ದೇವೇಗೌಡರನ್ನು ಕರ್ನಾಟಕದ ಪಿತ ಎಂದು ಕರೆಯಲು ಅಧಿಕಾರ ನೀಡಿದ್ದು ಯಾರು?

ದೇವೇಗೌಡರನ್ನು ಕರ್ನಾಟಕದ ಪಿತ ಎಂದು ಕರೆಯಲು ಅಧಿಕಾರ ನೀಡಿದ್ದು ಯಾರು?

http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ.


 


ಒಂದು ರಾಜಕೀಯ ಪಕ್ಷದ ನಾಯಕರಾಗಿರುವ ದೇವೇಗೌಡರನ್ನು, ಕರ್ನಾಟಕದ ಪಿತ ಎಂದು ಕರೆಯಲು ಇವರಿಗೆ ಕರ್ನಾಟಕದ ಜನತೆ ಅಧಿಕಾರ ಅಥವಾ ಅನುಮತಿ ನೀಡಿದ್ದಾರೆಯೇ?


 


ಯಾರೇ ಬೇಕಿದ್ದರೂ ಯಾರನ್ನೇ ಆಗಲಿ, ಅವರವರ ಪಿತ ಎಂದು ಕರೆದುಕೊಳ್ಳಲಿ. ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ರಾಜ್ಯದ ಪಿತನೆಂದು ಕರೆಯುವುದು ಅಸಾಧ್ಯ. ಅಲ್ಲವೇ?


 


ಏನಂತೀರಿ ಓದುಗರೇ?


 


- ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments