ದೇವ್ಆನಂದ್ ರ "ಕಾಲಾ ಬಜಾರ್ ಚಿತ್ರ", ನನಗೇಕೆ ಪ್ರಿಯ ?

ದೇವ್ಆನಂದ್ ರ "ಕಾಲಾ ಬಜಾರ್ ಚಿತ್ರ", ನನಗೇಕೆ ಪ್ರಿಯ ?

ಚಿತ್ರ
ಈ ಲೇಖನವನ್ನು ಬರೆದ  'ಎಚ್ಚಾರೆಲ್ 'ಎಂದು ಮುಂಬಯಿಯ ಗೆಳೆಯರಿಗೆ ಪರಿಚಿತರಾದ ಹೊಳಲ್ಕೆರೆ ವೆಂಕಟೇಶ್ ಒಬ್ಬ ವಿಕಿಪೀಡಿಯ ಸಂಪಾದಕರು (ಕನ್ನಡ), ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ, ನಸುಕು.ಕಾಮ್ ಇಂಟರ್ನೆಟ್ ಜಾಲತಾಣದಲ್ಲಿ ಸಕ್ರಿಯರು. ಹಲವಾರು ಬ್ಲಾಗ್ ಗಳಲ್ಲಿ ಬರೆಯುತ್ತಾರೆ. 
 
ಇಂದಿನಕಾಲದಲ್ಲಿ ಸಿನಿಮಾ  ವೀಕ್ಷಕರು ಹೆಚ್ಚಾಗಿ 'ಮಲ್ಟಿ ಪ್ಲೆಕ್ಸ್ ಸಿನಿಮಾ ಕಲ್ಚರ್' ಗೆ ಒಗ್ಗಿಹೋಗಿದ್ದಾರೆ. ಹಿಂದೆ ಸಿಂಗಲ್ ಸ್ಕ್ರೀನ್  ಟಾಕೀಸ್ ಗಳಿದ್ದ ಕಾಲವಾಗಿತ್ತು. ಒಳ್ಳೆಯ  ಹೊಸದಾಗಿ ರಿಲೀಸ್ ಆದ ಚಿತ್ರಗಳನ್ನು ನೋಡಲು ಬ್ಲಾಕ್ ನಲ್ಲಿ. ಟಿಕೆಟ್ ಖರೀದಿಸಲಾಗದಿದ್ದರೆ,  ನೋಡುವುದು ಬಹಳ ಕಷ್ಟವಾಗಿತ್ತು. ೧೯೬೦ ರಿಂದ ೧೯೯೦ ರ ವರೆಗೆ ಅಂದರೆ ಮಲ್ಟಿ ಪ್ಲೆಕ್ಸ್ ಸಿನಿಮಾ  ಬರುವ ವರೆವಿಗೂ  ಇದೇ ಟ್ರೆಂಡ್ ಕಾಣಲು ಸಿಗುತ್ತಿದ್ದು. ಹೊಸಚಿತ್ರ  ರಿಲೀಸ್ ಆದ ಮೊದಲ ದಿನವೇ ನೋಡುವ ಹವ್ಯಾಸವಿದ್ದವರಿಗಂತೂ ಅಸಾಧ್ಯದ ಮಾತಾಗಿತ್ತು. ಅವರಿಗೆ ಬ್ಲಾಕ್ ನಲ್ಲಿ ಟಿಕೆಟ್ ಖರೀದಿಸದೆ ಬೇರೆ ಪರ್ಯಾಯ ವ್ಯವಸ್ಥೆ ಯಿರಲಿಲ್ಲ.
ಬೆಂಗಳೂರಿನ  ನಮ್ಮ ಅಣ್ಣನವರ ಮನೆಯಲ್ಲಿ   ಬ್ಲಾಕ್ ನಲ್ಲಿ ಟಿಕೆಟ್ ಕೊಂಡು ಸಿನಿಮಾ ನೋಡುವುದನ್ನು ಬಡಪಟ್ಟಿಗೆ ಯಾರೂ ಪುರಸ್ಕರಿಸುತ್ತಿರಲಿಲ್ಲ. ಆದರೆ ನಾನು ಬೊಂಬಯಿನಿಂದ ಅಪರೂಪಕ್ಕೆ ಬಂದಿರುವೆನೆಂದು ನನಗಾಗಿ  ಈ ರೂಲನ್ನು ಮುರಿದವರು ನಮ್ಮಣ್ಣನವರು.  ಮೆಜೆಸ್ಟಿಕ್ ನ  ಪ್ರಭಾತ್  ಟಾಕೀಸ್ ನಲ್ಲಿ ತೋರಿಸುತ್ತಿದ್ದ  ದೇವಾನಂದ್ ರವರ ಹಿಂದಿ ಮೂವಿ, "ಹಮ್ ದೋನೋ" ಚಿತ್ರಕ್ಕೆ ಯಾರಿಗೋ ಹೇಳಿ ಟಿಕೆಟ್ ತರಿಸಿದ್ದರು. ಇದಕ್ಕೂ ಹಿಂದೆ ಕಂಟೋನ್ಮೆಂಟ್ ನಲ್ಲಿ ನೋಡಿದ ಬೆನ್ಹುರ್ ಚಿತ್ರ ವೀಕ್ಷಿಸಿದ್ದೂ ಬ್ಲಾಕ್ ನಲ್ಲಿ ಟಿಕೆಟ್ ಖರೀದಿಸಿಯೇ  ! ಹೀಗೆ ಕಾಲ ಬಜಾರ್ ಎನ್ನುವ ಹೆಸರಿನಲ್ಲೇ ಒಂದು ಚಿತ್ರ ಬಂದಿದೆ ಎನ್ನುವುದು ಗೊತ್ತಾದಾಗ, ಮನಸ್ಸಿನಲ್ಲಿ ಏನೋ ಗೊಂದಲವಾಗಿತ್ತು. ಆದರೆ ನಾನು ಆ ಚಿತ್ರವನ್ನು ನೋಡಿದ್ದು ಬೊಂಬಾಯಿನಲ್ಲಿ ; ಸುಮಾರು ೧೯೭೫ ವರ್ಷದ ಆಸುಪಾಸಿನಲ್ಲಿ  !
 
ಸದಾ ಬಹಾರ್ ನಟನೆಂದು ಹಿಂದಿ ಚಿತ್ರ ವಲಯದಲ್ಲಿ ಹೆಸರು ಮಾಡಿದ ನಟರಲ್ಲಿ ಹಿರಿಯರಾದ  ದೇವ್  ಆನಂದ್ ತಮ್ಮ ಚಿತ್ರ "ಕಾಲಾ ಬಾಜಾರ್" ನಲ್ಲಿ, ಮೆಹಬೂಬ್ ಖಾನ್ ನಿರ್ಮಿಸಿದ    "ಮದರ್ ಇಂಡಿಯಾ" ಚಿತ್ರಕ್ಕೆ ಮಾರ್ಕೆಟಿಂಗ್ ಗೆ ಸಮರ್ಥನೆ  ಕೊಟ್ಟರು. ಈ ತರಹದ ಸೌಹಾರ್ದತೆ ಮತ್ತು ಸಹಕಾರವನ್ನು  ಬಾಲಿವುಡ್ ಹಿಂದಿ ಚಿತ್ರ ನಿರ್ಮಾಣಕಾರ್ಯದಲ್ಲಿ ಕೊಟ್ಟಿರುವುದನ್ನು  ಬಹುಶಃ ಇದೊಂದೇ ಚಿತ್ರದಲ್ಲಿ ಕಾಣಬಹುದು. ೧೯೬೦ ರಲ್ಲಿ 'ನವಕೇತನ್ ಚಿತ್ರ ಸಂಸ್ಥೆ', ಕಾಲಾ ಬಾಜಾರ್ ಚಿತ್ರವನ್ನು ನಿರ್ಮಿಸಿತು., ಬಹಳ ಮುಂದಾಲೋಚನೆ ಮಾಡಿ ತಯಾರಿಸಿದ ಚಿತ್ರ. ದೇವ್  ಆನಂದ್  ರವರ ಸೋದರ ವಿಜಯ್ ( ಗೋಲ್ಡಿ), ಚಿತ್ರಲೇಖಕ, ನಿರ್ದೇಶಕ, ನಟ,  ಅಣ್ಣ ಚೇತನ್ ಆನಂದ್ ನಿಭಾಯಿಸುತ್ತಿದ್ದರು.  ಕಾಲಾ ಬಜಾರ್  ಚಿತ್ರದಲ್ಲಿ ಮೂವರು ಸೋದರರೂ, ದೇವ್ ಆನಂದ್, ಗೋಲ್ಡಿ, ಚೇತನ್ ಆನಂದ್ ಸೋದರರು ಬೆಳ್ಳಿ ತೆರೆಯಮೇಲೆ  ಕಾಣಿಸಿಕೊಂಡಿದ್ದರು. ದೇವ್ ಆನಂದ್ ತಮ್ಮ ಸೋದರ  ಗೋಲ್ಡಿಗೆ ಸಿನಿಮಾ ನಿರ್ದೇಶನದಲ್ಲಿ  ಹಸ್ತಕ್ಷೇಪಮಾಡದೆ ಸಂಪೂರ್ಣ ಸ್ವಾತಂತ್ರ್ಯವನ್ನು  ಕೊಟ್ಟರು.  ತಮಗೆ ದೊರಕಿದ  ಜವಾಬ್ದಾರಿಯನ್ನು ಗೋಲ್ಡಿಯವರು  ತಮ್ಮದೇ ಆದ  ರೀತಿಯಲ್ಲಿ ಹ್ಯಾಂಡಲ್ ಮಾಡಿ ಒಂದು ವಿಕ್ರಮವನ್ನು ಸಾಧಿಸಿರುವುದನ್ನು  ಕಾಣಬಹುದು. ದಕ್ಷಿಣ ಬೊಂಬಾಯಿನ ಲಿಬರ್ಟಿ ಸಿನಿಮಾ ಗೃಹದಲ್ಲಿ ಪ್ರೀಮಿಯರ್ ಷೋ ೧೯೫೭ ರಲ್ಲಿ ರಿಲೀಸ್ ಆಗಿದ್ದ ಮೆಹಬೂಬ್ ಖಾನರ ಮದರ್ ಇಂಡಿಯಾ ಪಡೆದರು. ಚಿತ್ರದ ಭಾಗವಾಗಿ ಬಳಸಿದರು.  ತಮ್ಮ ಚಿತ್ರದಲ್ಲಿ ಬಳಸಿದರು. ಅವರಿಗೆ ದೂರದರ್ಶಿತ್ವವಿತ್ತು. ೧೯೬೭ ರಲ್ಲಿ ಆದ ಪ್ರಿಮೈಯರ್ ನಲ್ಲಿ ಹಿಂದಿ ಚಿತ್ರರಂಗದ ದಿಗ್ಗಜ ಕಲಾಕಾರರು ಬಂದು ಭಾಗವಹಿಸಿದ್ದರು. ಲತಾಮಂಗೇಶ್ಕರ್ ತನ್ನ ಕಾರಿನಿಂದ ಇಳಿದು ಬಂದು ಎಲ್ಲರಿಗೂ  ನಮಸ್ತೆ ಮಾಡುತ್ತಾ ಮೆಲ್ಲಗೆ ಓಡುತ್ತಾ ಚಿತ್ರಮಂದಿರದೊಳಗೆ ಹೋಗುವ  ದೃಶ್ಯನೋಡಬಹುದು.  ನರ್ಗಿಸ್, ರಾಜೇಂದ್ರಕುಮಾರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್ ಮೊಹಮ್ಮದ ರಫಿ, ಕಿಶೋರ್ ಕುಮಾರ್, ತನ್ನ ಮೊದಲ ಪತ್ನಿ ರುಮಾಜಿ ಜತೆ, ಸೊಹ್ರಾಬ್ ಮೋದಿ, ಎಲ್ಲರೂ ಮೆಹಬೂಬ್ ಖಾನರಿಂದ ಆಹ್ವಾನಿತರು, ಪ್ರೀಮಿಯರ್ ನಲ್ಲಿ ಭಾವಹಿಸಲು ಅತ್ಯುತ್ಸಾಹದಿಂದ ಆಗಮಿಸಿದ್ದರು. ಇಂದಿನ ದಿನಗಳಲ್ಲಿ  ನಾವು ನಮ್ಮ ಚಿಕ್ಕ  ಮೊಬೈಲ್ ನಲ್ಲೇ  ಅವೆಲ್ಲ ಪ್ರೀಮಿಯರ್ ಕಾರ್ಯಕ್ರಮಗಳನ್ನು ಉಚಿತವಾಗಿ  ವಿಡಿಯೋಗಳಲ್ಲಿ ವೀಕ್ಷಿಸಬಹುದು. 
 
೧೯೬೦ ಸಮಯದಲ್ಲಿನ ಪರಿಸ್ಥಿತಿಯೇ ಬೇರೆ ರೀತಿಯದೇ ಆಗಿತ್ತು. ಪ್ರಮುಖ ರಾಜಕೀಯ ಸುದ್ದಿಗಳಲ್ಲದೆ  ರೇಡಿಯೋದಲ್ಲೂ ಈ ತರಹದ ಸುದ್ದಿಗಳು ಪ್ರಸಾರವಾಗುತ್ತಿರಲಿಲ್ಲ. ಯಾವುದಾದರೂ  ಸಿನಿಮಾಕ್ಕೆಂದೇ  ಮೀಸಲಾದ ಪತ್ರಿಕೆಯಲ್ಲಿ ಓದಬೇಕಾಗಿತ್ತು. ಲೇಖನದಲ್ಲಿ ಅದಕ್ಕೆ ಸಂಬಂಧಿಸಿದ  ಒಂದೆರಡು ಫೋಟೋಗಳನ್ನೂ  ಪ್ರಕಟಿಸಿದ್ದರು.  ಇವೆಲ್ಲ ಪಾತ್ ಬ್ರೇಕಿಂಗ್   ಮತ್ತು ದೊಡ್ಡ ಡೀಲ್ ಎಂದು  ಅನ್ನಿಸಿತ್ತು. ದೇವಾನಂದ ಗೆ ಹೀಗೆ  ಕೊಟ್ಟ ಪರವಾನಗಿಗೆ  ಕೆಲವು ಕಾರಣಗಳಿದ್ದವು. ಮೊದಲನೆಯದಾಗಿ  ಮೆಹಬೂಬ್ ಖಾನ್ ಮತ್ತು ದೇವ್ ಆನಂದ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಮೆಹೆಬೂಬ್ ಖಾನ್ ರ ಸ್ಟುಡಿಯೋದ ಟ್ರಸ್ಟಿಗಳಲ್ಲೊಬ್ಬರಾಗಿದ್ದರು.  ಮೆಹಬೂಬ್ ಸ್ಟುಡಿಯೋದ  ಒಳಗಡೆ ಒಂದು ಮೂಲೆಯಲ್ಲಿ ದೇವ್ ಗೆ ಒಂದು ಗ್ರೀನ್  ರೂಮ್ ತರಹದ ಕೊಠಡಿಯನ್ನು ಪರ್ಮನೆಂಟ್ ಆಗಿ  ಕೊಡಲಾಗಿತ್ತು. ಅಲ್ಲಿ  ದೇವ್ ಆನಂದ್  ಅವರು ತಮ್ಮ ಟೋಪಿ, ಕೋಟ್, ಮಫ್ಲರ್ ಟೈ, ಸ್ಕಾರ್ಫ್  ಮತ್ತಿತರ  ಬಟ್ಟೆ-ಬರೆಗಳನ್ನು ಪೋಷಾಕುಗಳನ್ನೂ  ಇಟ್ಟುಕೊಂಡಿದ್ದರು. ದೇವ್ ಆನಂದ್ ಹಾಗು ಮೆಹ್ ಬೂಬ್ ಖಾನ್ ಒಟ್ಟಿಗೆ ಸೇರಿ  ಎಂದೂ  ಒಂದು ಚಿತ್ರವನ್ನೂ  ನಿರ್ಮಿಸದಿದ್ದರೂ, ಅವರಿಬ್ಬರ ಮಧ್ಯೆ  ಸ್ನೇಹಕ್ಕೇನೂ ಕೊರತೆಯಿರಲಿಲ್ಲ.  ಚಿತ್ರದಲ್ಲಿ  ಹೆಸರಾಂತ ನಾಯಕಿ ಅಭಿನೇತ್ರಿ, ನರ್ಗಿಸ್  ರ ವಿನಃ ಅಂಥ ಹೇಳಿಕೊಳ್ಳುವ  ಯಶಸ್ವಿ ನಟರ್ಯಾರೂ ಇರದೆಯಿದ್ದದ್ದು ಡಿಸ್ಟ್ರಿಬ್ಯುಟರ್ ಗಳ  ಆತಂಕಕ್ಕೆ ಕಾರಣವಾಗಿತ್ತು, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಓಡುವುದೋ ಇಲ್ಲವೋ ಎನ್ನುವ ಅನುಮಾನ ಅವರನ್ನು ಆವರಿಸಿತ್ತು.  ಈ ಕಾರಣಕ್ಕಾಗಿಯೇ ಮದರ್ ಇಂಡಿಯಾ ಚಿತ್ರವನ್ನು  ಕೊಳ್ಳಲು ಯಾವ ಡಿಸ್ಟ್ರಿಬ್ಯುಟರ್ ಸಹಿತ ಮುಂದೆ ಬರಲಿಲ್ಲ. ಈ ಪ್ರಕರಣದಿಂದ ನೊಂದ ಮೆಹಬೂಬ್ ಖಾನರು ಧರ್ಯಮಾಡಿ  ತಮ್ಮದೇ ಆದ ಫಿಲಂ  ವಿತರಣಾ ಆಫೀಸ್ ತೆರೆದರು. ಮದರ್ ಇಂಡಿಯಾ ಚಿತ್ರದ ಪ್ರೀಮಿಯರ್  ದಕ್ಷಿಣ ಬೊಂಬಾಯಿನ ಲಿಬರ್ಟಿ ಸಿನಿಮಾ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭವನ್ನು ದೇವ್ ಆನಂದ್ ತಮ್ಮ ಚಿತ್ರ ಕಾಲಾ ಬಜಾರ್ ಚಿತ್ರದ ಕಥೆಯಲ್ಲಿ ಅಳವಡಿಸಿಕೊಂಡರು. ದೇವ್ ಒಬ್ಬ ಬ್ಲಾಕ್ಟಿ ಮಾರ್ಕೆಟ್ಕೆ ಟಿಕೆಟ್ಟ್  ಮಾರಾಟಗಾರರಾಗಿ ಲಿಬರ್ಟಿ ಸಿನಿಮಾದ ಹೊರಗೆ ಓಡಾಡುತ್ತಾ ಮಾರುವ ದೃಶ್ಯವನ್ನು ೧೯೫೭ ರಲ್ಲಿ ಸೆರೆಹಿಡಿದು, ಅದನ್ನು ೧೯೬೦ ರಲ್ಲಿ ನಿರ್ಮಿಸಿ  ಬಿಡುಗಡೆಮಾಡಿದ ತಮ್ಮ ಕಾಲಾ ಬಜಾರ್ ಚಿತ್ರದಲ್ಲಿ ಅಳವಡಿಸಿಕೊಂಡರು. ಸಿನಿಮಾ ನೋಡುಗರು ಬಹಳ ಆಸ್ಥೆಯಿಂದ ಅಪಾರ ಸಂಖ್ಯೆಯಲ್ಲಿ ಬಂದು ಕಾಲಾ ಬಜಾರ್ ಚಿತ್ರವನ್ನು  ನೋಡಿ ಆನಂದಿಸಿದರು. ಚಿತ್ರ ಒಂದು ದೊಡ್ಡ ಮೈಲುಗಲ್ಲನ್ನು ಸ್ಥಾಪಿಸಿ, ಚಾರಿತ್ರ್ಯಿಕ ಘಟನೆಯಾಗಿ ಪರಿಣಮಿಸಿತು. 
 
"ಮದರ್ ಇಂಡಿಯಾ" (೧೯೫೭) ಚಿತ್ರದಲ್ಲಿ ಅಭಿನಯಿಸಿದವರು : ನರ್ಗಿಸ್, ಸುನಿಲ್ ದತ್, ರಾಜ್ ಕುಮಾರ್, ರಾಜೇಂದ್ರ ಕುಮಾರ್, ಸಂಗೀತ : ನೌಶಾದ್,  
 
"ಕಾಲಬಝರ್ "(೧೯೬೦):  ಚಿತ್ರ ಕತೆ ಹೀಗಿದೆ :
 
ದೇವಾನಂದ್, ವಹೀದಾ ರೆಹ್ಮಾನ್, ನಂದ, ರಶೀದ್ ಖಾನ್, ಮದನ್ ಪುರಿ, ಲೀಲಾ ಚಿಟ್ನಿಸ್, ವಿಜಯ್ ಆನಂದ್, ಚೇತನ್ ಆನಂದ್ ಸಂಗೀತ : ಎಸ್. ಡಿ. ಬರ್ಮನ್, ಲಿರಿಕ್ಸ್ : ಶೈಲೇಂದ್ರ 

ಬಡ ಕುಟುಂಬವೊಂದರಲ್ಲಿ ಜನಿಸಿದ  ರಘುವೀರ್ (ದೇವಾನಂದ್) ಬಸ್ ಕಂಡಕ್ಟರ್,ಕೆಲಸದಲ್ಲಿದ್ದವನು  ಬಸ್ ಪ್ರಯಾಣಿಕನೊಬ್ಬನ ಜತೆ ಆದ ಜಗಳದಿಂದಾಗಿ  ಕೆಲಸ ಕಳೆದುಕೊಳ್ಳುತ್ತಾನೆ. ಮನೆಯಲ್ಲಿ  ತಾಯಿಗೆ ಅರೋಗ್ಯ ಸರಿಯಿಲ್ಲ. ಇಬ್ಬರು ಒಡಹುಟ್ಟಿದವರನ್ನು ಸಾಕುವ ಜವಾಬ್ದಾರಿ ರಘುವೀರನ ಮೇಲೆಯೇ ಇರುತ್ತದೆ. ಹಾಗೆ ಯೋಚಿಸುತ್ತಾ ರಸ್ತೆಯಲ್ಲಿ ಒಂದು ಸಿನಿಮಾ ಹೌಸ್ ಮುಂದೆ ಹೋಗುತ್ತಿರುವಾಗ 'ಕಾಲು' ಎಂಬ ಸಿನಿಮಾ ಬ್ಲಾಕ್ ಟಿಕೆಟ್ ಮಾರುವವನ  ಭೇಟಿಯಾಗುತ್ತದೆ.  ಇಬ್ಬರೂ ಸ್ನೇಹಿತರಾಗುತ್ತಾರೆ. ಕಾಲು ಹತ್ತಿರ  ಸಿನೆಮಾ ಟಿಕೆಟ್ ಗಳನ್ನೂ ಕಳ್ಳ ಸಂತೆಯಲ್ಲಿ ಮಾರಿ ಗಳಿಸಿದ ಹಣವನ್ನು ನೋಡಿ ರಘುವೀರ್ ತಾನೂ ಅವನ ಜತೆ ಸೇರಿ ಒಟ್ಟಾಗಿ ಧನ್ದೆ  ಪ್ರಾರಂಭಿಸುತ್ತಾರೆ.  ಆದರೆ ಈ ಕೆಲಸಕ್ಕೂ ಮೊದಲೇ ಟಿಕೆಟ್ ಗಳನ್ನು ಖರೀದಿಸಲು ಬಂಡವಾಳ ಬೇಕು. ರಘುವೀರ್ ಒಬ್ಬ ಮನುಷ್ಯ (ಲಾಯರ್ ದೇಸಾಯಿ) ಬ್ಯಾಂಕಿನಿಂದ ೫ ಸಾವಿರ ರೂಪಾಯಿಹಣ ತನ್ನ ಚೀಲದಲ್ಲಿ ಇಟ್ಟುಕೊಂಡು ತನ್ನ ಮನೆಗೆ ಹೋಗುತ್ತಿರುವಾಗ ಆತನನ್ನು ಹಿಂಬಾಲಿಸುತ್ತಾನೆ. ಮನೆಗೆ ಲಿಫ್ಟ್ ನಲ್ಲಿ ಹೋಗುವಾಗ, ತಾನೂ ಹೋಗಿ ಹಣದ ಬ್ಯಾಗನ್ನು ಅಪಹರಿಸಿ ಓಡಿಹೋಗಿ ತಪ್ಪಿಸಿಕೊಳ್ಳುತ್ತಾನೆ.  ಈ ಹಣದಿಂದ ಬೊಂಬಾಯಿನ ಸಿನೆಮಾ ಥಿಯೇಟರ್ ಗಳ ಟಿಕೆಟ್ ಗಳನ್ನೂ ಮೊದಲೇ ಖರೀದಿಸಿ ಇಟ್ಟುಕೊಂಡು ಬ್ಲಾಕ್ ನಲ್ಲಿ ಮಾರುವ ವೃತ್ತಿಯನ್ನು ಶುರುಮಾಡುತ್ತಾನೆ. ಆಗ ಬೊಂಬಾಯಿಯ  ರೀಗಲ್ ಸಿನಿಮಾ ಥಿಯೇಟರ್ ನಲ್ಲಿ ಮದರ್ ಇಂಡಿಯಾ ಫಿಲಂ ರಿಲೀಸ್ ಆಗಿ ಅದರ  ಪ್ರೀಮಿಯರ್ ಶೋನಡೆಯುತ್ತಿರುತ್ತದೆ.  ರಘುವೀರ್, ಮತ್ತು ಕಾಲು ಥಿಯೇಟರ್  ಹೊರಗೆ ಬ್ಲಾಕ್  ಟಿಕೆಟ್ ಮಾರುತ್ತಿರುತ್ತಾರೆ. ಆ ದಿನ ಸಿನೆಮಾ ಪ್ರೀಮಿಯರ್ ಷೋ ನಲ್ಲಿ ಭಾಗಿಯಾಗಲು ಹಿಂದಿ ಚಲನ ಚಿತ್ರ ರಂಗದ ಹೆಸರಾಂತ ನಟರು, ಸಂಗೀತಕಾರರು ಬರುತ್ತಿದ್ದಂತೆ, ಬಿರುಸಾಗಿ ಟಿಕೆಟ್ ಖರೀದಿಸಲಾಗುತ್ತದೆ. ತನ್ನ ಹತ್ತಿರವಿದ್ದ ಕೊನೆಯ ಟಿಕೆಟ್ ೧೦೦ ರೂಪಾಯಿಗಳಿಗೆ  ಮಾರಿದಾಗ (ಅದರ ಬೆಲೆ ೨ ರೂಪಾಯಿಗಳು)  ತಾನು ಮಾಡುತ್ತಿರುವ ಧಂದೆ ಎಷ್ಟು ಲಾಭದಾಯಕವಾಗಿದೆ ಎನ್ನುವ ವಿಚಾರ ತಲೆಗೆ ಬರುತ್ತದೆ. 

ರಘುವೀರ್ ಗೆ ತನ್ನ ತರಹ ಜತೆಯಲ್ಲಿ  ಕೆಲಸಮಾಡಲು ಹೆಚ್ಚುಜನರ ಅಗತ್ಯತೆ ಕಾಣುತ್ತದೆ.  ತನ್ನ ಉದ್ಯೋಗದಲ್ಲಿ ಜೊತೆಯಾಗಲು ಅನೇಕ ಬಡ ಹುಡುಗರನ್ನು, ಭಿಕ್ಷುಕರನ್ನು  ಮತ್ತು ಕೆಲವು ಕಳ್ಳತನದ ಅಪಾದಿತರನ್ನೂ, ಮೊದಲಾದವರನ್ನೂ ಸೇರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಕಳ್ಳಸಂತೆ ಟಿಕೆಟ್  ಮಾರಾಟ  ಮಾಡುತ್ತಾರೆ. ಆ ಗುಂಪಿನ ಇನ್ನೊಬ್ಬ ಮುಖ್ಯಸ್ತ  (ಮದನ್ ಪುರಿ) ಗಣೇಶ್, ಮತ್ತು ರಘುವೀರ್ ಏನೋ ಕಾರಣಕ್ಕೆ ಗುದ್ದಾಡುತ್ತಾರೆ. ನಂತರ ಜಗಳ ಮರೆತು ಮತ್ತೆ ಒಂದಾಗುತ್ತಾರೆ. ರಘುವೀರ್ ಗಳಿಕೆ ಹೆಚ್ಚಾದಂತೆ ದಕ್ಷಿಣ ಬೊಂಬಾಯಿನ ಮೆರೀನ್ ಡ್ರೈವ್ ಜಿಲ್ಲೆಯಲ್ಲಿ ದೊಡ್ಡ ಮ್ಯಾನ್ಷನ್  ಕೊಂಡು ಜೀವನ ನಡೆಸಲು ಪ್ರಯತ್ನಿಸುತ್ತಾನೆ. ಒಮ್ಮೆ ನಂದನ್ ತನ್ನ ಗೆಳತಿ ಅಲ್ಕಾ ಜೊತೆಯಲ್ಲಿ ಸಿನಿಮಾ ನೋಡಲು ಬಂದಾಗ  ಬ್ಲಾಕ್ ನಲ್ಲಿ  ಟಿಕೆಟ್  ಖರೀದಿಸುತ್ತಾನೆ.  ಅಲ್ಕಾ (ವಹೀದಾ ರೆಹಮಾನ್) ಗೆ ಈವಿಷಯ  ಗೊತ್ತಾಗುತ್ತಿದ್ದಂತೆಯೇ ಕೋಪದಿಂದ   ಟಿಕೆಟ್ ಗಳನ್ನು  ಹರಿದು ಬಿಸಾಡುತ್ತಾಳೆ. ಆಕೆಗೆ ಈ ತರಹದ ಕಳ್ಳಸಂತೆಯಲ್ಲಿ ಟಿಕೆಟ್ ಖರೀದಿಸುವುದು ಸುತರಾಂ  ಇಷ್ಟವಾಗುವುದಿಲ್ಲ. ತನ್ನ ವಿರೋಧವನ್ನು ಸ್ಪಷ್ಟವಾಗಿ, ದಿಟ್ಟವಾಗಿ  ವ್ಯಕ್ತಪಡಿಸುತ್ತಾಳೆ.  ಇದನ್ನು  ದೂರದಿಂದ ಅವಲೋಕಿಸುತ್ತಿದ್ದ ರಘುವೀರ್ ಗೆ ಆಕೆಯ ಗುಣ ಇಷ್ಟವಾಗುತ್ತದೆ.  ನಂದ್  ಕುಮಾರ್ ಚಟ್ಟೋಪಾಧ್ಯಾಯ್ (ವಿಜಯ್ ಆನಂದ್ ) ಅಲ್ಕಾಳ  ಬಾಯ್ ಫ್ರೆಂಡ್. ಅವನು ಅಲ್ಕಾಳನ್ನು  ಗಾಢವಾಗಿ ಪ್ರೀತಿಸುತ್ತಿರುತ್ತಾನೆ.  ನಂದಾ  ಸ್ಕಾಲರ್ಶಿಪ್ ಗಳಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುತ್ತಾನೆ. ಈಗ ನಂದನ ತಂದೆ-ತಾಯಿಗಳು  ಅವರ ಪ್ರೀತಿಯ ಸಂಬಂಧವನ್ನು ಮರೆಸಲು ಅಲ್ಕಾಳನ್ನು ದಕ್ಷಿಣ ಭಾರತದ ಗಿರಿಧಾಮ  ಊಟಿ ಗೆ ರೈಲಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಕಾಳ ದಿಟ್ಟ  ವ್ಯಕ್ತಿತ್ವದಿಂದ  ಪ್ರಭಾವಿತನಾದ ರಘುವೀರ್ ತಾನೂ ಅದೇ ರೈಲಿನಲ್ಲಿ ಊಟಿಗೆ ಹೋಗುತ್ತಾನೆ. ರೈಲಿನಲ್ಲಿ ಅಲ್ಕಾ ಪರಿವಾರದವರು ಪ್ರಯಾಣಿಸುತ್ತಿದ್ದ  ಡಬ್ಬಿಯಲ್ಲಿ ರಘುವೀರ್ ಸಹಿತ ಟಿಕೆಟ್ ಪಡೆದು ಪ್ರಯಾಣಮಾಡುತ್ತಾನೆ.  ಒಂದು ಹಾಡನ್ನು ಹಾಡುವ ಸನ್ನಿವೇಶವಿದೆ. ವಯಸ್ಸಾದ ಅಲ್ಕಾ ತಂದೆ ಬೆನ್ನು ನೋವಿನಿಂದ ನರಳುತ್ತಿರುತ್ತಾರೆ.   ರಘುವೀರ್  ಅವರ ಬೆನ್ನಿಗೆ ಮಾಲಿಶ್  ಮಾಡುವ ಮೂಲಕ  ಶುಶ್ರುಷೆ ಮಾಡಿದಾಗ, ಅವರಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ಹೀಗೆ ನಿಧಾನವಾಗಿ  ಅಲ್ಕಾಗೆ ರಘುವೀರ್ ಬಗ್ಗೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ. ಅಲ್ಕಾಗೆ ಮನವೊಲಿಸಲು ರಘುವೀರ್ ಟಿಕೆಟ್ ಮಾರುವ  ಉದ್ಯೋಗ ಬಿಡುತ್ತಾನೆ. ತನ್ನ ಪಾರ್ಟ್ನರ್ ಗಳಿಗೆ ಒಳ್ಳೆಯ ಮಾರ್ಗದಲ್ಲಿ ಸಾಗಿ ನ್ಯಾಯಸಮ್ಮತವಾದ ಜೀವನವನ್ನು ಅನುಭವಿಸಲು ಬೇಡುತ್ತಾನೆ. ಅಡ್ವೊಕೇಟ್ ದೇಸಾಯಿಯವರಿಗೆ ತಾನು ಮೋಸದಿಂದ ಅಪಹರಿಸಿದ್ದ ೫ ಸಾವಿರ ರೂಪಾಯಿಗಳನ್ನು ವಾಪಸ್ ಕೊಡುತ್ತಾರೆ. ಈ ತರಹ ರಘುವೀರ್  ಒಬ್ಬ ಬದಲಾದ ವ್ಯಕ್ತಿಯಾಗಿ ಎಲ್ಲರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯ ಉಂಟುಮಾಡುತ್ತಾರೆ. ಈ ಮಧ್ಯೆ  ಅಲ್ಕಾ ಕೀಟಲೆಗಾಗಿ  ತಾನು ನಂದ ಅವರನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಾಗ ರಘುವೀರ್ ಗೆ  ಬೇಸರವಾಗುತ್ತದೆ. ನಿಧಾನವಾಗಿ  ಅಲ್ಕಾ ರಘು ವೀರ್  ಮನೆಗೆ ನೋಡಲು ಹೋದ ಸಮಯದಲ್ಲೇ  ಪೊಲೀಸ್ ಮನೆಗೆ ಬಂದು ರಘುವೀರ್ ನನ್ನ  ಅರೆಸ್ಟ್ ಮಾಡಿ  ಜೈಲಿಗೆ ಕಳಿಸುತ್ತಾರೆ. ಸೂಕ್ಷ್ಮವಾಗಿ ಈ ಗತಿವಿಧಿಗಳನ್ನು ಅವಲೋಕಿಸುತ್ತಿದ್ದ ಅಲ್ಕಾ, ಋಘುವೀರ್ ಒಳ್ಳೆಯ ವ್ಯಕ್ತಿ, ಕೆಟ್ಟಸಹವಾಸದಲ್ಲಿ ಬಿದ್ದು ಹಾಳಾಗಿದ್ದಾನೆ ಎಂದು ಅರ್ಥಮಾಡಿಕೊಂಡು ಅವನಿಗೆ ಸಹಾಯಮಾಡಲು ಮುಂದೆ ಬರುತ್ತಾಳೆ.  ಕೋರ್ಟ್  ರೂಮ್ ನಲ್ಲಿ  ರಘುವೀರ್ ಪರ-ವಿರುದ್ಧದ  ವಾಗ್ವಾದಗಳು ಬಹಳ ಉತ್ತಮ  ಗುಣಮಟ್ಟದಲ್ಲಿವೆ.  ಕಳ್ಳ ಸಂತೆಯಲ್ಲಿ ಸಿನಿಮಾ ಟಿಕೆಟ್ ಮಾರುವುದು ಅಪರಾಧ, ಮತ್ತು  ಹೀನ ಕೆಲಸವೆಂದು ಗೊತ್ತಾದಮೇಲೂ ಏಕೆ ಕೆಲವರು ಅದೇ  ಕೆಲಸಕ್ಕೆ ಮೊರೆಹೋಗುತ್ತಾರೆ ? ಎನ್ನುವ ಬಗ್ಗೆ ಬೆಳಕು ಚೆಲ್ಲುವ ವಿಚಾರ ಧಾರೆಗಳು ಬಹಳ ಅರ್ಥಗರ್ಭಿತವಾಗಿ ಮೂಡಿಬಂದಿವೆ. ನಿರ್ದೇಶನ ಮತ್ತು ಚಿತ್ರ ಕಥೆಯ ಜವಾಬ್ದಾರಿಯನ್ನು ವಿಜಯ್ ಆನಂದ್ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ರಘುವೀರನ ಮೇಲೆ ಅಪಾದಿಸಿದವರೆಲ್ಲ ಆತನು ಒಳ್ಳೆಯ ಮನುಷ್ಯ ಎಂದು ಮುಕ್ತವಾಗಿ ಹೇಳಿಕೆ ಕೊಟ್ಟಾಗ, ಅವನ ಮೇಲಿನ ಮೊಕದ್ದಮೆ ರದ್ದಾಗುತ್ತದೆ. ಅಡ್ವೊಕೇಟ್ ದೇಸಾಯಿಯವರೇ ರಘುವೀರ್ ಪರವಾಗಿ ವಾದಮಾಡಿ ಮೊಕದ್ದಮೆಯನ್ನು ಗೆಲ್ಲಿಸುತ್ತಾರೆ.  ಫಿಲಂ ನ ಕೊನೆಯ ಭಾಗದಲ್ಲಿ ಕೊನೆಯಲ್ಲಿ ಪ್ರೇಮಿಗಳಿಬ್ಬರೂ ಜಿಡಿ-ಜಿಡಿ- ಮಳೆಯಲ್ಲಿ  ಕೊಡೆಯನ್ನು ಹಿಡಿದು  ನಿಧಾನವಾಗಿ ರಸ್ತೆಯಲ್ಲಿ ನಿರ್ಗಮಿಸುವ ದೃಷ್ಯ ನೋಡುಗರ ಮನಕಲಕುತ್ತದೆ.  'ರಿಂ ಜಿಮ್ ಕೆ ತರಾನೇ' ಹಾಡಿನಿಂದ ಚಿತ್ರ ಸುಖಾಂತ್ಯದಲ್ಲಿ  ಮುಗಿಯುತ್ತದೆ
 
ಮದ್ರಾಸ್ ನಿಮ್ದ ಪ್ರಕಟಿತ  ಹಿಂದೂ ಪತ್ರಿಕೆಯ ಇಂಗ್ಲಿಷ್ ವಿಭಾಗದ ಆವೃತ್ತಿಯ ಸಿನಿ-ವಿಶ್ಲೇಷಕ ವಿಜಯ್ ಲೋಕಪಲ್ಲಿ "ದೋ ಕಾ ಚಾರ್, ಪಾಂಚ್ ಕಾ ದಸ್" ಎಂಬ ಶೀರ್ಷಿಕೆಯಲ್ಲಿ ಕಾಲಾ ಬಜಾರ್ ಚಿತ್ರದಬಗ್ಗೆ ಬಹಳ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ೮ ಹಾಡುಗಳಿರುವ ಈ ಚಿತ್ರದಲ್ಲಿ ಎಸ್. ಡಿ. ಬರ್ಮನ್ದಾ ರವರ ಸಂಗೀತಕ್ಕೆ ಮೊಹಮದ್ ರಫಿ, ಮನ್ನಾಡೆ, ಗೀತಾ ದತ್, ಸುಮನ್ ಕಲ್ಯಾಣ್ ಪುರ್, ಮತ್ತು ಆಶಾ ಬೋನ್ಸ್ಲೆ ಹಾಡಿದ್ದಾರೆ. 
 
ಕಾಲಾ ಬಾಜಾರ್ ಚಿತ್ರ ಗೀತೆಗಳನ್ನು ಹಾಡಿದವರ ಹೆಸರುಗಳು :
 
೧. ಖೋಯ ಖೋಯ ಚಾಂದ್, -ಮೊಹಮ್ಮದ್ ರಫಿ 
೨. ತೇರಿ ಧೂಮ್ ಹರ್ ಕಹಿನ್ -ಮೊಹಮ್ಮದ್ ರಫಿ 
೩. ಅಪ್ನೀ ತೊ  ಹರ್ ಆಹ್ ಏಕ್ ತೂಫಾನ್ ಹೈ -ಮೊಹಮ್ಮದ್ ರಫಿ 
೪.ರಿಮ್ ಜಿಮ್ ಕೆ ತರಾನೇ, ಲೇಕೆ ಆಯೀ ಬರ್ಸಾತ್ -ಗೀತಾ ದತ್, ಮೊಹಮ್ಮದ್ ರಫಿ 
೫. ನಾ ಮೈನೆ ಧಾನ್ ಛಾಹೂ ನ ರತನ್ ಚಾಹೂ ಮೈ -ಗೀತಾ ದತ್,ಸುಧಾ ಮಲ್ಹೋತ್ರ 
೬. ಸಾಂಜ್ ಧಲಿ ದಿಲ್ ಕಿ ಲಗಿ ಥಕ್ ಚಲಿ  ಪುಕಾರ್ ಕೆ ಆಜಾ ಆಜಾ, -ಆಶಾ ಬೋನ್ಸ್ಲೆ, ಮನ್ನಾಡೆ 
೭. ಸಂ ಭಾಲೊ ಸಂ ಭಾಲೊ ಅಪ್ನಾ ದಿಲ್ -ಆಶಾ ಬೋನ್ಸ್ಲೆ 
೮. ಸಚ್  ಹುಯೆ ಸಪ್ನೆ ತೆರೆ -ಆಶಾ ಬೋನ್ಸ್ಲೆ
 
ಸೌಜನ್ಯತೆ :    ೭೦ ಎಂ. ಎಂ. ವಿತ್ ರಾಹುಲ್,   ಆರ್ಟ್ ಡೆಕೊ, ಗೂಗಲ್ ಫೋಟೋ, ಮತ್ತಿತರ ಮೂಲಗಳಿಂದ .  
Rating
Average: 4 (1 vote)