಮಧ್ಯವರ್ತಿಗಳ ಜೋಳಿಗೆಗಳ ನಾನು ತುಂಬಿಸಿದರೆ ಆ ದೇವರು,
ಒಲಿಯುವರು ಎಂಬ ಭ್ರಮೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೇ ಇಲ್ಲ ನಿಜದಿ;
ನನ್ನ ನಡೆ ನುಡಿಯ ಸ್ವತಃ ತಾನೇ ಅರಿಯರಾದೊಡೆ ಆ ದೇವರು,
ನನ್ನನ್ನು ಕಾಪಾಡುತಿಹರೆಂಬ ನಂಬಿಕೆ ಹೇಗಿರಬಹುದು ಈ ಮನದಿ;
ನಮ್ಮ ಈ ನಾಡಿನ ಸಾವಿರಾರು ದೇವಾಲಯಗಳ ಹುಂಡಿಗಳಲಿ,
ಅದೆಷ್ಟೋ ಸಂಪತ್ತು ಕೊಳೆತುಬಿದ್ದಿಹುದಲ್ಲಾ ಈ ಪರಿ ವ್ಯರ್ಥವಾಗಿ;
ಆ ಹುಂಡಿಗಳ ಬಗೆದು, ಬಡವರ ಗುಂಡಿಗೆಗಳಿಗೆ ತಂಪನ್ನೀಯುವ,
ಕಾರ್ಯ ನಡೆಸಿದರೆ ಯಾರೂ ಉಳಿಯರೀ ನಾಡಿನಲಿ ಬಡವರಾಗಿ!
***************************
Rating
Comments
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
In reply to ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ! by kamalap09
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
In reply to ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ! by Jayanth Ramachar
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
In reply to ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ! by mpneerkaje
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!
In reply to ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ! by santhosh_87
ಉ: ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ!