ದೇವ ದರ್ಶನದ ಅನುಭವ (ಶ್ರೀ ನರಸಿಂಹ 57)
ಕಣ್ಣಿಗೆ ಕಾಣನು, ಸ್ಪರ್ಶಕೆ ಸಿಲುಕನು ದೇವನೆನದಿರು
ಅವನಿರುವಿಕೆಯನೆ ಸಂಶಯದಲಿ ನೀ ಜರಿಯದಿರು
ದೇವನಿರುವಿಕೆ ಕಂಡವರಾರಿಹರೆಂದು ನೀ ಕೇಳದಿರು
ವೇಧ,ಪುರಾಣಗಳು ಬರಿಯ ಕಟ್ಟು ಕಥೆಗಳೆನ್ನದಿರು
ಕಂಡು,ಮುಟ್ಟಿರುವೆಯೇನು ನಿನ್ನ ಪೂರ್ವಜರ ನೀನು
ನಂಬುವುದಿಲ್ಲವೆ ನೀ ಕಂಡು,ಮುಟ್ಟಿದವರ ಮಾತನು
ಸಾಧಕರ ಅನುಭವದ ನುಡಿಗಳಂತೆ,ನೀ ನಂಬಬೇಕು
ಸಾಧನೆ ಮಾಡಿ ನೀ ದೈವಾನುಭವವ ಪಡೆಯಬೇಕು
ಮನಸಿನ ನಂಬಿಕೆಯೆಂಬುದದು ಸಾದನೆಗೆ ಬಹು ದೊಡ್ಡ ಶಕ್ತಿ
ನೀಡುವನು ದರ್ಶನಾನುಭವವ ಇಡು ಶ್ರೀ ನರಸಿಂಹನಲಿ ಭಕ್ತಿ
Rating
Comments
ಆತ್ಮೀಯ ಸತಿಶರೆ,
ಆತ್ಮೀಯ ಸತಿಶರೆ,
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ. ಕಂಬದಲೋ ಬಿಂಬದಲೋ ದರುಶನ.........ಎನ್ನುವಂತೆ ಅವರವರ ಭಾವಕ್ಕೆ ತಕ್ಕಂತೆ ಭಗವಂತನ ದರುಶನ. ಉತ್ತಮ ಪ್ರಸ್ತುತಿ. ಧನ್ಯವಾದಗಳು.
In reply to ಆತ್ಮೀಯ ಸತಿಶರೆ, by Prakash Narasimhaiya
ಧನ್ಯವಾದಗಳು ಪ್ರಕಾಶ್ ರವರೇ
ಧನ್ಯವಾದಗಳು ಪ್ರಕಾಶ್ ರವರೇ
....ಸತೀಶ್
ಚೆನ್ನಾಗಿದೆ, ಸತೀಶರೇ. ಪುರಾಣಗಳು
ಚೆನ್ನಾಗಿದೆ, ಸತೀಶರೇ. ಪುರಾಣಗಳು ಕಟ್ಟುಕಥೆಗಳು ಎಂಬುದು ನನ್ನ ಅನಿಸಿಕೆ. ಅದರ ಉದ್ದೇಶ ಒಳ್ಳೆಯದು - ಜನರನ್ನು ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು!
In reply to ಚೆನ್ನಾಗಿದೆ, ಸತೀಶರೇ. ಪುರಾಣಗಳು by kavinagaraj
ಧನ್ಯವಾದಗಳು ನಾಗರಾಜ್ ರವರೇ
ಧನ್ಯವಾದಗಳು ನಾಗರಾಜ್ ರವರೇ
.....ಸತೀಶ್
"ಕಂಡು,ಮುಟ್ಟಿರುವೆಯೇನು ನಿನ್ನ
"ಕಂಡು,ಮುಟ್ಟಿರುವೆಯೇನು ನಿನ್ನ ಪೂರ್ವಜರ ನೀನು
ನಂಬುವುದಿಲ್ಲವೆ ನೀ ಕಂಡು,ಮುಟ್ಟಿದವರ ಮಾತನು
ಸಾಧಕರ ಅನುಭವದ ನುಡಿಗಳಂತೆ,ನೀ ನಂಬಬೇಕು
ಸಾಧನೆ ಮಾಡಿ ನೀ ದೈವಾನುಭವವ ಪಡೆಯಬೇಕು"
ಸತೀಶ್ಹ್ ಅವ್ರೇ
ನಿಮ್ಮ ಬರಹಗಳಲ್ಲಿ ಇದೇ ವಸಿ ದೀರ್ಘ ಆದದ್ದು..
ಆದ್ರೂ ಅರ್ಥಪೂರ್ಣವಾಗಿದೆ...
ಒಳಿತಾಗಲಿ..
\|
In reply to "ಕಂಡು,ಮುಟ್ಟಿರುವೆಯೇನು ನಿನ್ನ by venkatb83
ಅದರ ಅರ್ಥ ಪೂರ್ಣ ವಾಗಬೇಕಿದ್ದರಿಂದ
ಅದರ ಅರ್ಥ ಪೂರ್ಣ ವಾಗಬೇಕಿದ್ದರಿಂದ ಸ್ವಲ್ಪ ದೀರ್ಘ ಆಯಿತು ಅಷ್ಟೆ. ಧನ್ಯವಾದಗಳು ವೆಂಕಟೇಶ್ ರವರೇ
....ಸತೀಶ್